ETV Bharat / state

Karnataka Unlock​ 3.0 : ವ್ಯಾಪಾರ-ವಹಿವಾಟು ಪುನಾರಂಭ, ಮೈಮರೆತರೆ ಮತ್ತೆ ಆಪತ್ತು - ಅನ್​ಲಾಕ್ 3.0

ಕೋವಿಡ್ 2 ನೇ ಅಲೆಯ ಅಬ್ಬರದಿಂದ ಲಾಕ್​ ಆಗಿದ್ದ ರಾಜ್ಯ ಹಂತ ಹಂತವಾಗಿ ಅನ್​ಲಾಕ್​ ಆಗುತ್ತಿದ್ದು, ಜನಜೀವನ ಸಹಸಜ ಸ್ಥಿತಿಗೆ ಮರಳುತ್ತಿದೆ. ಆದರೆ, ಅನ್​ಲಾಕ್​ ಆಯಿತೆಂದು ಜನ ಮೈಮರೆಯುವಂತಿಲ್ಲ. ಈಗಾಗಲೇ ಕೋವಿಡ್ ಮೂರನೇ ಅಲೆಯ ಬಗ್ಗೆ ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ.

Unlock 3.0 in Karnataka
ಕರ್ನಾಟಕ ಅನ್​ಲಾಕ್
author img

By

Published : Jul 5, 2021, 8:26 AM IST

ಬೆಂಗಳೂರು: ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿದ್ದಂತೆ ಲಾಕ್ ಡೌನ್ ತೆರವಾಗಿದ್ದು, ರಾಜ್ಯಾದ್ಯಂತ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಇಂದಿನಿಂದ ಅನ್​ಲಾಕ್​ 3.O ಜಾರಿಯಾಗಿದೆ. ವ್ಯಾಪಾರ ವಹಿವಾಟು, ರೈಲು, ಬಸ್​ ಸಂಚಾರ, ಮಠ, ಮಂದಿರಗಳು ಸೇರಿದಂತೆ ಬಹುತೇಕ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ.

ಲಾಕ್​ಡೌನ್​ನಲ್ಲಿ ಸಂಚಾರ ವ್ಯವಸ್ಥೆ ನಿಂತು ಹೋಗಿದ್ದರಿಂದ ಒಂದೆಡೆಯಿಂದ ಇನ್ನೊಂದೆಡೆಗೆ ತೆರಳುವುದು ಕಷ್ಟ ಸಾಧ್ಯವಾಗಿತ್ತು. ಕೇವಲ ರೈಲು ಸಂಚಾರ ಮಾತ್ರ ಇತ್ತು. ಆದರೆ, ರಾಜ್ಯದ ಎಲ್ಲಾ ಮೂಲೆಗಳನ್ನು ರೈಲು ತಲುಪದ ಕಾರಣ ಸಮಸ್ಯೆ ಉಂಟಾಗಿತ್ತು. ಇದೀಗ ಲಾಕ್​​ ಡೌನ್​ ತೆರವಾಗಿದ್ದು, ಪ್ರಮುಖ ಸಂಚಾರ ವ್ಯವಸ್ಥೆಯಾದ ರಸ್ತೆ ಸಂಚಾರ ಆರಂಭವಾಗಿದೆ. ರಾಜ್ಯದ ಎಲ್ಲಾ ಮೂಲೆಗಳಿಗೂ ಬಸ್ ತೆರಳುತ್ತಿವೆ. ಈ ಹಿನ್ನೆಲೆ, ನಗರ ಪ್ರದೇಶದಿಂದ ಗ್ರಾಮೀಣ ಭಾಗಕ್ಕೆ ತೆರಳಿದ್ದ ಜನರು ಮತ್ತೆ ನಗರಗಳತ್ತ ಮುಖ ಮಾಡಿದ್ದಾರೆ.

ಕೃಷಿ ಚಟುವಟಿಕೆ ಬಿರುಸು, ಕಾರ್ಖಾನೆಗಳು ಓಪನ್

ಲಾಕ್‌ ಡೌನ್ ತೆರವಾದ ಹಿನ್ನೆಲೆ, ಗ್ರಾಮೀಣ ಭಾಗಗಳಲ್ಲಿ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ರೈತರು ಪಟ್ಟಣಗಳಿಗೆ ತೆರಳಿ ಬಿತ್ತನೆ ಬೀಜ,ಗೊಬ್ಬರ ಖರೀದಿಯಲ್ಲಿ ನಿರತರಾಗಿದ್ದಾರೆ. ಇನ್ನೊಂದೆಡೆ ನಗರ ಪ್ರದೇಶಗಳಲ್ಲಿ ಕೈಗಾರಿಕೆಗಳು, ಕಾರ್ಖಾನೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಾಂಭ ಮಾಡುತ್ತಿವೆ.

ತಮ್ಮ ಕಾರ್ಯ ಚಟುವಟಿಕೆಗಳನ್ನು ಕಡಿಮೆಗೊಳಿಸಿದ್ದ ಕಂಪನಿಗಳು, ನಿಧಾನವಾಗಿ ಲಯ ಕಂಡುಕೊಳ್ಳುತ್ತಿವೆ. ಕಳೆದ ಒಂದುವರೆ ವರ್ಷದಲ್ಲಿ ಬಾರಿ ಸಂಖ್ಯೆಯಲ್ಲಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ.

ಕೋವಿಡ್ ಹೊಡೆತಕ್ಕೆ ಉದ್ಯೋಗ ನಷ್ಟ : ಕೋವಿಡ್ ಎರಡನೇ ಅಲೆಯ ಸಂದರ್ಭ ಮಾತ್ರ ಸುಮಾರು 22.7 ಲಕ್ಷ ಮಂದಿ ನಿರುದ್ಯೋಗಿಗಳಾಗಿದ್ದಾರೆ ಎಂಬ ಮಾಹಿತಿಯಿದೆ. ಮೂಲಗಳ ಪ್ರಕಾರ, ದೇಶದ 43 ಮಿಲಿಯನ್ ಉದ್ಯೋಗಿಗಳ ಪೈಕಿ, 22.7 ಮಿಲಿಯನ್ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.

ಕೋವಿಡ್ ಹರಡಲು ಶರುವಾದ ಬಳಿಕ ಶೇ. 97ರಷ್ಟು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ವಿವಿಧ ಕಾರಣಗಳಿಂದ ಇವರ ಆದಾಯಕ್ಕೆ ಕುತ್ತು ಬಂದಿದೆ. ಇದೇ ವೇಳೆ ಖರ್ಚು ಹೆಚ್ಚಾಗಿದೆ. ಸಾಮಾನ್ಯವಾಗಿ ನಾಲ್ಕರಿಂದ ಐದು ಸಾವಿರ ರೂಪಾಯಲ್ಲಿ ಜೀವನ ಸಾಗಿಸುತ್ತಿದ್ದ ಜನರ ಖರ್ಚು ವೆಚ್ಚ, ಈಗ 10,000 ಆಗಿದೆ. ಇದಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಹಲವು ಕಾರಣಗಳಿವೆ.

ಕೋವಿಡ್ ಅವಧಿಯಲ್ಲಿ ದೇಶದಲ್ಲಿ ಶೇ. 23.5 ರಷ್ಟು ಮಂದಿ ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಇದು ದೇಶದ ಪಾಲಿಗೆ ಮಾರಕ ಬೆಳವಣಿಗೆ ಎನ್ನಲಾಗುತ್ತಿದೆ. ಈಗ ಲಾಕ್​ ಡೌನ್​ ತೆರವಾಗಿರುವ ಕಾರಣ ಮುಂಬರುವ ದಿನಗಳಲ್ಲಿ ಈ ಸಮಸ್ಯೆ ನಿವಾರಣೆಯತ್ತ ಹೆಚ್ಚಿನ ಗಮನಹರಿಸಬೇಕಾಗಿದೆ. ಭಾರತವು ಕೋವಿಡ್ ಎರಡನೇ ಅಲೆಯನ್ನು ಎಷ್ಟು ವೇಗವಾಗಿ ತಡೆಯುತ್ತದೆ ಎಂಬುದರ ಮೇಲೆ ದೇಶದ ಬೆಳವಣಿಗೆ ನಿಂತಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ಕೊರೊನಾ ಮೊದಲ ಅಲೆಯ ಸಂದರ್ಭ ಈ ಮಟ್ಟದ ತನಕ ಆರ್ಥಿಕತೆ ಸಂಕಷ್ಟ ಉಂಟಾಗಿರಲಿಲ್ಲ. ಆದರೆ, ಎರಡನೇ ಅಲೆಯಿಂದ ದೇಶದ ಆರ್ಥಿಕತೆ ಮೇಲೆ ದೊಡ್ಡ ಹೊಡೆತ ಬಿದ್ದಿದೆ.

ಮೈಮರೆತರೆ ಆಪತ್ತು:

ಕರ್ನಾಟಕ ರಾಜ್ಯ ಎರಡನೇ ಅಲೆಯಿಂದ ಸಂಪೂರ್ಣವಾಗಿ ಹೊರಬಂದಿಲ್ಲ. ನಿರ್ಲಕ್ಷ್ಯ ತೋರಿದರೆ ಸೋಂಕು ಮತ್ತೆ ಹೆಚ್ಚುವ ಸಾಧ್ಯತೆಗಳಿವೆ. ಅಕ್ಟೋಬರ್- ನವೆಂಬರ್​ನಲ್ಲಿ ಕೋವಿಡ್ ಮೂರನೇ ಅಲೆ ದೇಶವನ್ನು ಕಾಡುವ ಸಾಧ್ಯತೆ ಇದೆ ಎಂದು ತಜ್ಞರು ಮುನ್ನೆಚ್ಚರಿಗೆ ನೀಡಿದ್ದಾರೆ.

ಇದರೊಂದಿಗೆ ಕೋವಿಡ್ ಇನ್ನೊಂದು ರೂಪಾಂತರ ಪಡೆದರೆ ಸಮಸ್ಯೆ ಹೆಚ್ಚಬಹುದು. ಎರಡನೇ ಅಲೆಗೆ ಹೋಲಿಸಿದರೆ ಮೂರನೇ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ಶೇ. 50ರಷ್ಟು ಇರಲಿದೆ ಎಂದು ತಜ್ಞರು ಹೇಳಿದ್ದಾರೆ. ಹಾಗಾಗಿ, ಅನ್​ಲಾಕ್​ ಆದರೂ, ಎಚ್ಚರದಿಂದ ಇರಬೇಕಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.