ETV Bharat / state

ಪಾಲಿಕೆಯಿಂದ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದ್ದರೂ ಮೇಲ್ಸೇತುವೆ ರಸ್ತೆಗಳಲ್ಲಿ ಬಿರುಕು - Reconstruction of flyover roads in bengaluru

ವಾಹನ ಸಂಚಾರ ಹೆಚ್ಚಾದ ಹಿನ್ನೆಲೆ ಸಂಚಾರ ದಟ್ಟನೆ ನಿಯಂತ್ರಣ ಮಾಡಲು ಸರ್ಕಾರ ಮೇಲುಸೇತುವೆ ರಸ್ತೆಗಳ ಪುನರ್​ ನಿರ್ಮಾಣ ಕಾರ್ಯವನ್ನು ಕೈಗೊಂಡಿದೆ. ಹಲವೆಡೆ ನಿರ್ಮಾಣ ಕಾರ್ಯ ಮುಗಿದಿದ್ದು, ಕೆಲ ಮೇಲುರಸ್ತೆಗಳು ಮತ್ತ ಪಿಲ್ಲರ್‌ಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು ಜನರು ಆಕ್ರೋಶ ವ್ಯಕ್ತಪಡಿಸದ್ದಾರೆ.

KN_BNG
ಮೇಲ್ಸೇತುವೆ ರಸ್ತೆಗಳಲ್ಲಿ ಬಿರುಕು
author img

By

Published : Dec 1, 2022, 3:47 PM IST

ಬೆಂಗಳೂರು: ನಗರದ ಸಂಚಾರದಟ್ಟಣೆ ನಿಯಂತ್ರಿಸುವ ಸಲುವಾಗಿ ಸರ್ಕಾರ ನಗರದಲ್ಲಿ ಮೇಲ್ಸೇತುವೆ ರಸ್ತೆಗಳ ಪುನರ್ ನಿರ್ಮಾಣ ಕಾರ್ಯವನ್ನು ಕೈಗೊಂಡಿದ್ದು, ಪ್ರಸ್ತುತ ಕೆಲ ಮೇಲ್ಸೇತುವೆ ರಸ್ತೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.

ಹಲವೆಡೆ ಮೇಲುಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೂ ಹಲವೆಡೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆದರೆ, ಈ ಸ್ಥಳಗಳಲ್ಲಿ ಜನರಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ. ಕೆಲ ಮೇಲುರಸ್ತೆಗಳ ಪಿಲ್ಲರ್‌ಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಜನ ಮೇಲು ರಸ್ತೆಗಳ ಮೇಲೆ, ಅಕ್ಕ ಪಕ್ಕ ನೋಡಿಕೊಂಡು ಸಂಚರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಳಪೆ ಗುಣಮಟ್ಟದ ಕಾಮಗಾರಿ ಮಾಡಲಾಗಿದೆ ಎನ್ನುವ ಆರೋಪಗಳೂ ಕೇಳೀಬರುತ್ತಿದೆ.

ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಲಾದ ಎರಡು ಮೇಲುರಸ್ತೆಗಳ ಪಿಲ್ಲರ್‌ಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಈ ಬಿರುಕುಗಳನ್ನು ಮುಚ್ಚಿದ್ದರೂ ಕೂಡ ಈಗಲೋ ಆಗಲೋ ಎನ್ನುವಂತಿರುವ ಅದರ ಅವಸ್ಥೆಯನ್ನು ಕಂಡು ಜನ ಭಯದಿಂದ ಓಡಾಡುತ್ತಿದ್ದಾರೆ.

ಯಾವುದೇ ಕ್ರಮ ಕೈಗೊಳ್ಳದ ಪಾಲಿಕೆ: ಪಾಲಿಕೆ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಸಾರ್ವಜನಿಕರು ದೂರು ಸಲ್ಲಿಸಿದ್ದರೂ ಯಾವುದೇ ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ಧೋರಣೆ ತೋರಿಸುತ್ತಿದ್ದು, ಎರಡು ಮೇಲುರಸ್ತೆಗಳ ವಾಹನ ದಟ್ಟಣೆ ಸರಾಗಗೊಳಿಸುವ ಸಲುವಾಗಿ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಮೇಲುರಸ್ತೆ ನಿರ್ಮಾಣ ಮಾಡಲಾಗಿದೆ. ಪಾಲಿಕೆ ಯೋಜನೆಯ 1 ಮತ್ತು 2 ಹಂತಗಳನ್ನು ಪೂರ್ಣಗೊಳಿಸಿದೆ. ಹಂತ 3 ಮಾರ್ಚ್ 31ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

2019 ರಲ್ಲಿ ಪೂರ್ಣ ಗೊಂಡ ಸೇತುವೆಯಲ್ಲಿ ಬಿರುಕು: ಸಿಟಿ ಹಾಸ್ಪಿಟಲ್ ಮತ್ತು ಬೆಸ್ಕಾಂ ಪವರ್ ಹೌಸ್ ನಡುವಿನ ಮೇಲ್ಸೇತುವೆ 2019 ರಲ್ಲಿ ಪೂರ್ಣಗೊಂಡಿದ್ದು, ಎರಡನೆಯದು ಬೆಸ್ಕಾಂ ಪವರ್ ಹೌಸ್ ಮತ್ತು ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಡುವೆ 2021 ರಲ್ಲಿ ಸಿದ್ಧವಾಗಿದೆ. ಈ ಎರಡು ಮೇಲುರಸ್ತೆಗಳು 500 ಮೀ ಉದ್ದವಿವೆ. ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮತ್ತು ವಿಜಯನಗರ ಟೋಲ್ ಗೇಟ್ ನಡುವೆ ಮೂರನೇ ಮೇಲ್ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಮಂಜುನಾಥನಗರ ಮತ್ತು ಶಿವನಗರ ಜಂಕ್ಷನ್‌ಗಳಲ್ಲಿರುವ ಒಂದು ಪಿಲ್ಲರ್ ಸಂಪೂರ್ಣ ಉಬ್ಬಿದರೆ, ಇನ್ನೊಂದರಲ್ಲಿ ದೊಡ್ಡ ಬಿರುಕುಗಳು ಕಾಣಿಸಿಕೊಂಡಿವೆ. ಕೆಲ ತಿಂಗಳ ಹಿಂದೆ ಪಾಲಿಕೆಯವರು ಬಿರುಕು ಸರಿಪಡಿಸುವ ಕಾರ್ಯ ಮಾಡಿದ್ದರೂ ಸಮಸ್ಯೆ ಕಾಣಿಸಿಕೊಂಡಿದ್ದು, ಪಿಲ್ಲರ್‌ಗಳ ಬಿರುಕುಗಳಿಂದ ಹೊರಬರುವ ಜಲ್ಲಿಕಲ್ಲುಗಳು ಪಿಲ್ಲರ್‌ಗಳು ಕುಸಿಯುವ ಭೀತಿಯನ್ನು ಹೆಚ್ಚಿಸಿದೆ.

ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ರಿಗೆ ದೂರು: ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್​ರಿಗೆ ದೂರು ಸಲ್ಲಿಸಿದ ಆರ್‌ಟಿಐ ಕಾರ್ಯಕರ್ತ, ಗುತ್ತಿಗೆದಾರರು ಗುಣಮಟ್ಟದ ಮಾನದಂಡಗಳನ್ನು ಅನುಸರಿಸದೆ ಕಳಪೆ ಕಾಮಗಾರಿ ನಡೆಸಿದ್ದಾರೆ ಎಂದು ಆರೋಪಿಸಿದ್ದು, ಈಗ ಎರಡು ಮೇಲ್ಸೇತುವೆಗಳು ಅಪಾಯದಲ್ಲಿದೆ ಮತ್ತು ದುರಸ್ತಿ ಕಾರ್ಯವನ್ನು ಕೈಗೊಳ್ಳಲು ತಕ್ಷಣವೇ ಅವುಗಳನ್ನು ಮುಚ್ಚಬೇಕು ಎಂದು ಕೋರಿದ್ದಾರೆ.

ಸಾಮರ್ಥ್ಯವಿಲ್ಲದ ಪಿಲ್ಲರ್: ವಾಹನಗಳ ಭಾರವನ್ನು ತಡೆದುಕೊಳ್ಳುವ ಸಾಮರ್ಥ್ಯ ಪಿಲ್ಲರ್‌ಗೆ ಇಲ್ಲದಿರುವುದರಿಂದ ಹೆಚ್ಚಿನ ಒತ್ತಡದಿಂದ ಬಿರುಕು ಕಾಣಿಸಿಕೊಂಡಿವೆ ಎಂದಿದ್ದಾರೆ.

ಕಾಮಗಾರಿ ನಡೆಯುತ್ತಿರುವಾಗ ಮಾಡದ ತಪಾಸಣೆ: ಕಾಮಗಾರಿ ನಡೆಯುತ್ತಿರುವಾಗ ಕಾಲಕಾಲಕ್ಕೆ ತಪಾಸಣೆ ನಡೆಸಲಿಲ್ಲ. ಇದು ಗುತ್ತಿಗೆದಾರರಿಗೆ ಕಳಪೆ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಿದೆ. ರಾಕೇಶ್ ಸಿಂಗ್ ಮತ್ತು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕ್ರಮ ಕೈಗೊಳ್ಳದಿದ್ದರೆ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಲೋಕಾಯುಕ್ತಕ್ಕೆ ಮನವಿ ಸಲ್ಲಿಸುತ್ತೇನೆ. ಅಗತ್ಯವಿದ್ದರೆ ಹೈಕೋರ್ಟ್‌ಗೆ ಹೋಗಲು ಹಿಂಜರಿಯುವುದಿಲ್ಲ ಎಂದು ಆರ್​ಟಿಐ ಕಾರ್ಯಕರ್ತ ಎಸ್ ಭಾಸ್ಕರನ್ ಹೇಳಿದ್ದಾರೆ.

ಇದನ್ನೂ ಓದಿ: ಪಾಲಿಕೆಯಿಂದ 5 ವರ್ಷಗಳ ನಂತರ ಬೀದಿ ಬದಿ ವ್ಯಾಪಾರಿಗಳು, ಮಾರಾಟ ಪ್ರದೇಶಗಳ ಸಮೀಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.