ಬೆಂಗಳೂರು: ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಮಗಳು ಗೀತಾಂಜಲಿ ವಿವಾಹವನ್ನು ಅಜಯ್ ಜೊತೆ ಮಾಡಿ, ಕೆಲವು ದಿವಸಗಳ ರೆಸ್ಟ್ ನಂತರ ಚಿತ್ರೀಕರಣಕ್ಕೆ ವಾಪಸ್ ಆಗಿದ್ದಾರೆ. ಆದರೆ, ಕ್ರೇಜಿ ಸ್ಟಾರ್ ಎಂಟ್ರಿ ಕೊಟ್ಟಿರೊದು ಅವರು ಅರ್ಧದಲ್ಲಿ ನಿಲ್ಲಿಸಿರುವ ‘ರಾಜೇಂದ್ರ ಪೊನ್ನಪ್ಪ’ ಸಿನಿಮಾ ಮೂಲಕ ಅಲ್ಲ. ಆದರೆ, ‘ದೃಶ್ಯ 2’ ಎಂದು ತಾತ್ಕಾಲಿಕವಾಗಿ ನಾಮಕರಣ ಮಾಡಿರುವ ಸಿನಿಮಾ ಮೂಲಕ.
ನಿನ್ನೆ ಕೊಡಗಿನ ಶುಂಟಿಕೊಪ್ಪದಲ್ಲಿ ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಸಿನಿಮಾ ಸೆಟ್ಟೇರಿದ್ದು. 20 ದಿವಸಗಳ ಕಾಲ ಅಲ್ಲಿಯೇ ಚಿತ್ರೀಕರಣ ಸಹ ಪ್ರಾರಂಭ ಆಗಿದೆ. ಇದು ಬೆಂಗಳೂರು ಮೂವೀಸ್ ಸಿನಿಮಾವಾಗಿದ್ದು, ಅಜಿತ್ ಈ ಚಿತ್ರದ ನಿರ್ದೇಶಕರು, ಮ್ಯಾಥೀವ್ ಮೊದಲ ಬಾರಿಗೆ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯಕ್ಕೆ ಈ ಸಿನಿಮಾಕ್ಕೆ ಪ್ರೊಡಕ್ಷನ್ ನಂ 3 ಎಂದು ಕರೆಯಲಾಗುತ್ತಿದ್ದು, ಪಿ ಕೆ ಎಚ್ ದಾಸ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಶ್ರೀನಿವಾಸಪ್ರಭು, ಲಿಖಿತ, ಮೋನಿಶ, ಯತಿರಾಜ್, ಡಾ ನಾಗೇಶ್, ಕೃಷ್ಣ ಮೋಹನ್ ಹಾಗೂ ಇತರರು ತಾರಗಣದಲ್ಲಿದ್ದಾರೆ.
ಕ್ರೇಜಿ ಸ್ಟಾರ್ ‘ರಾಜೇಂದ್ರ ಪೊನ್ನಪ್ಪ’ –
ಪೊಲೀಸ್, ಪಾಲಿಟಿಕ್ಸ್, ಪವರ್ ಸುತ್ತ ಹೆಣೆಯಲಾದ ಈ ಕಥೆಯಲ್ಲಿ ವಿ ರವಿಚಂದ್ರನ್ ಕ್ರಿಮಿನಲ್ ಲಾಯರ್ ಆಗಿದ್ದಾರೆ. ಈ ಚಿತ್ರಕ್ಕೆ ಮತ್ತೆ ಚಾಲನೆ ಸಿಗುವುದು ಯಾವಾಗ, ಅದರ ಬಿಡುಗಡೆ ಯಾವಾಗ ಎಂದು ಕ್ರೇಜಿ ಸ್ಟಾರ್ ಅಭಿಮಾನಿಗಳು ಕಾಯುತ್ತಿದ್ದಾರೆ. ಅದಕ್ಕೆ ಕಾರಣ ವಿ ರವಿಚಂದ್ರನ್ ಅವರೇ ‘ರಾಜೇಂದ್ರ ಪೊನ್ನಪ್ಪ’ ಗೆ ನಿರ್ದೇಶನ, ಕಥೆ, ಚಿತ್ರಕಥೆ ಮತ್ತು ಸಂಗೀತ ನೀಡಿದ್ದಾರೆ.
‘ರವಿ ಚಂದ್ರ’ ರವಿಚಂದ್ರನ್ ಹಾಗೂ ಉಪೇಂದ್ರ ಅಭಿನಯದ ಸಿನಿಮಾ ಬಹುತೇಕ ಸಿದ್ದವಾಗಿದೆ. ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಅವರ ‘ದಶರಥ’ ನಿರ್ದೇಶಕ ಎಂ ಎಸ್ ರಮೇಶ್ ಅವರು ಸಿನಿಮಾ ಸಿದ್ದಮಾಡಿಕೊಂಡು ಬಿಡುಗಡೆ ದಿನಾಂಕಕ್ಕಾಗಿ ಕಾಯುತ್ತಿದ್ದಾರೆ.