ETV Bharat / state

Women Sucide: ಬೆಂಗಳೂರಿನಲ್ಲಿ ಲಖನೌ ಮೂಲದ ಮಹಿಳೆ ಮನನೊಂದು ಆತ್ಮಹತ್ಯೆ - ಅಂಬೇಡ್ಕರ್​ ಆಸ್ಪತ್ರೆ

ಲಕ್ನೋ ಮೂಲದ ಮಹಿಳೆಯೊಬ್ಬರು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Bangalore
ಲಕ್ನೋ ಮೂಲದ ಮಹಿಳೆ ಆತ್ಮಹತ್ಯೆ
author img

By

Published : Jun 23, 2023, 2:18 PM IST

ಬೆಂಗಳೂರು: ತಡರಾತ್ರಿ ಯಲಹಂಕ ನ್ಯೂಟೌನ್ ಠಾಣಾ ವ್ಯಾಪ್ತಿಯ ನಾಗೇನಹಳ್ಳಿಯ ಶ್ರೀರಾಮ್ ಸುಹಾನ ಅಪಾರ್ಟ್‌ಮೆಂಟ್​ನಲ್ಲಿ ಮಹಿಳೆಯೊಬ್ಬರು ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಲಕ್ನೋ ಮೂಲದ ಅಮೃತ ಶರ್ಮಾ (27) ಮೃತ ಮಹಿಳೆ. ನಿನ್ನೆ ರಾತ್ರಿ 10 ಗಂಟೆಯ ಸುಮಾರಿಗೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಅಮೃತಾ ಸಾವನ್ನಪ್ಪಿದ್ದಾರೆ.

ಲಖನೌ ಮೂಲದ ಅಮೃತಾಳಿಗೆ ಎರಡು ವರ್ಷದ ಹಿಂದೆ ವಿವಾಹವಾಗಿತ್ತು. ಪತಿ, ಪತ್ನಿ ಇಬ್ಬರೂ ಕೂಡ ನಾಗೇನಹಳ್ಳಿಯ ಶ್ರೀರಾಮ್ ಸುಹಾನ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದುಕೊಂಡು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ತನ್ನ ತಂದೆಯನ್ನು ಕಳೆದುಕೊಂಡು ನೊಂದಿದ್ದ ಅಮೃತಾ ಮಾನಸಿಕ ಖಿನ್ನತೆಗೊಳಗಾಗಿದ್ದರು. ಅಲ್ಲದೇ ಈ ಹಿಂದೆಯೂ ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದರು. ಇದೀಗ ನಿನ್ನೆ ಮತ್ತೊಮ್ಮೆ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವನ್ನಪ್ಪಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್​ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಲಖನೌದಿಂದ ಮೃತರ ತಾಯಿ ಆಗಮಿಸುತ್ತಿರುವುದಾಗಿ ಯಲಹಂಕ ನ್ಯೂ ಟೌನ್​ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬಾಡಿಗೆದಾರರ ಕಿರುಕುಳ ತಾಳಲಾರದೇ ಮನೆ ಯಜಮಾನಿ ಆತ್ಮಹತ್ಯೆ: ಮಗಳ ಸಾವಿನ ಸುದ್ದಿ ತಿಳಿದು ತಾಯಿಗೂ ಹೃದಯಾಘಾತ

ಒಂದೇ ಕುಟುಂಬದ ಮೂವರು ಆತ್ಮಹತ್ಯೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಚಾಮರಾಜನಗರ ತಾಲೂಕಿನ ಬೇಡರಪುರ ಗ್ರಾಮದಲ್ಲಿ ನಡೆದಿದೆ. ಆಸ್ತಿ ವಿವಾದದಿಂದ ಕಂಗೆಟ್ಟು ಗಂಡ- ಹೆಂಡತಿ ಹಾಗೂ ಮಗಳು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಪತಿ ಮಹಾದೇವಸ್ವಾಮಿ (42), ಪತ್ನಿ ಸವಿತಾ(33) ಹಾಗೂ ಮಗಳು ಸಿಂಚನಾ(15) ಎಂದು ಗುರುತಿಸಲಾಗಿದೆ.

ಮೃತರು ಡೆತ್​ನೋಟ್​ ಸಹ ಬರೆದಿಟ್ಟಿದ್ದು, ಅಕ್ಕ- ತಂಗಿಯರ ಹೆಸರು ಉಲ್ಲೇಖಿಸಿ ಇವರಿಗೆಲ್ಲಾ ಶಿಕ್ಷೆ ಆಗಬೇಕು ಎಂದು ಕೋರಿದ್ದಾರೆ. ಮಹಾದೇವಸ್ವಾಮಿ ಮೂಲತಃ ಕೃಷಿಕರಾಗಿದ್ದು, ಸವಿತಾ ಟೈಲರಿಂಗ್​ ಮಾಡುತ್ತಿದ್ದರಂತೆ. ಇವರಿಗೆ ಇಬ್ಬರು ಪುತ್ರಿಯರಿದ್ದು, ಓರ್ವ ಮಗಳು ಕಾಲೇಜು ವ್ಯಾಸಂಗ ಮಾಡುತ್ತಾ ತಾತನ ಮನೆಯಲ್ಲಿದ್ದಾಳೆ. ಕಿರಿಯ ಮಗಳು ಸಿಂಚನಾ 9ನೇ ತರಗತಿಯಲ್ಲಿ ಓದುತ್ತಿದ್ದು, ಅಪ್ಪ- ಅಮ್ಮನ ಜೊತೆಯೇ ಇದ್ದಳು. ಸದ್ಯಕ್ಕೆ ಇವರು ಮೂವರು ಕೂಡ ಸಾವಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ಜಿಲ್ಲಾ ಎಸ್​ಪಿ ಪದ್ಮಿನಿ ಸಾಹು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಶ್ರೀರಂಗಪಟ್ಟಣ ಬಳಿ ಹೃದಯವಿದ್ರಾವಕ ಘಟನೆ: ಇಬ್ಬರು ಮಕ್ಕಳ ಬರ್ಬರ ಹತ್ಯೆ, ಹೆಂಡ್ತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪತಿ ಎಸ್ಕೇಪ್

ಕನ್ಯೆ ಸಿಗದಿದ್ದಕ್ಕೆ ಆತ್ಮಹತ್ಯೆ: ಕನ್ಯೆ ಸಿಗದಿದ್ದಕ್ಕೆ ಮನನೊಂದು ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮಾಸಣಗಿ ಗ್ರಾಮದಲ್ಲಿ ನಡೆದಿದೆ. ಮಂಜುನಾಥ ನಾಗನೂರು ಆತ್ಮಹತ್ಯೆಗೆ ಶರಣಾದ ರೈತ. ಮಂಜುನಾಥನಿಗೆ ಕಳೆದ ಏಳೆಂಟು ತಿಂಗಳಿನಿಂದ ಹೆಣ್ಣು ಹುಡುಕುತ್ತಿದ್ದರಂತೆ. ಆದರೆ ರೈತ ಎನ್ನುವ ಕಾರಣಕ್ಕೆ ಹೆಣ್ಣು ಕೊಡಲು ನಿರಾಕರಿಸಿದ್ದಾರೆ. ನನ್ನಿಂದ ತಂದೆ ತಾಯಿಗೆ ತೊಂದರೆ ಎಂದು ಮಂಜುನಾಥ್​ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.