ಬೆಂಗಳೂರು: ಬೈಯಪ್ಪನಹಳ್ಳಿ ಕಡೆ ಹೋಗುವ ನೇರಳೆ ಮಾರ್ಗದ ಮೆಟ್ರೋ ಪಿಲ್ಲರ್ನಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದ್ದು, ಪ್ರಯಾಣಿಕರಿಗೆ ಆತಂಕ ಶುರುವಾಗಿದೆ.
ಬಿಎಂಆರ್ಸಿಎಲ್ ಕಳಪೆ ಕಾಮಗಾರಿಯಿಂದಾಗಿ ಪಿಲ್ಲರ್ ಬಿರುಕು ಬಿಟ್ಟಿರುವ ಪರಿಣಾಮ ಪ್ರಯಾಣಿಕರು ಕೆಲಕಾಲ ಗಲಿಬಿಲಿಗೊಂಡರು. ಇಂದಿರಾನಗರ ಸ್ಟೇಷನ್ನಲ್ಲಿನ ಮೆಟ್ರೋ ಪಿಲ್ಲರ್ನಲ್ಲಿ ಬಿರುಕು ಬಿಟ್ಟಿದ್ದು, ಸ್ಥಳಕ್ಕೆ ಇಂದಿರಾನಗರ ಪೊಲೀಸರು ಹಾಗೂ ಬಿಎಂಆರ್ಸಿಎಲ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.