ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಎಷ್ಟೇ ಭೀಕರವಾಗಿದ್ದರೂ, ವಯೋವೃದ್ಧರಿಗೆ ಲಸಿಕೆ ದೊರೆತ ಕಾರಣ ಮೊದಲ ಅಲೆಗಿಂತ ಸಾವಿನ ಪ್ರಮಾಣದಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. 50 ವರ್ಷ ಮೇಲ್ಪಟ್ಟವರ ಸಾವಿನಲ್ಲಿ 23.62% ಇಳಿಕೆಯಾಗಿದೆ.
ಅಂಕಿ ಅಂಶ :
ವಯಸ್ಸು | 1ನೇ ಅಲೆ | 2ನೇ ಅಲೆ |
1-19 | 74 | 31 |
20-49 | 2175 | 2313 |
50+ | 10,212 | 7,832 |
ಮಾರ್ಚ್ 2021 ರ 28, ರಂದು 3000 ಪ್ರಕರಣಗಳು ವರದಿಯಾಗಿದ್ದವು. ತಜ್ಞರ ಪ್ರಕಾರ ಎರಡನೇ ಅಲೆಯ ಆರಂಭ ಎಂದು ಪರಿಗಣಿಸುವುದಾದರೆ, 2020 ಮಾರ್ಚ್ 8 ರಿಂದ 2021 ರ ಮಾರ್ಚ್ 27 ರ ಅವಧಿ ಮೊದಲ ಅಲೆ ತಗ್ಗಿದ ಅವಧಿ ಎಂದು ಪರಿಗಣಿಸಬಹುದಾಗಿದೆ. ಈ ಬಾರಿ ಹಾಸಿಗೆ ಕೊರತೆ, ಆಮ್ಲಜನಕ, ಔಷಧಿ ಅಲಭ್ಯತೆ ಎಲ್ಲಾ ಸಮಸ್ಯೆಗಳಿದ್ದರೂ, ಹಿರಿಯ ನಾಗರಿಕರ ಮರಣ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅಲ್ಲದೆ ಮೊದಲ ಅಲೆಯಲ್ಲಿ 50 ವರ್ಷದೊಳಗಿನ 2,205 ಮಂದಿ ಮತ್ತು 50 ಮೇಲ್ಪಟ್ಟ 10,212 ಮಂದಿ ಮೃತಪಟ್ಟಿದ್ದರು.
ಎರಡನೇ ಅಲೆಯಲ್ಲಿ ಮಾರ್ಚ್ 28 ರಿಂದ ಮೇ 17 ರವರೆಗೆ 50 ವರ್ಷದೊಳಗಿನ 2,304, 50 ವರ್ಷ ಮೇಲ್ಪಟ್ಟ 7,832 ಜನ ಮೃತರಾಗಿದ್ದಾರೆ. 50 ವರ್ಷ ಕೆಳಗಿನವರ ಮರಣ ಪ್ರಮಾಣ ಅಷ್ಟೇ ಇದ್ದರೂ, 50 ವರ್ಷ ಮೇಲ್ಪಟ್ಟವರ ಮರಣ ದರ ಬಹುತೇಕ ಮೊದಲ ಅಲೆಗಿಂತ ಕಡಿಮೆ ಆಗಿದೆ.
ತಜ್ಞರ ಪ್ರಕಾರ ಕೋವಿಡ್ ಲಸಿಕೆಯಿಂದ 6 ಸಾವಿರ ಹಿರಿಯ ನಾಗರಿಕರ ಜೀವ ಉಳಿದಿದೆ. ಲಸಿಕೆಯ ಪಡೆಯದೇ ಇರುತ್ತಿದ್ದರೆ ಹಿರಿಯ ನಾಗರಿಕರ ಸಾವಿನ ಪ್ರಮಾಣ 13 ಸಾವಿರ ದಾಟಿರುತ್ತಿತ್ತು.