ETV Bharat / state

ಕೋವಿಡ್‌ ಫಲಿತಾಂಶ ವಿಳಂಬ, 40 ಲ್ಯಾಬ್‌ಗಳಿಗೆ ದಂಡ: ಡಿಸಿಎಂ ಅಶ್ವತ್ಥ ನಾರಾಯಣ್ - ಕೊರೊನಾ

ಕೋವಿಡ್‌ ವರದಿ ವಿಳಂಬವಾಗಿ ನೀಡಿದಕ್ಕೆ ಸರ್ಕಾರಿ ಮತ್ತು ಖಾಸಗಿ ಲ್ಯಾಬ್‌ಗಳಿಗೆ ಒಂದು ಸ್ಯಾಂಪಲ್‌ ಮೇಲೆ 200 ರೂ.ನಂತೆ ದಂಡ ವಿಧಿಸಲಾಗಿದೆ ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಡಿಸಿಎಂ ಅಶ್ವತ್ಥನಾರಾಯಣ್
ಡಿಸಿಎಂ ಅಶ್ವತ್ಥನಾರಾಯಣ್
author img

By

Published : May 24, 2021, 9:32 PM IST

ಬೆಂಗಳೂರು: ಕೋವಿಡ್‌ ಪರೀಕ್ಷೆ ವರದಿಗಳನ್ನು ವಿಳಂಬವಾಗಿ ನೀಡಿದ್ದಕ್ಕೆ ಸರ್ಕಾರಿ ಮತ್ತು ಖಾಸಗಿ ಲ್ಯಾಬ್‌ಗಳ ಮೇಲೆ ಸರ್ಕಾರ ಮೊದಲೇ ಎಚ್ಚರಿಕೆ ನೀಡಿದಂತೆ ಸ್ಯಾಂಪಲ್‌ ಕಳುಹಿಸಿಕೊಟ್ಟ 24 ಗಂಟೆಗಳ ಒಳಗಾಗಿ ರಿಸಲ್ಟ್‌ ಕೊಡದೇ, ಐಸಿಎಂಆರ್‌ ಪೋರ್ಟಲ್‌ಗೆ ಅಪ್ಲೋಡ್​ ಮಾಡದ ಕಾರಣ ಒಂದು ಸ್ಯಾಂಪಲ್‌ ಮೇಲೆ 200 ರೂ.ನಂತೆ ದಂಡ ವಿಧಿಸಲಾಗಿದೆ ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.

ರಾಜ್ಯ ಕೋವಿಡ್‌ ಕಾರ್ಯಪಡೆ ಮುಖ್ಯಸ್ಥ ಉಪ‌ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ಸಭೆಯ ನಂತರ ಡಿಸಿಎಂ ಈ ಮಾಹಿತಿ ನೀಡಿದ್ದಾರೆ.

ಅಶ್ವತ್ಥ ನಾರಾಯಣ ಹೇಳಿದ್ದೇನು..?

24 ಗಂಟೆ ಒಳಗಾಗಿ ರಿಸಲ್ಟ್‌ ಕೊಡಬೇಕು ಎಂದು ಸರ್ಕಾರವು ಲ್ಯಾಬ್‌ಗಳಿಗೆ ಡೆಡ್‌ಲೈನ್‌ ವಿಧಿಸಿತ್ತು. ಆದರೆ, ಕೆಲ ಲ್ಯಾಬ್‌ಗಳು ಪರಿಸ್ಥಿತಿಯ ತೀವ್ರತೆ ಅರಿಯದೇ ಉಪೇಕ್ಷೆ ಮಾಡಿರುವುದು ತಪ್ಪು. ಹೀಗಾಗಿ ದಂಡ ಹಾಕಲಾಗಿದೆ. ಮೇ 8ರಿಂದ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಲಾಗಿದ್ದು, 3,034 ಸ್ಯಾಂಪಲ್‌ಗಳ ವರದಿ ನೀಡಲು ತಡ ಮಾಡಿದ ಕಾರಣಕ್ಕೆ ಸರ್ಕಾರಿ ಸ್ವಾಮ್ಯದ 9 ಪ್ರಮುಖ ಲ್ಯಾಬ್‌ಗಳಿಗೆ 6,06,800 ರೂ. ಹಾಗೂ ಖಾಸಗಿ ವಲಯದ 31 ಲ್ಯಾಬ್‌ಗಳಿಂದ 7,069 ಸ್ಯಾಂಪಲ್‌ಗಳು ವಿಳಂಬವಾಗಿ ಬಂದಿದ್ದು, ಅವುಗಳಿಗೆ ಒಟ್ಟು 14,13,800 ರೂ. ದಂಡ ವಿಧಿಸಲಾಗಿದೆ.

ಐಸಿಎಂಆರ್‌ ಪೋರ್ಟಲ್‌ಗೆ ಅಪ್ಲೋಡ್​ ಮಾಡದೇ ಫಲಿತಾಂಶದ ವರದಿಗಳನ್ನು ಬಹಿರಂಗ ಮಾಡಿದ ಕಾರಣಕ್ಕಾಗಿ 5 ಲ್ಯಾಬ್‌ಗಳಿಗೆ ದಂಡ ವಿಧಿಸಿ ಮುಚ್ಚಿಸಲಾಗಿದೆ. ಇನ್ನೂ ಬಹಳ ವಿಳಂಬ ಮಾಡಿದ 41 ಲ್ಯಾಬ್‌ಗಳಿಗೆ ಶೋಕಾಸ್‌ ನೋಟೀಸ್ ಜಾರಿ ಮಾಡಲಾಗಿದೆ. ಸ್ಯಾಂಪಲ್‌ ತಲುಪಿದ 24 ಗಂಟೆಯೊಳಗೆ ರಿಸಲ್ಟ್‌ ಕೊಡುವುದರ ಜತೆಗೆ, ಪಾಸಿಟಿವ್‌ ಬಂದವರ ಮಾಹಿತಿಯನ್ನು ಐಸಿಎಂಆರ್‌ ಪೋರ್ಟಲ್‌ಗೆ ಅಪ್ಲೋಡ್​ ಮಾಡಬೇಕು. ಹೀಗೆ ಆಗದಿರುವುದರಿಂದ ಚಿಕಿತ್ಸೆ ತಡವಾಗಿ ಅನೇಕರು ಜೀವ ಕಳೆದುಕೊಂಡಿದ್ದಾರೆ. ಲ್ಯಾಬ್‌ಗಳ ಇಂಥ ಧೋರಣೆ ಸಹಿಸಲು ಸಾಧ್ಯವಿಲ್ಲ.

1,100 ಸ್ಯಾಂಪಲ್‌ ರಿಸಲ್ಟ್‌ ತಡ ಮಾಡಿದ್ದಕ್ಕೆ ಮೆಡ್‌ಜಿಯೋನೋಂ ಲ್ಯಾಬ್‌ಗೆ 2,20,000 ರೂ., 862 ರಿಸಲ್ಟ್‌ ತಡ ಮಾಡಿದ ಕಿದ್ವಾಯಿ ಸ್ಮಾರಕ ಆಸ್ಪತ್ರೆಯ ಲ್ಯಾಬ್‌ಗೆ 1,72,400 ರೂ., 659 ವರದಿ ವಿಳಂಬ ಮಾಡಿದ ಯುರೋಫಿನ್ಸ್‌ ಕ್ಲಿನಿಕಲ್‌ ಗೆನೆಟಿಕ್ಸ್‌ ಇಂಡಿಯಾ ಲ್ಯಾಬ್‌ಗೆ 1,31,800 ರೂ. ದಂಡ ವಿಧಿಸಲಾಗಿದೆ. ಸರ್ಕಾರಿ ಸ್ವಾಮ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ದಂಡಕ್ಕೆ ವಿಧಿಸಿರುವ ಲ್ಯಾಬ್‌ಗಳಿವು.

ಖಾಸಗಿ ಲ್ಯಾಬ್‌ಗಳಲ್ಲಿ 938 ವರದಿಗಳನ್ನು ತಡವಾಗಿ ನೀಡಿದ ಡಾ.ಲಾಲ್‌ ಪಾಥ್‌ಲ್ಯಾಬ್ಸ್‌ಗೆ 1,87,600 ರೂ., 918 ರಿಸಲ್ಟ್‌ ನೀಡಲು ತಡ ಮಾಡಿದ್ದಕ್ಕೆ ಮೆಡ್‌ಜಿಯೋನೋಂ ಲ್ಯಾಬ್‌ಗೆ 1,83,600 ರೂ., ಮಣಿಪಾಲ್‌ ಆಸ್ಪತ್ರೆಯ ಲ್ಯಾಬ್‌ 880 ತಡವಾಗಿ ನೀಡಿದ್ದಕ್ಕೆ 1,76,000 ರೂ., 756 ರಿಸಲ್ಟ್‌ ತಡ ಮಾಡಿದ ಪ್ರಿಮಾ ಡಯಾಗ್ನೋಸ್ಟಿಕ್​ ಲ್ಯಾಬ್‌ಗೆ 1,51,200 ರೂ., 585 ವರದಿ ವಿಳಂಬ ಮಾಡಿದ 1ಎಂಜಿ ಲ್ಯಾಬ್ಸ್‌ಗೆ 1,17,000 ರೂ., ಬೆಂಗಳೂರು ಅರ್ಬನ್‌ ಲ್ಯಾಬ್ಸ್‌ (05) 509 ವರದಿಗಳನ್ನು ವಿಳಂಬ ಮಾಡಿದ್ದಕ್ಕಾಗಿ 1,01,800 ರೂ. ದಂಡ ವಿಧಿಸಲಾಗಿದೆ. ಖಾಸಗಿ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಹೆಚ್ಚು ದಂಡಕ್ಕೆ ತುತ್ತಾದ ಲ್ಯಾಬ್‌ಗಳಿವು.

ಸದ್ಯಕ್ಕೆ 9 ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳು ಹೆಚ್ಚಾಗಿರುವುದರಿಂದ ಎಲ್ಲೆಡೆ ಕೋವಿಡ್‌ ಪರೀಕ್ಷೆಗಳನ್ನು ಹೆಚ್ಚಿಸಬೇಕು. ಮನೆ ಮನೆಗೂ ತೆರಳಿ ರೋಗ ಲಕ್ಷಣಗಳಿದ್ದವರನ್ನು ಪರೀಕ್ಷೆ ಮಾಡಬೇಕು. ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ಪ್ರಮಾಣವನ್ನು ದುಪ್ಪಟ್ಟು ಮಾಡಬೇಕು. ಒಬ್ಬ ಪಾಸಿಟಿವ್‌ ಬಂದವರು ಪತ್ತೆಯಾದರೆ ಪ್ರಾಥಮಿಕ ಸಂಪರ್ಕಕ್ಕೆ ಬಂದ ಕನಿಷ್ಠ ನಾಲ್ವರನ್ನಾದರೂ ಪರೀಕ್ಷೆಗೆ ಒಳಪಡಿಸಬೇಕು ಹಾಗೂ ಸೋಂಕು ಕಂಡು ಬಂದರೆ ಅಂಥಹವರನ್ನು ಕೂಡಲೇ ಸ್ಥಳೀಯ ಕೋವಿಡ್‌ ಕೇರ್‌ಗಳಿಗೆ ಶಿಫ್ಟ್‌ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಚಾಮರಾಜನಗರದಲ್ಲಿ ಕಿಟ್‌ಗಳಿಲ್ಲ ಅಂತ ನೆಪ ಹೇಳಿ ಪರೀಕ್ಷೆ ನಡೆಸುತ್ತಿಲ್ಲ ಎಂಬ ಮಾಹಿತಿಯನ್ನು ಶಾಲಿನಿ ರಜನೀಶ್‌ ಗಮನಕ್ಕೆ ತಂದರು. ಕೂಡಲೇ ಅಲ್ಲಿಗೆ ಅಗತ್ಯವಾದ ಕಿಟ್‌ಗಳನ್ನು ಕಳಿಸುವಂತೆ ಸೂಚಿಸಿದ್ದೇನೆ ಎಂದು ಡಿಸಿಎಂ ಹೇಳಿದ್ದಾರೆ.

ಸದ್ಯಕ್ಕೆ ರಾಜ್ಯದಲ್ಲಿ ಬ್ಲ್ಯಾಕ್‌ ಫಂಗಸ್‌ ಔಷಧಕ್ಕೆ ಬಹಳ ಬೇಡಿಕೆ ಇದ್ದು, ತಮ್ಮಲ್ಲಿ ಸ್ಟಾಕ್‌ ಇದ್ದರೆ ಯಾರು ಬೇಕಾದರೂ ತುರ್ತಾಗಿ ಪೂರೈಕೆ ಮಾಡಬಹುದು. ನಿಗದಿತ ದರ ನೀಡಿ ಸರ್ಕಾರ ತಕ್ಷಣ ಖರೀದಿ ಮಾಡಲಿದೆ. ಆಂಫೊಟೆರಿಸಿನ್ - ಬಿ ಔಷಧವನ್ನು (Amphotericin-B; 50mg) 3 ಲಕ್ಷ ವೈಯಲ್ಸ್ ಖರೀದಿ ಮಾಡುವಂತೆ ಸಭೆಯಲ್ಲಿದ್ದ ಕೋವಿಡ್ ಔಷಧ ಉಸ್ತುವಾರಿ ಅಧಿಕಾರಿ‌ ಅಜುಂ ಪರ್ವೇಜ್‌ ಅವರಿಗೆ ನಿರ್ದೇಶನ ನೀಡಿದ್ದಾರೆ. ರಾಜ್ಯದಲ್ಲಿ ರೆಮ್ಡೆಸಿವಿರ್‌ ಬೇಡಿಕೆಗಿಂತ ಹೆಚ್ಚು ಪ್ರಮಾಣದಲ್ಲಿ ದಾಸ್ತಾನಿದೆ ಎಂಬ ಮಾಹಿತಿ ನೀಡಿದ್ದಾರೆ.

ಓದಿ:ಹತ್ಯೆ ಪ್ರಕರಣ: ವಿನಯ್ ಕುಲಕರ್ಣಿಗೆ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.