ದೇವನಹಳ್ಳಿ(ಬೆಂಗಳೂರು): ಚೀನಾದಲ್ಲಿ ಕೋವಿಡ್ ಉಲ್ಬಣಗೊಂಡಿರುವ ಹಿನ್ನೆಲೆ ಭಾರತದಲ್ಲೂ ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ. ಭಾರತದ ಸರ್ಕಾರದ ಪರಿಷ್ಕೃತ ಮಾರ್ಗಸೂಚಿಯಂತೆ ಇಂದಿನಿಂದ (ಡಿಸೆಂಬರ್ 24) ಬೆಳಗ್ಗೆ 10 ಗಂಟೆ ಜಾರಿಯಾಗುವಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್ ಮಾರ್ಗಸೂಚಿ ಪ್ರಕಟ ಮಾಡಲಾಗಿದೆ.
ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್ ಒಳಪಡಿಸಲಾಗುತ್ತದೆ. ವಿದೇಶದಿಂದ ಬರುವ ಶೇಕಡಾ 2 ರಷ್ಟು ಪ್ರಯಾಣಿಕರ ರ‍್ಯಾಂಡಮ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅವರ ಸ್ವ್ಯಾಬ್ ಮಾದರಿ ಸಂಗ್ರಹಿಸಿದ ನಂತರ ಅವರನ್ನ ಕಳುಹಿಸಲಾಗುತ್ತದೆ.
ರೋಗ ಲಕ್ಷಣ ಕಂಡು ಬಂದ ಪ್ರಯಾಣಿಕನನ್ನ ಪ್ರತ್ಯೇಕಗೊಳಿಸಲಾಗುತ್ತದೆ. 12 ವರ್ಷಗಳ ಒಳಗಿನ ಮಕ್ಕಳಿಗೆ ಆಗಮನದ ಪರೀಕ್ಷೆಯಲ್ಲಿ ವಿನಾಯತಿ ನೀಡಲಾಗಿದೆ. ರೋಗ ಲಕ್ಷಣವಿಲ್ಲದ ಪ್ರಯಾಣಿಕರು ತಮ್ಮ ಆರೋಗ್ಯವನ್ನ ಸ್ವಯಂ ನಿಗಾವಹಿಸುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಮೆಟ್ರೋ, ಬಿಎಂಟಿಸಿ ಬಸ್ಗಳಲ್ಲಿ ಮಾಸ್ಕ್ ಕಡ್ಡಾಯ.. ಹಬ್ಬ, ಹೊಸ ವರ್ಷಾಚರಣೆಗೆ ಎಚ್ಚರ ವಹಿಸಲು ಸೂಚನೆ