ETV Bharat / state

ಬೆಂಗಳೂರಲ್ಲಿ ಮತ್ತೊಬ್ಬ ಎಎಸ್​ಐಗೆ ಪಾಸಿಟಿವ್ : 62  ಸಿಬ್ಬಂದಿ ಕ್ವಾರಂಟೈನ್ - Corona infection to police in Bengaluru

ಸಿಲಿಕಾನ್ ಸಿಟಿಯಲ್ಲಿ ಮತ್ತೋರ್ವ ಎಎಸ್​ಐಗೆ ಕೋವಿಡ್​ ಪಾಸಿಟಿವ್ ಬಂದಿದ್ದು, ಇತ್ತೀಚೆಗೆ ಮೃತಪಟ್ಟಿದ್ದ ಸಂಚಾರಿ ಎಎಸ್​ಐನಿಂದ ಸೋಂಕು ತಗುಲಿದೆ.

Covid positive for another ASI in Bengaluru
ಬೆಂಗಳೂರಿನಲ್ಲಿ ಮತ್ತೋರ್ವ ಎಎಸ್​ಐಗೆ ಕೋವಿಡ್​ ಪಾಸಿಟಿವ್
author img

By

Published : Jun 17, 2020, 11:27 AM IST

ಬೆಂಗಳೂರು : ಕೊರೊನಾ ಸೋಂಕಿನಿಂದ ಮೃತಪಟ್ಟ ವಿವಿ ಪುರಂ ಸಂಚಾರಿ ಪೊಲೀಸ್ ಠಾಣೆಯ ಎಎಸ್​​ಐ ಜೊತೆ ಸಂಪರ್ಕ ಹೊಂದಿದ್ದ ಮತ್ತೋರ್ವ ಎಎಸ್ಐಗೆ ಸೋಂಕು ತಗುಲಿದೆ. ಹೀಗಾಗಿ ಠಾಣೆಯ ಇನ್ಸ್​​ಪೆಕ್ಟರ್​ ಸೇರಿದಂತೆ 62 ಜನ ಸಿಬ್ಬಂದಿಯನ್ನ ಕ್ವಾರಂಟೈನ್ ಮಾಡಲಾಗಿದೆ.

ಸೋಂಕು ತಗುಲಿರುವ 57 ವರ್ಷದ ಎಎಸ್​ಐ ಅನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಠಾಣೆಯನ್ನು ಸೀಲ್ ಡೌನ್ ಮಾಡಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಸೋಂಕಿತ ಎಎಸ್​ಐ ಇತ್ತೀಚೆಗೆ ಮೃತಪಟ್ಟಿದ್ದ ಎಎಸ್​ಐ ಜೊತೆ ಸಂಪರ್ಕ ಹೊಂದಿದ್ದರು. ಅಲ್ಲದೇ, ಕಂಟೇನ್​ಮೆಂಟ್​ ಝೋನ್​ಗಳಲ್ಲಿ ಕಾರ್ಯನಿರ್ವಹಿಸಿದ್ದರು. 2 ದಿನದ ಹಿಂದೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಗಂಟಲು ‌ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ.

ಆತಂಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು‌: ಸೋಂಕು ವ್ಯಾಪಿಸಿರುವ ಪ್ರದೇಶಗಳಲ್ಲಿ ಹಗಲು ರಾತ್ರಿ ಎನ್ನದೇ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ 15 ಜನರಿಗೆ ಪಾಸಿಟಿವ್ ಬಂದಿದೆ, ಓರ್ವ ಸಿಬ್ಬಂದಿ ಮೃತಪಟ್ಟಿದ್ದಾರೆ. 520 ಮಂದಿಯನ್ನು ಕ್ವಾರಂಟೈನ್​ ಮಾಡಲಾಗಿದೆ. ಹೀಗಾಗಿ ಕರ್ತವ್ಯದಲ್ಲಿರುವ ಪೊಲೀಸರು ಭಯಭೀತರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.