ಬೆಂಗಳೂರು: ಅದೆಷ್ಟೇ ಜಾಗೃತಿ ಮೂಡಿಸಿದರೂ ಪಟಾಕಿ ಸಿಡಿತ ಪ್ರಕರಣಗಳು ಮಾತ್ರ ಕಡಿಮೆ ಆಗಿಲ್ಲ. ಬೆಂಗಳೂರು ಒಂದರಲ್ಲೇ ಮೂರು ದಿನಗಳಲ್ಲಿ 97 ಮಂದಿ ಬಾಳಿನಲ್ಲಿ ಬೆಳಕಿನ ದೀಪಾವಳಿ ಕತ್ತಲು ತಂದಿದೆ.
ಯಾವ್ಯಾವ ಆಸ್ಪತ್ರೆಗಳಲ್ಲಿ ಎಷ್ಟು ಪಟಾಕಿ ಸಿಡಿತ ದುರಂತ ಪ್ರಕರಣ?
- ಮಿಂಟೋ ಕಣ್ಣಿನ ಆಸ್ಪತ್ರೆ- 23
- ನಾರಾಯಣ ನೇತ್ರಾಲಯ- 16
- ನೇತ್ರಾಧಾಮ- 05
- ಮೋದಿ ಕೇರ್- 4
- ಶೇಖರ ಆಸ್ಪತ್ರೆ- 02
- ಶಂಕರ ಕಣ್ಣಿನ ಆಸ್ಪತ್ರೆ - 15
ನಿನ್ನೆ ಸೋಮವಾರ ರಾತ್ರಿ 9ರಿಂದ ಮಂಗಳವಾರ ಅಂದರೆ ಈವರೆಗೆ ಒಂದೇ ದಿನ 64 ಮಂದಿ ಪಟಾಕಿ ಸಿಡಿತಕ್ಕೆ ಒಳಗಾಗಿದ್ದು, ಹಲವರ ಬಾಳು ಕತ್ತಲೆಲ್ಲೇ ಕಳೆಯುವಂತಾಗಿದೆ.