ETV Bharat / state

ಆಸ್ಪತ್ರೆಯಲ್ಲಿನ ಕೋವಿಡ್​ ರೋಗಿಗಳಿಗೆ ಊಟದ ಮೆನು ಬದಲು: ಯಾವ ದಿನ, ಯಾವ ಆಹಾರ?

ಪ್ರತಿ ದಿನ ರೋಗಿಗಳಿಗೆ, ವೈದ್ಯರಿಗೆ, ಅಧಿಕಾರಿಗಳಿಗೆ ಆಹಾರ ಒದಗಿಸಬೇಕು. ಅಲ್ಲದೆ ಸಮಯಕ್ಕೆ ಸರಿಯಾಗಿ ಊಟ ನೀಡಬೇಕು. ಪ್ರತಿ ವ್ಯಕ್ತಿಗೆ ಆಹಾರದ ವೆಚ್ಚಕ್ಕಾಗಿ 250 ರೂ. ಮೀರದಂತೆ ಕ್ರಮ ವಹಿಸಬೇಕು ಎಂದು ಆರೋಗ್ಯ ಇಲಾಖೆ ಆದೇಶಿಸಿದೆ.

Food menu
ಊಟದ ಮೆನು
author img

By

Published : Jul 2, 2020, 5:35 AM IST

ಬೆಂಗಳೂರು: ಜಿಲ್ಲಾ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೊರೊನಾ ಸೋಂಕಿತ ರೋಗಿಗಳಿಗೆ ಯಾವ ದಿನ, ಯಾವ ಆಹಾರ ನೀಡಬೇಕು ಎಂಬುದರ ಬಗ್ಗೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಎಲ್ಲ ಆಸ್ಪತ್ರೆಗಳಲ್ಲಿ ಈ ಮೆನು ಪ್ರಕಾರ ಆಹಾರ ನೀಡುವಂತೆ ತಾಕೀತು ಮಾಡಿದೆ.

ಜಿಲ್ಲಾ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸೋಂಕಿತರ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತಜ್ಞರ ಸಲಹೆಯ ಮೇರೆಗೆ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೂಚಿತ ಮೆನುವಿನಂತೆ ನೀಡಲು ಆರೋಗ್ಯ ಇಲಾಖೆ ಆದೇಶಿಸಿದೆ.

Health Department circulation
ಆರೋಗ್ಯ ಇಲಾಖೆಯ ಸುತ್ತೋಲೆ

ಪ್ರತಿದಿನ ಬೆಳಗ್ಗೆ 7 ಗಂಟೆಗೆ ಉಪಹಾರ, ಬೆಳಗ್ಗೆ 10 ಗಂಟೆಗೆ ಗಂಜಿ, ಹಣ್ಣು ಹಾಗೂ ಮಧ್ಯಾಹ್ನ 1 ಗಂಟೆಗೆ ಚಪಾತಿ ಊಟ ನೀಡಬೇಕು. ಸಂಜೆ 5.30ಕ್ಕೆ ಹಣ್ಣು, ಬಿಸ್ಕೆಟ್, ಸಂಜೆ 7 ಗಂಟೆಗೆ ಚಪಾತಿ ಊಟ ಹಾಗೂ ರಾತ್ರಿ 9 ಗಂಟೆಗೆ ಹಾಲು ವಿತರಿಸುವಂತೆ ಆರೋಗ್ಯ ಇಲಾಖೆ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

ಹೊಸ ಊಟದ ಮೆನು ವಿವರ:

ಬೆಳಗ್ಗೆ 7 ಗಂಟೆಯ ಮೆನು: ಉಪಹಾರಕ್ಕೆ ಸೋಮವಾರ ರವೆ ಇಡ್ಲಿ, ಮಂಗಳವಾರ ಪೊಂಗಲ್, ಬುಧವಾರ ಸೆಟ್​ ದೋಸೆ, ಗುರುವಾರ ಅಕ್ಕಿ ಇಡ್ಲಿ, ಶುಕ್ರವಾರ ಬಿಸಿಬೇಳೆ ಬಾತ್, ಶನಿವಾರ ಚೌ ಚೌ ಬಾತ್ ಹಾಗೂ ಭಾನುವಾರ ಸೆಟ್ ದೋಸೆ ನೀಡಬೇಕಿದೆ.

ಬೆಳಗ್ಗೆ 10 ಗಂಟೆಯ ಮೆನು: ಸೋಮವಾರ ಕಲ್ಲಂಗಡಿ ಹಣ್ಣು ಅಥವಾ ರಾಗಿ ಗಂಜಿ, ಮಂಗಳವಾರ ಪಪ್ಪಾಯ ಹಣ್ಣು, ಪಾಲಾಕ್ ಸೂಪ್, ಬುಧವಾರ ಕರಬೂಜ ಹಣ್ಣು, ರವೆ ಗಂಜಿ, ಗುರವಾರ ಕಲ್ಲಂಗಡಿ ಹಣ್ಣು ಮತ್ತು ಕ್ಯಾರೆಟ್ ಸೂಪ್, ಶುಕ್ರವಾರ ಪಪ್ಪಾಯ ಹಣ್ಣು ಮತ್ತು ರಾಗಿ ಗಂಜಿ, ಶನಿವಾರ ಕರಬೂಜ ಹಣ್ಣು ಮತ್ತು ಟೊಮ್ಯಾಟೊ ಸೋಪ್ ಹಾಗೂ ಭಾನುವಾರ ಪಪ್ಪಾಯಿ ಹಣ್ಣು ಮತ್ತು ರವೆ ಗಂಜಿ ಒದಗಿಸಬೇಕು.

ಮಧ್ಯಾಹ್ನ 1 ಗಂಟೆಯ ಮೆನು: ರೊಟ್ಟಿ ಅಥವಾ ಚಪಾತಿ ಎರಡು ವಿಧದ ಪಲ್ಯ, ಅನ್ನ, ಬೇಳೆಸಾರು, ಮೊಸರು ಅಥವಾ ಮೊಟ್ಟೆ

ಸಂಜೆ 5.30ರ ಮೆನು: ಏಲಕ್ಕಿ ಬಾಳೆಹಣ್ಣು ಜೊತೆಗೆ ಮೂರು ಮಾರಿ ಅಥವಾ ಎರಡು ಪ್ರೋಟೀನ್ ಬಿಸ್ಕೆಟ್ ಅಥವಾ ಎರಡು ಫ್ರೆಶ್ ಡೇಟ್ಸ್ ಹಾಗೂ ವಿಟಮಿನ್ 'ಸಿ'ಯುಕ್ತ ಮ್ಯಾಂಗೋ ಬಾರ್ಸಂಜೆ

ಸಂಜೆ 7 ಗಂಟೆಯ ಮೆನು: 2 ರೊಟ್ಟಿ ಅಥವಾ ಚಪಾತಿ, ಪಲ್ಯ, ಅನ್ನ, ಬೇಳೆ ಸಾರು ಮತ್ತು ಮೊಸರು

ರಾತ್ರಿ 9 ಗಂಟೆಯ ಮೆನು: ಫ್ಲೇವರ್ಡ್ ಮಿಲ್ಕ್

ಪ್ರತಿ ದಿನ ರೋಗಿಗಳಿಗೆ, ವೈದ್ಯರಿಗೆ, ಅಧಿಕಾರಿಗಳಿಗೆ ಆಹಾರ ಒದಗಿಸಬೇಕು. ಅಲ್ಲದೆ ಸಮಯಕ್ಕೆ ಸರಿಯಾಗಿ ಊಟ ನೀಡಬೇಕು. ಪ್ರತಿ ವ್ಯಕ್ತಿಗೆ ಆಹಾರದ ವೆಚ್ಚಕ್ಕಾಗಿ 250 ರೂ. ಮೀರದಂತೆ ಕ್ರಮ ವಹಿಸಬೇಕು. ಈ ಮೊತ್ತವನ್ನು ಎಆರ್‍ಎಸ್ ನಿಧಿ, ಜಿಲ್ಲಾಧಿಕಾರಿಗಳ ಅಧೀನದ ವಿಪತ್ತು ಪರಿಹಾರ ನಿಧಿಯಿಂದ ಪಡೆದುಕೊಳ್ಳುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.