ಬೆಂಗಳೂರು: ರಾಜ್ಯ ಸರ್ಕಾರ ಐತಿಹಾಸಿಕ, ಧಾರ್ಮಿಕ, ಪೌರಾಣಿಕ ಹಾಗು ಸಾಂಸ್ಕೃತಿಕ ಹಿನ್ನೆಲೆಯಿರುವ ಮಹಾನುಭಾವರುಗಳ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದೆ. ಆದ್ರೆ, ಈ ಕಾರ್ಯಕ್ರಮಗಳ ಹೆಸರಲ್ಲಿ ತೆರಿಗೆದಾರರ ದುಡ್ಡು ಅಧಿಕಾರಿಗಳ ಜೇಬು ಸೇರುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಸಂಬಂಧ ಆರ್ಟಿಐ (ಮಾಹಿತಿ ಹಕ್ಕು ಕಾಯ್ದೆ) ಮೂಲಕ ಮರಿಲಿಂಗೇಗೌಡ ಮಾಲಿ ಪಾಟೀಲ್ ಅಂಕಿಅಂಶಗಳ ಸಮೇತ ಮಾಹಿತಿ ಸಂಗ್ರಹಿಸಿದ್ದಾರೆ. ಇದರ ಪ್ರಕಾರ, 2013ರಿಂದ 2018ವರೆಗೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಜಯಂತಿಗಳ ಹೆಸರಲ್ಲಿ ಒಟ್ಟು 17.65 ಕೋಟಿ ರೂ. ಖರ್ಚು ಮಾಡಿರುವುದು ಗೊತ್ತಾಗಿದೆ.
ಅಧಿಕಾರಿಗಳು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಜಯಂತಿ ಆಚರಣೆ ಮಾಡಿದ್ದೇವೆ ಎಂದು ದಾಖಲೆಯಲ್ಲಿ ತೋರಿಸಿದ್ದಾರೆ. ಆದ್ರೆ, ನಿಜವಾಗಿಯೂ ಈ ಜಯಂತಿ ಆಚರಣೆಗಳು ನಡೆದಿರುವ ಬಗ್ಗೆ ಅನುಮಾನ ಮೂಡಿದೆ ಎಂಬುದು ಅವರ ಆರೋಪ.
ಗಣ್ಯ ವ್ಯಕ್ತಿಗಳ ಜಯಂತಿ ಆಚರಣೆಗೆ ಸರ್ಕಾರ ಬಿಡುಗಡೆ ಮಾಡಿರುವ ಹಣವನ್ನು ಅಧಿಕಾರಿಗಳು ದುರ್ಬಳಕೆ ಮಾಡಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗೆ ಮರಿಲಿಂಗೇಗೌಡ ಮಾಲಿ ಪಾಟೀಲ್ ದೂರು ನೀಡಿದ್ದಾರೆ.
ಯಾವ ಜಯಂತಿಗೆ ಎಷ್ಟು ಖರ್ಚು?:
- ದೇವರ ದಾಸಿಮಯ್ಯ ಜಯಂತಿ- 69 ಲಕ್ಷ
- ಭಗವಾನ್ ಮಹಾವೀರ ಜಯಂತಿ- 69 ಲಕ್ಷ
- ಅಕ್ಕಮಹಾದೇವಿ ಜಯಂತಿ -10 ಲಕ್ಷ
- ಬಸವ ಜಯಂತಿ -69 ಲಕ್ಷ
- ಶಂಕರ ಜಯಂತಿ- 10 ಲಕ್ಷ
- ಭಗೀರಥ ಜಯಂತಿ- 69 ಲಕ್ಷ
- ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ -15 ಲಕ್ಷ
- ಶ್ರೀ ಕೃಷ್ಣ ಜಯಂತಿ- 69 ಲಕ್ಷ
- ಬ್ರಹ್ಮಶ್ರೀ ನಾರಾಯಣಗುರು ಜಯಂತಿ- 69 ಲಕ್ಷ
- ವಿಶ್ವಕರ್ಮ ಜಯಂತಿ- 69 ಲಕ್ಷ
- ಟಿಪ್ಪು ಸುಲ್ತಾನ್ ಜಯಂತಿ- 69 ಲಕ್ಷ
- ಕನಕ ಜಯಂತಿ- 69 ಲಕ್ಷ
- ಸಿದ್ದರಾಮ ಜಯಂತಿ- 69 ಲಕ್ಷ
- ಅಂಬಿಗರ ಚೌಡಯ್ಯ ಜಯಂತಿ- 69 ಲಕ್ಷ
- ವಾಲ್ಮೀಕಿ ಜಯಂತಿ- 69 ಲಕ್ಷ
- ಶಿವಾಜಿ ಜಯಂತಿ -69 ಲಕ್ಷ
- ದಲಿತ ವಚನಕಾರರ ಜಯಂತಿ- 69 ಲಕ್ಷ
- ಸರ್ವಜ್ಞ ಜಯಂತಿ -69 ಲಕ್ಷ
- ವಿವೇಕಾನಂದ ಜಯಂತಿ- 40 ಲಕ್ಷ