ETV Bharat / state

ನಕಲಿ ಸುಲಿಗೆ ಪ್ರಕರಣಕ್ಕೆ‌ ದೂರುದಾರನೇ ಸೂತ್ರಧಾರ.. ಇನ್ಶೂರೆನ್ಸ್ ಹಣದ ಆಸೆಗೆ 4 ಕೋಟಿ ಮೌಲ್ಯದ ಚಿನ್ನ ದರೋಡೆ ಕಥೆ ಕಟ್ಟಿದ್ದ ಜ್ಯುವೆಲ್ಲರಿ ಮಾಲೀಕ ಅರೆಸ್ಟ್

Bengaluru crime ಇನ್ಶೂರೆನ್ಸ್​ ಹಣವನ್ನು ಕ್ಲೇಮ್​ ಮಾಡಿಕೊಳ್ಳಲು ಪ್ಲಾನ್ ಮಾಡಿ, ಬೈಕ್​ನಲ್ಲಿ ಹೋಗುವಾಗ ಸುಲಿಗೆಕೋರರು 4 ಕೋಟಿ ಮೌಲ್ಯದ ಚಿನ್ನ ಕದ್ದಿದ್ದಾರೆ ಎಂದು ಸುಳ್ಳು ದೂರು ನೀಡಿದ್ದ ಜ್ಯುವೆಲ್ಲರಿ ಶಾಪ್ ಮಾಲೀಕನನ್ನು ಕಾಟನ್​ಪೇಟೆ ಪೊಲೀಸರು ಬಂಧಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ದಯಾನಂದ
ನಗರ ಪೊಲೀಸ್ ಆಯುಕ್ತ ದಯಾನಂದ
author img

By

Published : Jul 31, 2023, 3:39 PM IST

Updated : Jul 31, 2023, 4:33 PM IST

ಬೆಂಗಳೂರು : ಈ ನಕಲಿ ಸುಲಿಗೆ ಪ್ರಕರಣಕ್ಕೆ ಕಥೆ-ಚಿತ್ರಕಥೆ ನಿರ್ದೇಶನ ಎಲ್ಲವೂ ಈತನದ್ದೇ. ಅರ್ಥಾತ್ ದೂರುದಾರನೇ ಆರೋಪಿಯಾಗಿದ್ದಾನೆ.‌ ಸಿನಿಮಾ ಶೈಲಿಯಲ್ಲಿ ವ್ಯವಸ್ಥಿತ ಸಂಚು ರೂಪಿಸಿ, ಅಪರಾಧವೆಸಗಲು 20 ದಿನಗಳ ಕಾಲ ತರಬೇತಿ ನೀಡಿ ನಡೆದಿರುವ‌ ಅಪರಾಧ ಪ್ರಕರಣ ಇದಾಗಿದೆ. ಸಾಕ್ಷ್ಯಾಧಾರ ತೋರಿಸಿ ಎಂದು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಹೋಗಿ ಆರೋಪಿ ತಗಲಾಕಿಕೊಂಡಿದ್ದಾನೆ.

ಇನ್ಸೂರೆನ್ಸ್​​ ಹಣ‌ ಕ್ಲೇಮ್ ಮಾಡಿಕೊಳ್ಳಲು ಪಕ್ಕಾ ಪ್ಲಾನ್ ಮಾಡಿ, ಬೈಕ್​ನಲ್ಲಿ ಹೋಗುವಾಗ ಸುಲಿಗೆಕೋರರು 4 ಕೋಟಿ ಮೌಲ್ಯದ 3.780 ಕೆ.ಜಿ ಚಿನ್ನ ದೋಚಿದ್ದಾರೆ ಎಂದು ಸುಳ್ಳು ದೂರು ನೀಡಿದ್ದ ಜ್ಯುವೆಲ್ಲರಿ ಶಾಪ್ ಮಾಲೀಕನನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ಕೃತ್ಯವೆಸಗಲು ಬಳಸಿಕೊಂಡಿದ್ದ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ರಾಜಸ್ಥಾನ ಮೂಲದ ರಾಜು ಜೈನ್ ಬಂಧಿತ ಮಾಲೀಕ. ನಗರ್ತಪೇಟೆಯ ಕೇಸರ್ ಜ್ಯೂವೆಲ್ಲರ್​ ಶಾಪ್​​ನ ಮಾಲೀಕನಾಗಿದ್ದಾನೆ. ಜುಲೈ 12 ರಂದು ಸಂಜೆ 7.30ಕ್ಕೆ ಹೈದರಾಬಾದ್​​ಗೆ 3 ಕೆಜಿ 780 ಗ್ರಾಂ ಚಿನ್ನ ಕಳುಹಿಸಲು ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ತೆಗೆದುಕೊಂಡು ಹೋಗುವಾಗ ಮಾರ್ಕೆಟ್ ಮೇಲುಸೇತುವೆ ಬಳಿ‌ ಅಪರಿಚಿತರು ಹಿಂದಿನಿಂದ ಕಾಲಿನಿಂದ ಒದ್ದು ಬ್ಯಾಗ್​ನಲ್ಲಿದ್ದ ಚಿನ್ನಾಭರಣ ದೋಚಿದ್ದಾರೆ ಎಂದು‌ ಆರೋಪಿ ರಾಜು ಜೈನ್ ಕಾಟನ್ ಪೇಟೆ ಪೊಲೀಸರಿಗೆ ದೂರು ನೀಡಿದ್ದ.‌ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು.

ರಾಜು ಜೈನ್​ನಿಂದ ಎಲ್ಲ ಮಾಹಿತಿ ಪಡೆದುಕೊಂಡು ತನಿಖೆ ನಡೆಸಿದ‌ ಪೊಲೀಸರಿಗೆ ದೂರುದಾರನ ಹೇಳಿಕೆ, ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದರೂ ಪ್ರಯೋಜನವಾಗಿರಲಿಲ್ಲ. ತನ್ನ ಮೇಲೆ ಅನುಮಾನ ಬರದಿರಲು ನಾನಾ ತಂತ್ರಗಳನ್ನ ರೂಪಿಸಿಕೊಂಡಿದ್ದ ಜೈನ್, ಅಧಿಕಾರಿಗಳಿಂದ ಹಾಗೂ ಸಂಬಂಧಿಕರಿಂದ‌ ಫೋನ್ ಮಾಡಿಸಿ ಪೊಲೀಸರ ಮೇಲೆ‌ ಒತ್ತಡ ಹಾಕಿಸಿದ್ದ.

ಮೊಬೈಲ್ ಜಪ್ತಿ‌ ಮಾಡಿಕೊಂಡು ಪರಿಶೀಲನೆ: ತಾಂತ್ರಿಕ ಹಾಗೂ ವೈಜ್ಞಾನಿಕವಾಗಿ ತನಿಖೆ ನಡೆಸಿದರೂ ಪ್ರಯೋಜನವಾಗದ ಪರಿಣಾಮ, ವ್ಯೂಹ ರೂಪಿಸಿದ ಪೊಲೀಸರು ದೂರುದಾರ ಜೈನ್, ಚಿನ್ನ ಸಾಗಣೆ ಮಾಡುತ್ತಿದ್ದ ಇಬ್ಬರು ಕಾನೂನುಸಂಘರ್ಷಕ್ಕೆ ಒಳಗಾದ ಬಾಲಕರನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಮೊಬೈಲ್ ಜಪ್ತಿ‌ ಮಾಡಿಕೊಂಡು ಪರಿಶೀಲನೆ ವೇಳೆ ಅದೊಂದು ವಾಟ್ಸಾಪ್ ಕರೆ ದೂರುದಾರರ ಅಸಲಿ ಬಣ್ಣ ಬಯಲಾಗುವಂತೆ ಮಾಡಿದೆ.

ಇಬ್ಬರು ಬಾಲಕರನ್ನ‌ ಕೃತ್ಯಕ್ಕೆ ಬಳಸಿಕೊಂಡ ಆರೋಪಿ: ಹಣ ಸಂಪಾದನೆಗಾಗಿ ವಾಮಮಾರ್ಗದ ಮೊರೆ ಹೋಗಿದ್ದ ರಾಜು‌ ಜೈನ್, ಚಿನ್ನಾಭರಣ ಕಳ್ಳತನವಾದರೆ ಸುಲಭವಾಗಿ ಇನ್ಶೂರೆನ್ಸ್ ಕ್ಲೇಮ್ ಮಾಡಿಕೊಳ್ಳಬಹುದು ಎಂದು ಭಾವಿಸಿದ್ದ.‌ ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ಉದ್ದೇಶಪೂರ್ವಕವಾಗಿಯೇ ಇಬ್ಬರು ಬಾಲಕರನ್ನು ಕೃತ್ಯಕ್ಕೆ ಬಳಸಿಕೊಂಡಿದ್ದ. ಸುಲಿಗೆಯಾಗಿದೆ ಎಂದು ಪೊಲೀಸರನ್ನು ನಂಬಿಸಲು 20 ದಿನಗಳ ಹಿಂದೆ‌ಯೇ ಪ್ಲಾನ್ ಮಾಡಿದ್ದ.

ಹುಡುಗರಿಗೆ ತರಬೇತಿ ನೀಡಿದ್ದ: ಎಲ್ಲೆಲ್ಲಿ ಸಿಸಿಟಿವಿಗಳಿವೆ ಎಂಬುದನ್ನು ಪರಿಶೀಲನೆ ಕೂಡ ಮಾಡಿದ್ದ. ಹೇಗೆ ಅಪರಾಧ ಎಸಗಬೇಕು ? ಯಾವ ರೀತಿ ತಂತ್ರ ರೂಪಿಸಿದರೆ ಪೊಲೀಸರು ನಂಬುತ್ತಾರೆ? ಪೊಲೀಸರು ಪ್ರಶ್ನಿಸಿದರೆ ಹೇಗೆ ವರ್ತಿಸಬೇಕು? ಏನು ಹೇಳಬೇಕು ಎಂಬುದರ ಬಗ್ಗೆ ಹುಡುಗರಿಗೆ ತರಬೇತಿ ನೀಡಿದ್ದ. ಇದರಂತೆ ಮಾರ್ಕೆಟ್ ಮೇಲ್ಸೆತುವೆ ಬಳಿ ಸಿಸಿಟಿವಿ ಇಲ್ಲದಿರುವುದನ್ನ ಖಚಿತಪಡಿಸಿಕೊಂಡು ಅಲ್ಲೇ ಸುಲಿಗೆಯಾಗಿದೆ ಎಂದು ಪೊಲೀಸರಿಗೆ ಕಥೆ ಕಟ್ಟಿದ್ದ.

ಕಾಟನ್ ಪೇಟೆ ಪೊಲೀಸರಿಗೆ ದೂರು: ಬೈಕ್​ನಲ್ಲಿಟ್ಟಿದ್ದ ಹಣವನ್ನ ಖುದ್ದು ಜೈನ್ ಘಟನಾ ಸ್ಥಳಕ್ಕೆ ತೆರಳಿ ಸುಲಿಗೆಯಾಗಿದೆ ಎಂದು ಬಿಂಬಿಸಿಕೊಂಡಿದ್ದ‌. ಅನಂತರ ಚಿನ್ನವಿರುವ ಬ್ಯಾಗ್​ಅನ್ನು ತಮ್ಮ‌ ಸ್ಕೂಟರ್ ಡಿಕ್ಕಿಯಲ್ಲಿ‌ ಇಟ್ಟುಕೊಂಡು ಕಾಟನ್ ಪೇಟೆ ಪೊಲೀಸರಿಗೆ ದೂರು ನೀಡಿದ್ದ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದ್ದಾರೆ.

ಇದನ್ನೂ ಓದಿ: Drugs: ಬೆಂಗಳೂರಿನಲ್ಲಿ 1 ತಿಂಗಳಲ್ಲಿ ₹18 ಕೋಟಿ ಮೌಲ್ಯದ 1,785 ಕೆಜಿ ಡ್ರಗ್ಸ್ ಜಪ್ತಿ: 487 ಆರೋಪಿಗಳು ಸೆರೆ

Last Updated : Jul 31, 2023, 4:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.