ಬೆಂಗಳೂರು: ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ನಿತ್ಯ 50 ಸಾವಿರಕ್ಕೂ ಅಧಿಕ ಮಂದಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ಈ ರೀತಿ ಟೆಸ್ಟ್ ಮಾಡಿಸಿಕೊಂಡು ಬಂದ್ಮೇಲೆ ನೆಗೆಟಿವ್- ಪಾಸಿಟಿವ್ ಅನ್ನೋ ಚಿಂತೆಯಲ್ಲೇ ಕೆಲವರು ಮಾನಸಿಕ ಖಿನ್ನತೆಗೆ ಒಳಗಾಗಿ ಬಿಡ್ತಾರೆ.
ರಿಪೋರ್ಟ್ ತಿಳಿಯೋಕೆ ಆಸ್ಪತ್ರೆಯ ಲ್ಯಾಬ್‌ಗಳಿಗೆ ಅಲೆದಾಡುವುದನ್ನು ಕೂಡ ನೋಡಿದ್ದೇವೆ. ಈ ತಲೆನೋವು ತಪ್ಪಿಸಲು ಆರೋಗ್ಯ ಇಲಾಖೆ ಹೊಸ ವ್ಯವಸ್ಥೆ ಕಲ್ಪಿಸಿದೆ. ಕೋವಿಡ್ ಟೆಸ್ಟ್ಗೆ ಸ್ವ್ಯಾಬ್ ಕೊಟ್ಟ ನಂತರ ನೀವೇ ರಿಸಲ್ಟ್ ನೋಡಬಹುದು. ಸರ್ಕಾರದ ವೆಬ್ಸೈಟ್ಗೆ ಹೋಗಿ, SRF ಐಡಿ ನಮೂದಿಸಿದರೆ ಅಲ್ಲೇ ಫಲಿತಾಂಶ ಲಭ್ಯವಿರಲಿದೆ. ಹೀಗಾಗಿ, ಯಾವಾಗ ರಿಸ್ಟಲ್ ಬರುತ್ತೆ ಅಂತ ಕಾದು ಕೂತು ಆರೋಗ್ಯಾಧಿಕಾರಿಗಳನ್ನು ಕೇಳಬೇಕಿಲ್ಲ.
www.covidwar.Karnataka.gov.in/service1 ಪೋರ್ಟಲ್‌ಗೆ ಹೋಗಿ ಐಡಿ ಎಂಟ್ರಿ ಮಾಡಿದರೆ ಕ್ಷಣಾರ್ಧದಲ್ಲೇ ರಿಸ್ಟಲ್ ಸಿಗಲಿದೆ. ಈ ರಿಸ್ಟಲ್ನಲ್ಲಿ ಪಾಸಿಟಿವ್ ಬಂತು ಅಂದರೆ ಗಾಬರಿ, ಆತಂಕವೂ ಬೇಡ. ಮನೆಯಲ್ಲೇ ಐಸೊಲೇಷನ್ ಆಗಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಿಮ್ಮನ್ನು ಆರೋಗ್ಯಾಧಿಕಾರಿಗಳು ಸಂಪರ್ಕಿಸಲಿದ್ದಾರೆ ಅಂತ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ತುರ್ತು ಸೇವೆಗೆ- 108, ಆಪ್ತಮಿತ್ರ ಹೆಲ್ಪ್ ಲೈನ್- 14410 ಈ ನಂಬರ್ಗೆ ಕರೆ ಮಾಡುವಂತೆಯೂ ತಿಳಿಸಿದೆ.