ETV Bharat / state

ಕೋವಿಡ್ ಟೆಸ್ಟ್ ಮಾಡಿಸಿದ 9309 ವಿದ್ಯಾರ್ಥಿಗಳು-ಉಪನ್ಯಾಸಕರು: ಇಬ್ಬರಿಗೆ ಸೋಂಕು ದೃಢ - collegues start from tuesday

ಇಂದಿನಿಂದ ಕಾಲೇಜುಗಳು ಆರಂಭವಾದ ಹಿನ್ನೆಲೆ ಕೋವಿಡ್ ಟೆಸ್ಟ್ ಮಾಡಿಸಲು ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮೊಬೈಲ್ ಯೂನಿಟ್​ಗಳ ನಿಯೋಜನೆ ಮಾಡಿದೆ. ಇಲ್ಲಿ ಪರೀಕ್ಷೆ ಮಾಡಿಸಿದ 9309 ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಪೈಕಿ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ಬಿಬಿಎಂಪಿ
ಬಿಬಿಎಂಪಿ
author img

By

Published : Nov 17, 2020, 8:44 PM IST

ಬೆಂಗಳೂರು: ಇಂದಿನಿಂದ ಕಾಲೇಜು- ಸ್ನಾತಕೋತ್ತರ ಪದವಿ, ಡಿಪ್ಲೊಮಾ ಕಾಲೇಜು, ಹಾಸ್ಟೆಲ್​ಗಳು ಆರಂಭವಾಗಿದ್ದು, ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಿಸುವುದು ಕಡ್ಡಾಯ ಮಾಡಲಾಗಿದೆ. ಈ ಹಿನ್ನೆಲೆ ಕೋವಿಡ್ ಟೆಸ್ಟ್ ಮಾಡಿಸಲು ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮೊಬೈಲ್ ಯೂನಿಟ್​ಗಳ ನಿಯೋಜನೆ ಮಾಡಿದೆ. ಇಲ್ಲಿ ಸೋಂಕು ಪರೀಕ್ಷೆ ಮಾಡಿಸಿಕೊಂಡ 9309 ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಪೈಕಿ ಇಬ್ಬರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

ಬಿಬಿಎಂಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 360 ಕಾಲೇಜುಗಳು ಬರುತ್ತವೆ. ಒಟ್ಟು 189 ಕೋವಿಡ್ ಸೋಂಕು ಪರೀಕ್ಷಾ ತಂಡಗಳ ನಿಯೋಜನೆ ಮಾಡಲಾಗಿದೆ. ಈ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಪರೀಕ್ಷೆಗೆ 75,163 ವಿದ್ಯಾರ್ಥಿಗಳು, ಉಪನ್ಯಾಸಕರು ಲಭ್ಯರಿದ್ದು, ಈವರೆಗೆ 9309 ಮಂದಿ ಸೋಂಕು ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಈ ಪೈಕಿ ಇಬ್ಬರ ವರದಿ ಪಾಸಿಟಿವ್ ಬಂದಿದೆ.

ಅತಿಹೆಚ್ಚು ಕೋವಿಡ್ ಟೆಸ್ಟ್ ಆಗದಿರಲು, ಕೆಲವು ಕಾಲೇಜುಗಳು ತೆರೆದಿಲ್ಲ. ಹಲವೆಡೆ ಆನ್​​ಲೈನ್ ತರಗತಿಗಳು ಮುಂದುವರೆದಿವೆ. ಕೆಲವೆಡೆ ನಾಳೆಯಿಂದ ಕಾಲೇಜು ಆರಂಭಿಸಲಾಗುತ್ತದೆ ಎಂದು ವರದಿ ನೀಡಲಾಗಿದೆ. ಅತಿಹೆಚ್ಚು ಕೋವಿಡ್ ಸೋಂಕು ಪರೀಕ್ಷೆ ಪೂರ್ವ ಹಾಗೂ ಪಶ್ಚಿಮ ವಲಯಗಳಲ್ಲಿ ನಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.