ಬೆಂಗಳೂರು: ನಗರದ ಅಪಾರ್ಟ್ಮೆಂಟ್ಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಮೂರಕ್ಕಿಂತ ಹೆಚ್ಚು ಕೋವಿಡ್ ಪ್ರಕರಣ ಇರುವ ಒಟ್ಟು 136 ಪ್ರದೇಶಗಳನ್ನು ಕಂಟೈನ್ಮೆಂಟ್ ಜೋನ್ಗಳೆಂದು ಘೋಷಿಸಲಾಗಿದ್ದು, ಇದರಲ್ಲಿ ಶೇ. 25ಕ್ಕೂ ಅಧಿಕವು ಅಪಾರ್ಟ್ಮೆಂಟ್ಗಳಲ್ಲೇ ಇವೆ.
ಎರಡು ದಿನಗಳ ಹಿಂದಷ್ಟೇ ಪೂರ್ವ ವಲಯದ ಅಪಾರ್ಟ್ಮೆಂಟ್ಗಳಲ್ಲಿ ಕಂಟೈನ್ಮೆಂಟ್ ಮಾಡಲಾಗಿದೆ. ರಾಂಕಾ ಅಪಾರ್ಟ್ಮೆಂಟ್ನ 60 ಜನರ ಕೋವಿಡ್ ಟೆಸ್ಟ್ ಮಾಡಲಾಗಿದ್ದು, 4 ಫ್ಲಾಟ್ಗಳನ್ನು ಸೀಲ್ಡೌನ್ ಮಾಡಲಾಗಿದೆ. ಮೂವರಿಗೆ ಕೋವಿಡ್ ದೃಢಪಟ್ಟಿದೆ. ಅಹುಜಾ ಅಪಾರ್ಟ್ಮೆಂಟ್ನಲ್ಲಿಯೂ 80 ಜನರ ಕೋವಿಡ್ ಟೆಸ್ಟ್ ಮಾಡಲಾಗಿದ್ದು, 5 ಫ್ಲಾಟ್ಗಳಿರುವ ಬ್ಲಾಕ್ ಒಂದನ್ನು ಸೀಲ್ಡೌನ್ ಮಾಡಲಾಗಿದೆ. ಎರಡೂ ಪ್ರಕರಣಗಳಲ್ಲಿಯೂ ಟ್ರಾವೆಲ್ ಹಿಸ್ಟರಿ ಕಂಡುಬಂದಿಲ್ಲ.
ನಗರದ ದಕ್ಷಿಣ ವಲಯದಲ್ಲಿ ಈವರೆಗೂ 13 ಕ್ಲಸ್ಟರ್ಗಳು ಪತ್ತೆಯಾಗಿದೆ. ಕೋರಮಂಗಲದಲ್ಲಿ 3 ಪಾಸಿಟಿವ್ ಪ್ರಕರಣ, ಚಂದ್ರಾರೆಡ್ಡಿ ಲೇಔಟ್ನಲ್ಲಿಯೂ ಹೆಚ್ಚು ಕೋವಿಡ್ ದೃಢಪಟ್ಟಿದೆ.
40 ಜನರ ಪ್ರಾಥಮಿಕ ಸಂರ್ಪಕಿತರ ಟೆಸ್ಟ್ ಮಾಡಲಾಗಿದೆ. ಮೊಬೈಲ್ ಟ್ರೇಸ್ ಟೀಂನಿಂದ ಪಾಸಿಟಿವ್ ತಿಳಿದ 5 ಗಂಟೆಯೊಳಗೆ ನಿವಾಸಕ್ಕೆ ತೆರಳಿ ಕೋವಿಡ್ ಪಾಸಿಟಿವ್ ರೋಗಿಗಳನ್ನು ಪರೀಕ್ಷೆ ನಡೆಸಿ, ಕ್ವಾರಂಟೈನ್ ಹಾಗೂ ಕಂಟೈನ್ಮೆಂಟ್ ಮಾಡಲಾಗಿದೆ.
ಒಂದೇ ಕಡೆ ಹೆಚ್ಚಿನ ಜನ ವಾಸಿಸುವ, ವಾತಾವರಣದ ಸಮಸ್ಯೆಯಿಂದಲೂ ಕೋವಿಡ್ ಹರಡಿರುವ ಸಾಧ್ಯತೆ ಇದೆ. ಇಲ್ಲದೆ ಬೊಮ್ಮನಹಳ್ಳಿ, ಯಲಹಂಕ, ಮಹದೇವಪುರ, ಆರ್.ಆರ್.ನಗರದ ಅಪಾರ್ಟ್ಮೆಂಟ್ಗಳಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.
ಇದನ್ನೂ ಓದಿ: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 7ರವರೆಗೆ ವ್ಯಾಪಕ ಮಳೆ ಸಾಧ್ಯತೆ