ETV Bharat / state

ಕೊರೊನಾ ಕುರಿತಂತೆ 2ನೇ ಹಂತದ ಸಮೀಕ್ಷೆ ನಡೆಸುತ್ತಿರುವ ಸರ್ಕಾರ.. - 2 ನೇ ಹಂತದ ಸಮೀಕ್ಷೆ ನಡೆಸುತ್ತಿರುವ ಸರ್ಕಾರ

ಈಗಾಗಲೇ ಸೋಂಕಿಗೆ ಒಳಗಾಗಿರುವ ಹಾಗೂ ಸದ್ಯ SARS-COV-2 ಸೋಂಕು ಹೊಂದಿರುವ ಜನಸಂಖ್ಯೆಯ ಅನುಪಾತವನ್ನು ನಿಗದಿ ಮಾಡುವುದು ಇದರ ಗುರಿ. ಈ ಸಮೀಕ್ಷೆಗೆ 18 ವರ್ಷಕ್ಕಿಂತ ಮೇಲ್ಪಟ್ಟವರನ್ನು ಒಳಪಡಿಸಲಾಗಿದೆ. ಬಿಬಿಎಂಪಿಯ ಎಂಟು ವಲಯಗಳು ಸೇರಿ, ರಾಜ್ಯದ ಎಲ್ಲಾ 30 ಜಿಲ್ಲೆಗಳನ್ನು ಸಮೀಕ್ಷೆಯಲ್ಲಿ ಸೇರಿಸಲಾಗಿದೆ..

Karnataka
ಸರ್ಕಾರ
author img

By

Published : Jan 30, 2021, 3:43 PM IST

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಆರ್ಭಟದ ತೀವ್ರತೆ ಹಂತ ಹಂತವಾಗಿ ಇಳಿಮುಖವಾಗುತ್ತಿದೆ. ಕೊರೊನಾ ಯಾವ ಹಂತದಲ್ಲಿದೆ ಎಂಬುದರ ಕುರಿತು ಸೆಪ್ಟೆಂಬರ್​ನಲ್ಲಿ ಸರ್ವೆ ಕಾರ್ಯ ನಡೆಸಲಾಗಿತ್ತು.

ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿ ಯಾವ ರೀತಿ ಅಭಿವೃದ್ಧಿಯಾಗಿದೆ ಎಂಬುದರ ಕುರಿತು ಎಲ್ಲಾ ಮಟ್ಟದಲ್ಲೂ ಸೆರೋ ಸಮೀಕ್ಷೆ ನಡೆಸಲಾಗಿತ್ತು. ಇದೀಗ ಆರೋಗ್ಯ ಇಲಾಖೆಯು ಎರಡನೇ ಹಂತದ ಸಮೀಕ್ಷೆಗೆ ಸಜ್ಜಾಗುತ್ತಿದ್ದು, ಕೊರೊನಾ ರೋಗ ನಿರೋಧಕ ಶಕ್ತಿ ಯಾವ ರೀತಿ ಹೆಚ್ಚಾಗಿದೆ.‌ ಭವಿಷ್ಯದಲ್ಲಿ ಕೊರೊನಾ ಹೇಗೆ ಕಾಡಲಿದೆ ಎಂಬ ನಿಟ್ಟಿನಲ್ಲಿ ಸಮೀಕ್ಷೆ ನಡೆಸಲು ಮುಂದಾಗಿದೆ.

ಜನವರಿ 25ರಿಂದ ಎರಡನೇ ‌ಸುತ್ತಿನ‌ ಸಮೀಕ್ಷೆ ಪ್ರಾರಂಭವಾಗಿದ್ದು, ಈಗಾಗಲೇ ಸೋಂಕಿಗೆ ಒಳಗಾಗಿರುವ ಹಾಗೂ ಸದ್ಯ SARS-COV-2 ಸೋಂಕು ಹೊಂದಿರುವ ಜನಸಂಖ್ಯೆಯ ಅನುಪಾತವನ್ನು ನಿಗದಿ ಮಾಡುವುದು ಇದರ ಗುರಿಯಾಗಿದೆ. ಈ ಸಮೀಕ್ಷೆಗೆ 18 ವರ್ಷಕ್ಕಿಂತ ಮೇಲ್ಪಟ್ಟವರನ್ನು ಒಳಪಡಿಸಲಾಗಿದೆ. ಬಿಬಿಎಂಪಿಯ ಎಂಟು ವಲಯಗಳು ಸೇರಿದಂತೆ, ರಾಜ್ಯದ ಎಲ್ಲಾ 30 ಜಿಲ್ಲೆಗಳನ್ನು ಸಮೀಕ್ಷೆಯಲ್ಲಿ ಸೇರಿಸಲಾಗಿದೆ.

ಸಮೀಕ್ಷೆಯಿಂದ ವಿನಾಯಿತಿ ನೀಡಲಾದ ಮಾನದಂಡಗಳು ಹೀಗಿವೆ:

ಕೋವಿಡ್ ಖಚಿತ ಪಟ್ಟ ಪ್ರಕರಣಗಳು
ಪರೀಕ್ಷೆಗಾಗಿ ಮಾದರಿಗಳನ್ನು ಒದಗಿಸಲು ಇಚ್ಛಿಸದವರು
ಒಪ್ಪಿಗೆ ಪತ್ರಕ್ಕೆ ಮಾಹಿತಿ ನೀಡಲು ಸಾಧ್ಯವಿಲ್ಲದವರು
ಮೊದಲ ಸುತ್ತಿನ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರು

ಸಮೀಕ್ಷೆಗಾಗಿ ಪ್ರತಿ ಜಿಲ್ಲೆಯೂ ಒಂದು ಘಟಕವಾಗಿರುತ್ತದೆ. ಬೆಂಗಳೂರಿನಲ್ಲಿ 8 ವಲಯಗಳನ್ನು ಜಿಲ್ಲೆಗಳೆಂದು ಪರಿಗಣಿಸಿ ಒಟ್ಟು 38 ಘಟಕಗಳನ್ನು ನಿರ್ಮಿಸಲಾಗಿದೆ. ಪ್ರತಿ ಘಟಕದಿಂದ ಆರೋಗ್ಯ ಸಂಸ್ಥೆಗಳನ್ನು ಆಯ್ಕೆ ಮಾಡಲಾಗುತ್ತದೆ.‌ ಸಮೀಕ್ಷೆಯನ್ನು ಆಸ್ಪತ್ರೆಗಳಲ್ಲಿ ಹಾಗೂ ಆಯ್ಕೆ ಮಾಡಲಾದ ಜನಸಮುದಾಯದಲ್ಲಿ ವರ್ಗ ಮಾಡಲಾಗಿದೆ.

1) ಕಡಿಮೆ ಗಂಡಾಂತರದ ವರ್ಗ
2) ಸಾಧಾರಣ ಗಂಡಾಂತರದ ವರ್ಗ
3) ಹೆಚ್ಚಿನ ಗಂಡಾಂತರದ ವರ್ಗ

ಎರಡನೇ ಸುತ್ತಿನ ಸಮೀಕ್ಷೆಗಾಗಿ RATಯನ್ನು ನಡೆಸಲಾಗುವುದಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.