ಬೆಂಗಳೂರು: ಮಗು ಜನಿಸಿತೆಂದು ಸಂತೋಷ ಕೂಟ ಆಯೋಜಿಸಿದ್ದ ಯುವಕನ ಮೇಲೆ ಆತನ ಗೆಳೆಯರೇ ಹಲ್ಲೆ ನಡೆಸಿರುವ ಘಟನೆ ರಾಜಧಾನಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ತಿಂಗಳು 28ರಂದು ಘಟನೆ ನಡೆದಿತ್ತು. ರಂಗನಾಥ್ ಹಲ್ಲೆಗೊಳಗಾಗಿದ್ದು ಈ ಸಂಬಂಧ ಸ್ನೇಹಿತರಾದ ಮಧುಸೂದನ್, ಮನೋಜ್ ಕುಮಾರ್, ಪ್ರಸಾದ್ ಎಂಬುವರ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಂಗನಾಥ್ ಅಮೃತಹಳ್ಳಿ ನಿವಾಸಿಯಾಗಿದ್ದು, ಜೀವನಕ್ಕಾಗಿ ಸ್ವಿಗ್ಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಈತನ ಸ್ನೇಹಿತರು ಸಹ ಜೊಮಾಟೊದಲ್ಲಿ ಡೆಲಿವರಿಯಾಗಿ ಕೆಲಸ ಮಾಡುತ್ತಿದ್ದರು. ಒಂದೇ ಮನೆಯಲ್ಲಿ ಕಳೆದ ಐದಾರು ತಿಂಗಳಿಂದ ವಾಸ ಮಾಡುತ್ತಿದ್ದರು.
ಇದನ್ನೂ ಓದಿ: ಕೋರ್ಟ್ ಆವರಣದಲ್ಲೇ ಪಾತಕಿ ಮುಖ್ತಾರ್ ಅನ್ಸಾರಿ ಆಪ್ತನಿಗೆ ಗುಂಡಿಕ್ಕಿ ಹತ್ಯೆ: ವಕೀಲರ ವೇಷದಲ್ಲಿ ಬಂದು ಕೃತ್ಯ!
ಕಾಂಗ್ರೆಸ್‌ಗೆ ಬೈದಿದ್ದಕ್ಕೆ ಹಲ್ಲೆ: ಆರೋಪಿಗಳ ಪೈಕಿ ಮನೋಜ್ ಕುಮಾರ್ ನಾಲ್ಕು ವರ್ಷಗಳಿಂದ ರಂಗನಾಥ್ಗೆ ಸ್ನೇಹಿತನಾಗಿದ್ದ. ಇತ್ತೀಚೆಗೆ ರಂಗನಾಥ್ಗೆ ಗಂಡು ಮಗುವಾದ ಹಿನ್ನೆಲೆಯಲ್ಲಿ ಖುಷಿಗಾಗಿ ಎಣ್ಣೆ ಪಾರ್ಟಿ ಆಯೋಜಿಸಿದ್ದ. ಬಾರ್ಗೆ ತೆರಳಿ ಮದ್ಯ ಖರೀದಿಸಿ ಒಟ್ಟಿಗೆ ಸ್ನೇಹಿತರು ರೂಮ್ನಲ್ಲಿ ಪಾರ್ಟಿ ಮಾಡಿದ್ದಾರೆ. ಸಂಭ್ರಮದಲ್ಲಿ ರಾಜಕೀಯ ವಿಚಾರ ಮುನ್ನೆಲೆಗೆ ಬಂದಿತ್ತು. ಆರೋಪಿಗಳು ಕಾಂಗ್ರೆಸ್ ಪರವಾಗಿ ಮಾತನಾಡುತ್ತಿದ್ದರು. ಇದನ್ನು ವಿರೋಧಿಸಿದ ರಂಗನಾಥ್ ಬಿಜೆಪಿ ಪರವಾಗಿ ಮಾತನಾಡಿ ಕಾಂಗ್ರೆಸ್‌ಗೆ ಬೈದಿದ್ದಾನೆ. ಈ ವಿಚಾರಕ್ಕಾಗಿ ಪರಸ್ಪರ ವಾದ, ಪ್ರತಿವಾದ ನಡೆದಿದೆ.
ಇದನ್ನೂ ಓದಿ: ನೈತಿಕ ಪೊಲೀಸ್ಗಿರಿ ಪ್ರಕರಣ: ಹಲ್ಲೆಗೊಳಗಾಗಿದ್ದ ಯುವಕನ ಸಹೋದರನಿಂದ ಪೊಲೀಸ್ ಕಮಿಷನರ್ಗೆ ದೂರು
ಆಕ್ರೋಶಗೊಂಡ ಆರೋಪಿಗಳು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಮದ್ಯದ ನಶೆಯಲ್ಲಿದ್ದ ರಂಗನಾಥ್ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಅಲ್ಲಿದ್ದ ಬಿಯರ್ ಬಾಟಲಿಯಿಂದ ಕುತ್ತಿಗೆ ಹೊಡೆದು ಎಸ್ಕೇಪ್ ಆಗಿದ್ದಾರೆ. ತೀವ್ರ ರಕ್ತಸ್ರಾವಗೊಂಡಿದ್ದ ರಂಗನಾಥ್ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆದ ಬಳಿಕ ದೂರು ನೀಡಿದ ಮೇರೆಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.
ನಾಲ್ವರು ಆರೋಪಿಗಳ ಅರೆಸ್ಟ್: ಮೈಸೂರಿನ ನಂಜನಗೂಡಿನ ನೀಲಕಂಠ ನಗರದಲ್ಲಿ ಭಾನುವಾರ ಸಂಜೆ ಯುವಕನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ ಪ್ರಕರಣದ ಹಿನ್ನೆಲೆಯಲ್ಲಿ ಐವರ ವಿರುದ್ಧ ನಂಜನಗೂಡು ನಗರ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಪೊಲೀಸರು ನಾಲ್ವರು ಆರೋಪಿಗಳನ್ನು ಅರೆಸ್ಟ್ ಮಾಡಿ, ವಿಚಾರಣೆ ಆರಂಭಿಸಿದ್ದಾರೆ.
ಏನಿದು ಪ್ರಕರಣ?: ಮೈಸೂರಿನ ಸರ್ಕಲ್ನಲ್ಲಿ ಜೂನ್ 4ರಂದು ಸಂಜೆ ಸ್ಥಳೀಯ ಯುವಕರ ಗುಂಪೊಂದು ಸ್ನೇಹಿತನೊಬ್ಬನ ಜನ್ಮದಿನ ಆಚರಿಸುತ್ತಿತ್ತು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ಮತ್ತೊಂದು ಯುವಕರ ಗುಂಪು, ಪ್ರಸಾದ್ ಎನ್ನುವ ಯುವಕನಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿ ಪರಾರಿಯಾಗಿತ್ತು. ಆರೋಪಿಗಳನ್ನು ಬಂಧಿಸಲು ಸ್ಥಳೀಯರು ಸೋಮವಾರ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ: ಐಫೋನ್ಗಳೇ ಇವರ ಟಾರ್ಗೆಟ್; ಒಂಟಿಯಾಗಿ ಓಡಾಡುವವರ ಸುಲಿಗೆ ಮಾಡುತ್ತಿದ್ದ ಆರೋಪಿಗಳ ಬಂಧನ
ಇದನ್ನೂ ಓದಿ: ಮಹಿಳಾ ಹಾಸ್ಟೆಲ್‌ನಲ್ಲಿ ನಗ್ನ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಶವ ಪತ್ತೆ; ಶಂಕಿತ ಆರೋಪಿ ಆತ್ಮಹತ್ಯೆ