ಬೆಂಗಳೂರು: ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಬರೋಬ್ಬರಿ ಒಂದು ಕೋಟಿಗೂ ಹೆಚ್ಚು ಜನರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.
ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮೂಲಕ 31,96,740 ಮಂದಿ ಹಾಗೂ ಆರ್ಟಿಪಿಸಿಆರ್ ಮೂಲಕ 69,09,734 ಜನರು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು, ಈ ಮೂಲಕ 1,01,106,474 ಮಂದಿ ಈವರೆಗೆ ಕೋವಿಡ್ ಟೆಸ್ಟ್ಗೆ ಒಳಪಟ್ಟಿದ್ದಾರೆ.
ಇನ್ನು 1,01,106,474 ಕೋವಿಡ್ ಪರೀಕ್ಷೆ ಮಾಡಿಸಿಕೊಂಡವರಲ್ಲಿ 8,71,342 ಜನರಿಗೆ ಸೋಂಕು ದೃಢಪಟ್ಟಿದೆ. ಇಂದು 1781 ಹೊಸ ಸೋಂಕು ದೃಢಪಟ್ಟಿದ್ದು, 1799 ಸೋಂಕಿತರು ಗುಣಮುಖರಾಗಿದ್ದಾರೆ. 8,34,968 ಸೋಂಕಿತರು ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. ಸೋಂಕಿಗೆ 20 ಮಂದಿ ಬಲಿಯಾಗಿದ್ದು, ಈ ಮೂಲಕ ಮೃತರ ಸಂಖ್ಯೆ 11,641ಕ್ಕೆ ಏರಿಕೆ ಆಗಿದೆ.
ಸದ್ಯ ಸಕ್ರಿಯ 24,714 ಪ್ರಕರಣಗಳು ಇದ್ದು, 494 ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಪ್ರಮಾಣ 1.42ರಷ್ಟು ಹಾಗೂ ಸಾವಿನ ಪ್ರಮಾಣ ಶೇ. 1.1ರಷ್ಟು ಇದೆ. ಕಳೆದ 7 ದಿನಗಳಲ್ಲಿ 32,625 ಜನರು ಹೋಂ ಕ್ವಾರಂಟೈನ್ನಲ್ಲಿ ಇದ್ದಾರೆ.
ಬೆಂಗಳೂರಿನಲ್ಲಿ ಇಂದಿನ ಕೊರೊನಾ:
ಬೆಂಗಳೂರಿನಲ್ಲಿಂದು 972 ಜನರಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 3,62,626ಕ್ಕೆ ಏರಿಕೆ ಆಗಿದೆ. 813 ಸೋಂಕಿತರು ಗುಣಮುಖರಾಗಿದ್ದು, 3,40,755 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. 10 ಸೋಂಕಿತರು ಕೊರೊನಾಗೆ ಬಲಿಯಾಗಿದ್ದು, 4058ಕ್ಕೆ ಸಾವಿನ ಸಂಖ್ಯೆ ಏರಿಕೆ ಆಗಿದೆ. ಸದ್ಯ ಸಕ್ರಿಯ ಪ್ರಕರಣಗಳು 17,812 ಇವೆ.