ETV Bharat / state

ಮಹಾರಾಷ್ಟ್ರಕ್ಕೆ ತೆರಳುವ ರೈಲ್ವೆ ಪ್ರಯಾಣಿಕರಿಗೆ ಕೋವಿಡ್ ಎಸ್​​ಒಪಿ ಕಡ್ಡಾಯ‌ - Bangalore corona news

ಆರ್‌ಟಿ ಪಿಸಿಆರ್ ಪರೀಕ್ಷೆಯ ರಿಪೋರ್ಟ್ ಹೊಂದಿರದ ಪ್ರಯಾಣಿಕರಿಗೆ ರೈಲ್ವೆ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಒಂದು ವೇಳೆ ಪ್ರಯಾಣಿಕರಿಗೆ ಕೋವಿಡ್ ಪಾಸಿಟಿವ್ ಕಂಡು ಬಂದರೆ, ಹೆಚ್ಚಿನ ಚಿಕಿತ್ಸೆಗಾಗಿ ಕೋವಿಡ್ ಕೇರ್ ಸೆಂಟರ್​ಗೆ (ಸಿಸಿಸಿ) ಕಳುಹಿಸಲಾಗುತ್ತದೆ.

Covid SOP test
ಕೋವಿಡ್ ಎಸ್​​ಒಪಿ ಪರೀಕ್ಷೆ
author img

By

Published : Nov 24, 2020, 9:36 AM IST

ಬೆಂಗಳೂರು: ಕೋವಿಡ್ ಹಿನ್ನೆಲೆ ರೈಲ್ವೆ ಪ್ರಯಾಣಿಕರಿಗೆ ನವೆಂಬರ್ 25 ರಿಂದ ಜಾರಿಗೆ ಬರುವಂತೆ ಮಹಾರಾಷ್ಟ್ರ ಸರ್ಕಾರ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಅನ್ನು ಬಿಡುಗಡೆ ಮಾಡಿದೆ.

ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್), ರಾಜಸ್ಥಾನ, ಗುಜರಾತ್ ಮತ್ತು ಗೋವಾ ರಾಜ್ಯಗಳಲ್ಲಿನ ನಿಲ್ದಾಣಗಳಲ್ಲಿ ಉಳಿದುಕೊಂಡರೆ ಅಥವಾ ನಿಲ್ಲಿಸಿದರೆ ರೈಲುಗಳ ಮೂಲಕ ಮಹಾರಾಷ್ಟ್ರಕ್ಕೆ ಪ್ರಯಾಣಿಸುವ ಎಲ್ಲ ಪ್ರಯಾಣಿಕರು ಆರ್‌ಟಿ-ಪಿಸಿಆರ್ (Real-time reverse transcription polymerase chain reaction) ನೆಗೆಟಿವ್ ರಿಪೋರ್ಟ್ ಅನ್ನು ಹೊಂದಿರಬೇಕು. ಅದು ಕೂಡ 96 ಗಂಟೆಯೊಳಗಿನ ನೆಗೆಟಿವ್ ರಿಪೋರ್ಟ್ ಆಗಿರಬೇಕು ಎಂದು ತಿಳಿಸಲಾಗಿದೆ. ‌

ಇನ್ನು ಆರ್‌ಟಿ-ಪಿಸಿಆರ್ ಪರೀಕ್ಷೆಯ ರಿಪೋರ್ಟ್ ಹೊಂದಿರದ ಪ್ರಯಾಣಿಕರಿಗೆ ರೈಲ್ವೆ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತದೆ. ನೆಗೆಟಿವ್ ಬಂದರೆ ರೋಗ ಲಕ್ಷಣಗಳಿಲ್ಲದ ಪ್ರಯಾಣಿಕರಿಗೆ ಮನೆಗೆ ಹೋಗಲು ಅನುಮತಿಸಲಾಗುತ್ತಿದೆ. ರೋಗಲಕ್ಷಣಗಳು ಇದ್ದು ಪ್ರಯಾಣಿಕರನ್ನು ಪ್ರತ್ಯೇಕಿಸಿ ಆಂಟಿಜೆನ್ ಪರೀಕ್ಷೆಗೆ ಒಳಪಡಿಸಲಾಗುತ್ತೆ. ಅಲ್ಲಿ ಆಂಟಿಜೆನ್ ಪರೀಕ್ಷೆ ವೇಳೆ ನೆಗಟಿವ್ ಬಂದರೆ, ಅಂತಹ ಪ್ರಯಾಣಿಕರಿಗೆ ಮನೆಗೆ ತೆರಳಲು ಅವಕಾಶವಿರುತ್ತದೆ.

ಒಂದು ವೇಳೆ ಪ್ರಯಾಣಿಕರಿಗೆ ಕೋವಿಡ್ ಪಾಸಿಟಿವ್ ಕಂಡುಬಂದರೆ, ಹೆಚ್ಚಿನ ಚಿಕಿತ್ಸೆಗಾಗಿ ಕೋವಿಡ್ ಕೇರ್ ಸೆಂಟರ್​ಗೆ (ಸಿಸಿಸಿ) ಕಳುಹಿಸಲಾಗುವುದು. ಸಿಸಿಸಿ ಸೇರಿದಂತೆ ಹೆಚ್ಚಿನ ಆರೈಕೆಯ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕಾಗುತ್ತೆ.‌ ಸಂಬಂಧಪಟ್ಟ ಮುನ್ಸಿಪಲ್ ಕಮಿಷನರ್‌ಗಳು / ಜಿಲ್ಲಾಧಿಕಾರಿಗಳು ಇದಕ್ಕೆ ನೋಡಲ್ ಅಧಿಕಾರಿಗಳಾಗಿರುತ್ತಾರೆ.‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.