ಬೆಂಗಳೂರು: ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಆದರೆ ಇದ್ಯಾವುದನ್ನೂ ಲೆಕ್ಕಿಸದ ಬಿಎಂಟಿಸಿ ಸಿಬ್ಬಂದಿ ಕುರಿಗಳ ರೀತಿ ಜನರನ್ನು ತುಂಬಿಕೊಂಡು ಪ್ರಯಾಣ ಮಾಡುತ್ತಿದ್ದಾರೆ.
ಇದಿಷ್ಟೇ ಅಲ್ಲದೇ ಸಾಮಾಜಿಕ ಅಂತರದ ಉಲ್ಲಂಘನೆ ಕುರಿತು ಯಾರಾದ್ರು ಪ್ರಶ್ನೆ ಮಾಡ್ತಾರೆ ಎಂಬ ಉದ್ದೇಶದಿಂದ ಬಸ್ನಲ್ಲಿ ಕೆಳಗೆ ಕೂರಿಸಿ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗೆಯೇ ಕೇವಲ 30 ಪ್ರಯಾಣಿಕರನ್ನು ಮಾತ್ರ ಕರೆದೊಯ್ಯುವ ಸರ್ಕಾರದ ನಿಯಮಕ್ಕೆ ಬಿಎಂಟಿಸಿ ಸಿಬ್ಬಂದಿ ತಿಲಾಂಜಲಿ ಹಾಡಿದ್ದಾರೆ. ಕಲೆಕ್ಷನ್ ಆಸೆಗೆ ಸೀಟ್ಗಳು ಭರ್ತಿಯಾದ್ರೆ ಸ್ಟ್ಯಾಂಡಿಂಗ್ ಜಾಗದಲ್ಲಿ ಕುಳಿತುಕೊಳ್ಳಲು ಅವಕಾಶವನ್ನು ಕಲ್ಪಿಸುತ್ತಿದ್ದಾರೆ.
ಕೊರೊನಾ ಹರಡುವಿಕೆಯ ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿರುವ ಆದೇಶವನ್ನು ನೇರವಾಗಿ ಉಲ್ಲಂಘಿಸಿದ ದೃಶ್ಯ ಬೆಂಗಳೂರಿನ ಟೋಲ್ಗೇಟ್ ನಿಂದ ಮಾಗಡಿಗೆ ಸಂಚರಿಸುತ್ತಿದ್ದ ಬಸ್ನಲ್ಲಿ ಕಂಡುಬಂದಿದೆ.