ETV Bharat / state

ಮಲಗಿದ್ದ ತಂದೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದ ಮಗ; ಬೆಂಗಳೂರಿನಲ್ಲಿ ಪ್ರಕರಣ - ಈಟಿವಿ ಭಾರತ್​ ಕನ್ನಡ ನ್ಯೂಸ್​

ತಂದೆಯನ್ನು ಹತ್ಯೆಗೈದು ಬೇರೆಯವರ ಕೃತ್ಯವೆಂದು ಬಿಂಬಿಸಲು ಯತ್ನಿಸಿದ ಮಗನನ್ನು ಪೊಲೀಸರು ಬಂಧಿಸಿದ್ದಾರೆ.

ತಂದೆಯನ್ನೆ ಕೊಲೆ ಮಾಡಿದ ಮಗ
ತಂದೆಯನ್ನೆ ಕೊಲೆ ಮಾಡಿದ ಮಗ
author img

By

Published : Jun 15, 2023, 4:26 PM IST

Updated : Jun 15, 2023, 6:41 PM IST

ಪಶ್ಚಿಮ ವಿಭಾಗದ ಡಿಸಿಪಿ‌ ಲಕ್ಷ್ಮಣ್ ನಿಂಬರಗಿ ಪ್ರತಿಕ್ರಿಯೆ

ಬೆಂಗಳೂರು : ಮಗ ತನ್ನ ತಂದೆಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆಗೈದ ಘಟನೆ ಕಳೆದ ರಾತ್ರಿ ಮಾಗಡಿ ರಸ್ತೆಯ ಗೋಪಾಲಪುರದಲ್ಲಿ ನಡೆದಿದೆ. ಗಂಗರಾಜು (55) ಕೊಲೆಗೀಡಾದ ದುರ್ದೈವಿ. ಆರೋಪಿ ಪುತ್ರ ಚೇತನ್ (28)ನನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಸಂಪೂರ್ಣ ವಿವರ: ರಾತ್ರಿ ಅಂದಾಜು 2:30 ಗಂಟೆಯ ಸುಮಾರಿಗೆ ಮನೆಯಲ್ಲಿ ಇಬ್ಬರ ನಡುವೆ ಜಗಳವಾಗಿದೆ. ವಾಗ್ವಾದ ಅತಿರೇಕವಾಗಿದೆ. ಬಳಿಕ ಮನೆ ಹೊರಗಡೆ ಮಲಗಿದ್ದ ತಂದೆಯ ತಲೆ ಮೇಲೆ ಮಗ ಕಲ್ಲು ಎತ್ತಿ ಹಾಕಿದ್ದಾನೆ. ಘಟನೆಯ ನಂತರ ತಾನೇ ಆಸ್ಪತ್ರೆಗೆ ಕೊಂಡೊಯ್ದಿದ್ದಾನೆ. ಆಸ್ಪತ್ರೆಯಲ್ಲಿ ವೈದ್ಯರು ಗಂಗರಾಜು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ. ಶವವನ್ನು ಮನೆ ಬಳಿ ತಂದಿದ್ದ ಆರೋಪಿ, ತಂದೆ ಮನೆಯ ಮೇಲಿಂದ ಆಯತಪ್ಪಿ ಬಿದ್ದರೆಂದು ಕಥೆ ಕಟ್ಟಿದ್ದಾನೆ.

ಇದನ್ನೂ ಓದಿ : ಸಹೋದರರ ನಡುವೆ ಜಗಳ: ಬೆಂಗಳೂರಿನಲ್ಲಿ ಕುಡಿದ ನಶೆಯಲ್ಲಿ ಅಣ್ಣನ ಕೊಂದ ತಮ್ಮ

ಅಷ್ಟೇ ಅಲ್ಲದೇ, ತಂದೆಯನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಅಕ್ಕಪಕ್ಕ ಮನೆಯವರನ್ನು ವಿಚಾರಿಸಿದ್ದಾನೆ. ಮುಂಜಾನೆ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪೊಲೀಸರು ಅನುಮಾನಗೊಂಡು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಕೃತ್ಯ ಬಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪಶ್ಚಿಮ ವಿಭಾಗದ ಡಿಸಿಪಿ‌ ಪ್ರತಿಕ್ರಿಯೆ: ಪಶ್ಚಿಮ ವಿಭಾಗದ ಡಿಸಿಪಿ‌ ಲಕ್ಷ್ಮಣ್ ನಿಂಬರಗಿ ಮಾತನಾಡಿ, "ಬೆಳಗ್ಗೆ 7 ಗಂಟೆಯ ಸುಮಾರಿಗೆ ಸಾರ್ವಜನಿಕರು ಕೊಲೆ ನಡೆದಿದೆ ಎಂದು ಕರೆ ಮಾಡಿದ್ದರು. ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ನಮ್ಮ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ರಾತ್ರಿ 2.30 ರ ಸಮಯದಲ್ಲಿ ತಂದೆ- ಮಗನ ನಡುವೆ ಜಗಳವಾಗಿದ್ದು, ಆರೋಪಿ ತಂದೆಯನ್ನೇ ಹತ್ಯೆಗೈದಿರುವುದು ತಿಳಿದು ಬಂದಿದೆ. ತಂದೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕೊಂಡೊಯ್ದಾಗ ಸ್ವಲ್ಪ ಹೊತ್ತು ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆದರೆ ಅವರು ಅಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಆರೋಪಿಗೆ ಹೇಳಿದ್ದಾರೆ. ಶವವನ್ನು ಆತ ಮನೆ ಬಳಿ ತಂದಿದ್ದಾನೆ. ಆರೋಪಿ ಗುತ್ತಿಗೆ ಆಧಾರದಲ್ಲಿ ಸ್ವೀಪರ್ ಕೆಲಸ ಮಾಡುತ್ತಿದ್ದ. ಹತ್ಯೆಗೆ ಕಾರಣ ಏನು ಎಂಬುದು ತಿಳಿದಿಲ್ಲ. ಆರೋಪಿಯನ್ನು ವಿಚಾರಣೆ ಮಾಡಲಾಗುತ್ತಿದೆ" ಎಂದು ತಿಳಿಸಿದರು.

ಕುಡಿದ ನಶೆಯಲ್ಲಿ ಅಣ್ಣನನ್ನೇ ಕೊಂದ ತಮ್ಮ: ಕ್ಷುಲ್ಲಕ ಕಾರಣಕ್ಕೆ ಕುಡಿದ ನಶೆಯಲ್ಲಿ ಸಹೋದರರ ನಡುವೆ ಜಗಳ ಶುರುವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕದಿರಪ್ಪ ಬಡಾವಣೆಯಲ್ಲಿ ಜೂನ್​ 13 ರಂದು ಮಂಗಳವಾರ ನಡೆದಿತ್ತು. ಮನೆಯಲ್ಲಿದ್ದ ಚಾಕುವಿನಿಂದ ಅಣ್ಣನನ್ನೇ ತಮ್ಮ ಚಾಕುವಿನಿಂದ ಇರಿದು ಹತ್ಯೆಗೈದು ಪರಾರಿಯಾಗಿದ್ದ. ಕಾರ್ತಿಕ್ (28) ಕೊಲೆಯಾದ ದುರ್ದೈವಿಯಾಗಿದ್ದಾನೆ.

ಇದನ್ನೂ ಓದಿ : ಶಿವಮೊಗ್ಗದಲ್ಲಿ ಮಾರಾಕಾಸ್ತ್ರದಿಂದ ಕೊಚ್ಚಿ ಯುವಕನ‌‌ ಕೊಲೆ: ಪ್ರಮುಖ ಆರೋಪಿ ಬಂಧನ

Last Updated : Jun 15, 2023, 6:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.