ETV Bharat / state

ರಾಜ್ಯದಲ್ಲೂ ನಾಳೆಯಿಂದ 12 ರಿಂದ 14 ವರ್ಷದ 20 ಲಕ್ಷ ಮಕ್ಕಳಿಗೆ ಕಾರ್ಬೆವ್ಯಾಕ್ಸ್ ಲಸಿಕಾಭಿಯಾನ - ನಾಳೆಯಿಂದ ಮಕ್ಕಳಿಗೆ ಕಾರ್ಬೆವಾಕ್ಸ್ ಲಸಿಕಾಭಿಯಾನ

ಮೊದಲನೇ ಡೋಸ್ ಪಡೆದ 28 ದಿನಗಳ ನಂತರ ಎರಡನೇ ಡೋಸ್ ಲಸಿಕೆಯನ್ನ ನೀಡಲಾಗುತ್ತೆ.‌ ರಾಜ್ಯದಲ್ಲಿ 12-14 ವರ್ಷದ ಸುಮಾರು 20 ಲಕ್ಷ ಮಕ್ಕಳು ಇದ್ದಾರೆ. ನಾಳೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಸುಧಾಕರ್, ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಸಂಸ್ಥೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಲಸಿಕಾಭಿಯಾನ
ಲಸಿಕಾಭಿಯಾನ
author img

By

Published : Mar 15, 2022, 6:05 PM IST

ಬೆಂಗಳೂರು: ನೋವೆಲ್ ಕೊರೊನಾ ವೈರಸ್ ಗೆ ರಾಮಬಾಣವಾಗಿ ಬಂದಿದ್ದು, ಕೋವಿಡ್ ಲಸಿಕೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ, ರಾಜ್ಯದಲ್ಲಿ ಕೋವಿಡ್-19 ಲಸಿಕಾಕರಣವನ್ನು 2021ರ ಜನವರಿ 16ರಿಂದ ಹಂತ ಹಂತವಾಗಿ ಆರಂಭಿಸಲಾಯಿತು.‌

ಮೊದಮೊದಲು ಕೊರೊನಾ ಹೆಲ್ತ್ ವಾರಿಯರ್ಸ್, ಫ್ರಂಟ್ ಲೈನ್ ವರ್ಕರ್ಸ್ ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಲಸಿಕೆ ನೀಡಲಾಯಿತು. ಇದಾದ ಬಳಿಕ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆಯನ್ನ ಆರಂಭಿಸಿದ ಆರೋಗ್ಯ ಇಲಾಖೆ, ಇದೀಗ ನಾಳೆಯಿಂದ 12-14 ವರ್ಷದ ಮಕ್ಕಳ ಮತ್ತು 60 ವರ್ಷ ಮೇಲ್ಪಟ್ಟವರ ಮುನ್ನೆಚ್ಚರಿಕೆ ಡೋಸ್ ನೀಡಲಾಗುತ್ತಿದೆ.

ಮಾರ್ಚ್ 15, 2010 ರಲ್ಲಿ ಮತ್ತು ಅದಕ್ಕೂ ಮುನ್ನ ಜನಿಸಿದ ಮಕ್ಕಳು ಕೋವಿಡ್-19 ಲಸಿಕೆ ಪಡೆಯಲು ಅರ್ಹರಿದ್ದು, ಈ ಮಕ್ಕಳಿಗೆ ಲಸಿಕೆ ಬಳಸಿ ಲಸಿಕಾಕರಣ ನಡೆಸಲಾಗುತ್ತೆ. ಪ್ರತಿಯೊಬ್ಬ ಫಲಾನುಭವಿಗೂ ಎರಡು ಡೋಸ್ ಕಾರ್ಬೆವಾಕ್ಸ್ ಲಸಿಕೆಯಿಂದ ಲಸಿಕಾಕರಣ ನಡೆಸಲಾಗುತ್ತೆ.

ಮೊದಲನೇ ಡೋಸ್ ಪಡೆದ 28 ದಿನಗಳ ನಂತರ ಎರಡನೇ ಡೋಸ್ ಲಸಿಕೆಯನ್ನ ನೀಡಲಾಗುತ್ತೆ.‌ ರಾಜ್ಯದಲ್ಲಿ 12-14 ವರ್ಷದ ಸುಮಾರು 20 ಲಕ್ಷ ಮಕ್ಕಳು ಇದ್ದಾರೆ. ನಾಳೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಸುಧಾಕರ್, ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಸಂಸ್ಥೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

60 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಮುನ್ನೆಚ್ಚರಿಕೆ ಡೋಸ್ ಲಸಿಕಾಕರಣ : ಕೋವಿನ್ ಪೋರ್ಟಲ್ ನೋಂದಣಿ ಪ್ರಕಾರ ಎರಡನೇ ಡೋಸ್ ಲಸಿಕೆ ಪಡೆದು 9 ತಿಂಗಳು/39 ವಾರಗಳನ್ನು ಪೂರೈಸಿದ 60 ವರ್ಷ ಮೇಲ್ಪಟ್ಟ ಎಲ್ಲ ಫಲಾನುಭವಿಗಳು ಮುನ್ನೆಚ್ಚರಿಕ ಡೋಸ್ ಲಸಿಕ ಪಡೆಯಬಹುದು.

ಕೊವ್ಯಾಕ್ಸಿನ್ ಲಸಿಕೆಯನ್ನು ಮೊದಲನೇ ಮತ್ತು ಎರಡನೇ ಡೋಸ್ ಆಗಿ ಪಡೆದಿರುವವರು ಕೊವ್ಯಾಕ್ಸಿನ್ ಲಸಿಕೆಯನ್ನು ಮತ್ತು ಕೋವಿಶೀಲ್ಡ್ ಲಸಿಕೆಯನ್ನು ಮೊದಲನೇ ಮತ್ತು ಎರಡನೇ ಡೋಸ್ ಆಗಿ ಪಡೆದಿರುವವರು ಕೋವಿ ಶೀಲ್ಡ್ ಲಸಿಕೆಯನ್ನು ಮಾತ್ರ ಮುನ್ನೆಚ್ಚರಿಕೆ ಡೋಸ್ ಅಗಿ ಪಡೆಯಬೇಕು.ರಾಜ್ಯದಲ್ಲಿ 76.58 ಲಕ್ಷ 60 ವರ್ಷ ಮೇಲ್ಪಟ್ಟ ಫಲಾನುಭವಿಗಳು ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆಯಲಿದ್ದಾರೆ.

ಇನ್ನು ಮುನ್ನೆಚ್ಚರಿಕೆ ಡೋಸ್( ಬೂಸ್ಟರ್ ಡೋಸ್) ಲಸಿಕಾಕರಣಕ್ಕೆ ಹೊಸ ನೋಂದಣಿ ಮಾಡುವ ಅಗತ್ಯವಿಲ್ಲ. 9 ತಿಂಗಳು/39 ವಾರಗಳನ್ನು ಪೂರೈಸಿದ ಅರ್ಹ ಫಲಾನುಭವಿಗಳಿಗೆ ಲಸಿಕಾಕರಣ ಸ್ಲಾಟ್ ಗಳು ಕೋವಿನ್ ಪೋರ್ಟಲ್ ನಲ್ಲಿ ಕಾಣಿಸುತ್ತವೆ.

ರಾಜ್ಯವು 20 ಲಕ್ಷ ಕಾರ್ಬೆವ್ಯಾಕ್ಸ್ ಲಸಿಕಾ ಡೋಸ್ ದಾಸ್ತಾನನ್ನು ಹೊಂದಿದ್ದು, ಎಲ್ಲ ಜಿಲ್ಲೆಗಳಲ್ಲಿ ಲಾಜಿಸ್ಟಿಕ್, ಸಿಬ್ಬಂದಿ ಇತರ ಅಂಶಗಳನ್ನು ಒಳಗೊಂಡು ಸೂಕ್ಷ್ಮ ಕ್ರಿಯಾ ಯೋಜನೆಗಳನ್ನು ರಚಿಸಲಾಗಿದೆ. ಆರಂಭದಲ್ಲಿ ಲಸಿಕಾಕರಣವನ್ನು ಆರೋಗ್ಯ ಕೇಂದ್ರಗಳಲ್ಲಿ ನಡೆಸಲಾಗುತ್ತೆ.‌ ಬಳಿಕ ಕಾರ್ಯಕ್ರಮವು ಸ್ಥಿರಗೊಂಡ ನಂತರ ಶಾಲೆಗಳಲ್ಲಿ ಲಸಿಕಾಕರಣವನ್ನು ಕೈಗೊಳ್ಳಲಾಗುತ್ತೆ.

ಲಸಿಕಾಭಿಯಾನದಲ್ಲಿ ಲಸಿಕೆ ಪಡೆಯಲು ಸಾಧ್ಯವಾಗದ ಮಕ್ಕಳಿಗೆ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತೆ. ಸಹ ಅಸ್ವಸ್ಥತ ಹೊಂದಿರುವ ಮಕ್ಕಳಿಗೆ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿ ಲಸಿಕೆ ನೀಡಲಾಗುತ್ತೆ. ಲಸಿಕೆ ಪಡೆದ ಮಕ್ಕಳು ಲಸಿಕಾ ಪ್ರಮಾಣ ಪತ್ರವನ್ನು ಕೋವಿನ್ ಪೋರ್ಟಲ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು.

ಆನ್ ಲೈನ್ ತರಗತಿಗಳನ್ನು ನಡೆಸುವ ಶಾಲೆಗಳಲ್ಲಿ ದಿನಾಂಕ ನಿಗದಿಪಡಿಸಿ ಮಕ್ಕಳನ್ನು ಬರಹೇಳಿ ಲಸಿಕೆ ಕೊಡಿಸಲಾಗುತ್ತೆ. ಶಾಲೆಯಿಂದ ಹೊರಗುಳಿದ ಅಥವಾ ಶಾಲೆ ಬಿಟ್ಟ ಮಕ್ಕಳನ್ನು ಕಾರ್ಮಿಕ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ ಮತ್ತು ನಗರಾಭಿರುವೃದ್ಧಿ ಇಲಾಖೆಯ ಬೆಂಬಲದೊಂದಿಗೆ ಹತ್ತಿರದ ಸರ್ಕಾರಿ ಕೇಂದ್ರಗಳಿಗೆ ಲಸಿಕಾಕರಣಕ್ಕಾಗಿ ಸಜ್ಜುಗೊಳಿಸಲಾಗುತ್ತೆ.

ಮಕ್ಕಳಲ್ಲಿ ಆತಂಕ ಹೋಗಲಾಡಿಸಲು ಕ್ರಮ : ಇನ್ನು ಲಸಿಕಾಕರಣ ಕುರಿತು ಮಕ್ಕಳಲ್ಲಿ ಇರುವ ಆತಂಕಗಳನ್ನು ಹೋಗಲಾಡಿಸಲು ಭಾರತೀಯ ಮಕ್ಕಳ ತಜ್ಞರ ಸಂಘ (IAP) ಮತ್ತು ಖಾಸಗಿ ಮಕ್ಕಳ ವೈದ್ಯರ ಸಹಕಾರ ಕೋರಿದೆ. ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಲಿದ್ದಾರೆ.‌

ಈ ಲಸಿಕಾಕರಣದ ಕುರಿತು ಪೋಷಕರಲ್ಲಿ ಇರುವ ಲಸಿಕೆ ಹಿಂಜರಿಕೆ ಅಥವಾ ಅನುಮಾನ ಹೋಗಲಾಡಿಸಲು ಎಲ್ಲಾ ಜಿಲ್ಲೆಗಳಲ್ಲಿ ಲಸಿಕಾಕರಣದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲ ಸರ್ಕಾರಿ ಕೋವಿಡ್ 19 ಲಸಿಕಾ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕಾಕರಣ ನಡೆಸಲಾಗುವುದು. ಲಸಿಕಾಕರಣವನ್ನು ಆನ್ ಲೈನ್ ಮತ್ತು ಆನ್ ಸೈಟ್ ನೋಂದಣಿ ಮೂಲಕ ನಡೆಸಲಾಗುತ್ತೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.