ETV Bharat / state

ಬೆಂಗಳೂರು: ಕದ್ದ ಬೈಕ್​ನಲ್ಲಿ ಹಾಡಹಾಗಲೇ ಸುಲಿಗೆ.. ಇಬ್ಬರು ಕುಖ್ಯಾತ ಸುಲಿಗೆಕೋರರ ಬಂಧನ

ಮಾರಕಾಸ್ತ್ರ ತೋರಿಸಿ ಜನರಿಗೆ ಬೆದರಿಸಿ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರು ಜೆ.ಪಿ ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು
author img

By ETV Bharat Karnataka Team

Published : Aug 24, 2023, 7:03 PM IST

ಬೆಂಗಳೂರು: ಕದ್ದ ಬೈಕ್​ನಲ್ಲಿ ಹಾಡಹಗಲೇ ನಗರದಲ್ಲಿ ಮಾರಕಾಸ್ತ್ರ ತೋರಿಸಿ ಸುಲಿಗೆ ಮಾಡುತ್ತಿದ್ದ ಇಬ್ಬರು ಕುಖ್ಯಾತ ಸುಲಿಗೆಕೋರರನ್ನು ಜೆ ಸಿ ನಗರ ಪೊಲೀಸರು ಸೆರೆಹಿಡಿದಿದ್ದಾರೆ. ನೆಲಮಂಗಲದ ಇಮ್ರಾನ್ ಹಾಗೂ ಡಿ ಜೆ ಹಳ್ಳಿಯ ಆಸೀಫ್ ಬಂಧಿತರಾಗಿದ್ದು, ಒಂದು ಬೈಕ್ ಹಾಗೂ 14 ಮೊಬೈಲ್ ಫೋನ್​ಗಳನ್ನು ಜಪ್ತಿ ಮಾಡಲಾಗಿದೆ. ಹಲವು ವರ್ಷಗಳಿಂದ ಸಂಘಟಿತರಾಗಿ ಇಬ್ಬರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರು. ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕದ್ದು, ಜೆ ಸಿ ನಗರ, ಕೆ ಜಿ ಹಳ್ಳಿ, ಡಿ ಜೆ ಹಳ್ಳಿ ಸೇರಿ ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಹಾಡಹಾಗಲೇ ಸಾರ್ವಜನಿಕರಿಗೆ ಮಾರಕಾಸ್ತ್ರ ತೋರಿಸಿ ಹೆದರಿಸಿ ಅವರಿಂದ ಮೊಬೈಲ್ ಹಾಗೂ‌ ಹಣ ಸುಲಿಗೆ ಮಾಡುತ್ತಿದ್ದರು.

ಕೃತ್ಯವೆಸಗಿದ ಬಳಿಕ ಮೊಬೈಲ್ ಮಾರಾಟ ಮಾಡಿ‌ ಬಂದ ಹಣದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದರು.‌ ಇಮ್ರಾನ್ ವಿರುದ್ಧ 20 ಹಾಗೂ ಆಸೀಫ್ ವಿರುದ್ಧ 10 ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಇನ್ನು ಇತ್ತೀಚೆಗೆ ಜೆ ಸಿ ನಗರದ ವಿಲಿಯಂ ಸ್ಟೋರ್​ನಲ್ಲಿ ರಾಬರಿ ಮಾಡಿದ್ದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನ ಹೆಡೆಮುರಿ ಕಟ್ಟಿ ನ್ಯಾಯಾಂಗ ಬಂಧನಕ್ಕೆ‌‌ ಒಳಪಡಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜ್ ತಿಳಿಸಿದ್ದಾರೆ.

ಸಮಸ್ಯೆಗಳ ಆಲಿಸುತ್ತಿರುವ ಆಪ್​ ರಾಜ್ಯ ಉಪಾಧ್ಯಕ್ಷ

ಸರಣಿ ಕಳ್ಳರನ್ನು ಬಂಧಿಸಿ ನಿವಾಸಿಗಳಿಗೆ ರಕ್ಷಣೆ ನೀಡಿ: ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಬಿನ್ನಿಪೇಟೆಯಲ್ಲಿ ಹಾಡಹಗಲೇ ಸರಣಿ ಕಳ್ಳತನ ಮಾಡುತ್ತಿರುವ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು. ಮತ್ತೆಂದೂ ಕಳ್ಳತನವಾಗದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮೋಹನ್‌ ದಾಸರಿ ಆಗ್ರಹಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಮೋಹನ್‌ ದಾಸರಿ ನೇತೃತ್ವದ ಎಎಪಿ ತಂಡ ಜನರ ಸಮಸ್ಯೆಗಳನ್ನು ಆಲಿಸಿತು. ಬಳಿಕ ಸ್ಥಳೀಯ ನಿವಾಸಿಗಳ ಪರವಾಗಿ ಖುದ್ದಾಗಿ ಜೆಜೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿತು.

ತಿಂಗಳಿಗೆ ಕನಿಷ್ಠ 15 ಕಳ್ಳತನಗಳು ನಡೆಯುತ್ತಿವೆ. ಮೋಟಾರ್‌, ಬೈಕ್‌, ಸೈಕಲ್‌ ಸೇರಿದಂತೆ ಕೈಗೆ ಸಿಕ್ಕಿದ್ದನ್ನು ಎತ್ತಿಕೊಂಡು ಹೋಗುತ್ತಿದ್ದಾರೆ. ಮಹಿಳೆಯರು ಹಗಲು ಹೊತ್ತಲ್ಲೇ ಮನೆಯಲ್ಲಿರಲು ಭಯಪಡುವಂತಹ ವಾತಾವರಣ ಇಲ್ಲಿದೆ. ಗಾಂಜಾ ವ್ಯಸನಿಗಳು ಹೆಚ್ಚಾಗಿದ್ದಾರೆ. ಇಲ್ಲಿನ ಶಾಸಕ ಹಾಗೂ ಮಂತ್ರಿಯಾಗಿರುವ ದಿನೇಶ್‌ ಗುಂಡೂರಾವ್‌ ಅವರು ತಕ್ಷಣ ಈ ಬಗ್ಗೆ ಗಮನ ಹರಿಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಠಾಣೆಗೆ ದೂರು ನೀಡಿದ ಆಪ್​ ಮುಖಂಡರು
ಠಾಣೆಗೆ ದೂರು ನೀಡಿದ ಆಪ್​ ಮುಖಂಡರು

ಸುಮಾರು 25 ವರ್ಷಗಳಿಂದ ಜನಪ್ರತಿನಿಧಿಯಾಗಿ ಇಲ್ಲಿಂದ ಆಯ್ಕೆಯಾಗುತ್ತಿದ್ದೀರಿ. ಮಂತ್ರಿಗಳಾಗಿದ್ದೀರಿ. ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದಿರಿ. ಆದರೆ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಹಾಡಹಗಲೇ ನಡೆಯುತ್ತಿರುವ ಸರಣಿ ಕಳ್ಳತನದ ಬಗ್ಗೆ ಇದುವರೆಗೆ ಗಮನ ಹರಿಸಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಸಿಸಿಟಿವಿಗಳು ಕೆಲಸ ಮಾಡುತ್ತಿಲ್ಲ. ಪೊಲೀಸರು ಅನಿವಾರ್ಯವಾಗಿ ಖಾಸಗಿ ಸಿಸಿಟಿವಿಗಳ ಮೊರೆ ಹೋಗಬೇಕಿದೆ. ತಮ್ಮ ಕ್ಷೇತ್ರದ ಜನತೆಯ ಬಗ್ಗೆ ಯಾಕೆ ಇಷ್ಟೊಂದು ನಿರ್ಲಕ್ಷ್ಯ ತೋರುತ್ತಿದ್ದೀರಿ ಎಂದು ಹರಿಹಾಯ್ದರು.

ಜನ ಸಂಪರ್ಕ ಕೇಂದ್ರಕ್ಕೆ ವಿಷಯ ತಿಳಿಸಿ: ಸ್ಥಳೀಯರು ಜಾಗೃತರಾಗಬೇಕು ಹಾಗು ಯಾವುದೇ ಕಳ್ಳತನ ನಡೆದರೂ ತಕ್ಷಣ ಪೊಲೀಸರಿಗೆ ವಿಷಯ ತಿಳಿಸಬೇಕು. ಭಯಪಟ್ಟುಕೊಂಡು ಸುಮ್ಮನೆ ಕುಳಿತುಕೊಳ್ಳಬಾರದು. ನಮ್ಮ ಪಕ್ಷದ ಮುಖಂಡರಾದ ಪುಷ್ಪ ಕೇಶವ್‌ ಅವರ ಜನ ಸಂಪರ್ಕ ಕೇಂದ್ರವಿದೆ. ಅಲ್ಲಿಗೆ ನಿಮ್ಮ ಸಮಸ್ಯೆಗಳನ್ನು ತಿಳಿಸಿ. ನಾವು ನಿಮ್ಮ ಪರವಾಗಿ ನಿಲ್ಲುತ್ತೇವೆ ಎಂದು ಮೋಹನ್‌ ದಾಸರಿ ಸ್ಥಳೀಯರಿಗೆ ಅಭಯ ನೀಡಿದರು. ಇದೇ ವೇಳೆ ಸ್ಥಳೀಯರು ಸಮರ್ಪಕ ಸಿಸಿಟಿವಿ, ಬೀದಿದೀಪಗಳನ್ನು ಅಳವಡಿಸಬೇಕು. ಕಳ್ಳರಿಂದ ರಕ್ಷಣೆ ನೀಡಬೇಕು ಎಂದು ಕೋರಿದರು.

ಇದನ್ನೂ ಓದಿ: ಪುತ್ತೂರಿನಲ್ಲಿ ಚೂರಿಯಿಂದ ಇರಿದು ಯುವತಿಯ ಕೊಲೆ.. ಆರೋಪಿ ಯುವಕನ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.