ETV Bharat / technology

ನಿಮ್ಮ ನಿರೀಕ್ಷೆಗಿಂತ ಬೇಗ ಬರಲಿದೆ ಆಂಡ್ರಾಯ್ಡ್​ 16: ಗೂಗಲ್​

Android 16: ಆಂಡ್ರಾಯ್ಡ್​ 16 ಬಗ್ಗೆ ಗೂಗಲ್​ ಮಾಹಿತಿ ನೀಡಿದೆ. ಶೀಘ್ರದಲ್ಲೇ ಲೇಟೆಸ್ಟ್‌ ಅಪ್ಡೇಟ್‌ ಬಿಡುಗಡೆ ಮಾಡುವ ಕುರಿತು ಸ್ಪಷ್ಟನೆ ನೀಡಿದೆ.

GOOGLE CONFIRMS ANDROID 16 LAUNCH  ANDROID 16 TO RELEASE IN Q2 2025  ANDROID 16 RELEASE DATE  ANDROID 16 FEATURES
ಆಂಡ್ರಾಯ್ಡ್​ 16 (Google/Android Developer Blog)
author img

By ETV Bharat Tech Team

Published : Nov 5, 2024, 9:18 AM IST

Android 16: ಆಂಡ್ರಾಯ್ಡ್ 16 ಅಪ್ಡೇಟ್ ನಿರೀಕ್ಷೆಗಿಂತ ಬೇಗ ಬರಲಿದೆ. ಕಳೆದ ಅಕ್ಟೋಬರ್‌ನಲ್ಲಿ ಪಿಕ್ಸೆಲ್ ಮೊಬೈಲ್‌ಗಳಿಗೆ ಬಿಡುಗಡೆಯಾದ ಆಂಡ್ರಾಯ್ಡ್ ಒಎಸ್‌ನ(ಆಪರೇಟಿಂಗ್ ಸಿಸ್ಟಂ) ಇತ್ತೀಚಿನ ಆವೃತ್ತಿಯಂತಲ್ಲದೆ, ಮುಂದಿನ ವರ್ಷದ ಆರಂಭದಲ್ಲಿ ಮುಂದಿನ ಆಂಡ್ರಾಯ್ಡ್ ಆವೃತ್ತಿಯನ್ನು ಪ್ರಾರಂಭಿಸುವುದಾಗಿ ಗೂಗಲ್ ಹೇಳಿದೆ.

ಕಂಪನಿ ಅದರ ಇಕೋ ಸಿಸ್ಟಂ​ನಾದ್ಯಂತ ಡಿವೈಸ್​ ಲಾಂಚ್​ನ ಶೆಡ್ಯೂಲ್​ ಜೊತೆ ಒಎಸ್​ ಅನ್ನು ಉತ್ತಮವಾಗಿ ಜೋಡಿಸಲು ರಿಲೀಸ್​ ವಿಂಡೋ ಬದಲಾಯಿಸುತ್ತಿದೆ. ಅಪ್ಲಿಕೇಶನ್ ಸ್ಥಿರತೆ ಸುಧಾರಿಸಲು ಮತ್ತು ಬಳಕೆದಾರರಿಗೆ ಹೊಸ ವೈಶಿಷ್ಟ್ಯಗಳನ್ನು ಒದಗಿಸಲು Google ನಿಯಮಿತವಾಗಿ SDK (ಆಂಡ್ರಾಯ್ಡ್ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಕಿಟ್) ಒದಗಿಸುತ್ತದೆ.

ಗೂಗಲ್​ Q2 2025ರಲ್ಲಿ ಮೇಜರ್ ಲಾಂಚ್​ ಇರುತ್ತದೆ ಎಂದು ಸುಳಿವು ನೀಡಿದೆ (ಸಾಮಾನ್ಯ Q3 ಲಾಂಚ್​ ವಿಂಡೋದ ಬದಲಿಗೆ). ಅದರ ನಂತರ ನಾಲ್ಕನೇ ತ್ರೈಮಾಸಿಕದಲ್ಲಿ ಮೈನರ್​ ರಿಲೀಸ್​ ಇರುತ್ತದೆ. Q1 2025 ರಲ್ಲಿ ವೈಶಿಷ್ಟ್ಯಗಳು ಮಾತ್ರ ಅಪ್ಡೇಟ್​ ಅನುಸರಿಸಿ Q2ನಲ್ಲಿ ಗೂಗಲ್​ ಮೇಜರ್​ SDK ಅನ್ನು ಒದಗಿಸುತ್ತದೆ. OS ಆವೃತ್ತಿಯನ್ನು ಆಂಡ್ರಾಯ್ಡ್​ 16ಗೆ ಅಪ್‌ಗ್ರೇಡ್ ಮಾಡುತ್ತದೆ. Q3 2025ರಲ್ಲಿ ಗೂಗಲ್​ ಇತರ ವೈಶಿಷ್ಟ್ಯಗಳನ್ನು ಮಾತ್ರ ಅಪ್ಡೇಟ್​ ಮಾಡುತ್ತದೆ. ಮೈನರ್​ SDK ಅನ್ನು ನಂತರ Q4 2025ರಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಆಂಡ್ರಾಯ್ಡ್‌ನಲ್ಲಿ ಮೇಜರ್​ ಮತ್ತು ಮೈನರ್​ SDK ಬಿಡುಗಡೆಗಳು ಕ್ರಮವಾಗಿ Q2 ಮತ್ತು Q4ನಲ್ಲಿ ಬರಲಿವೆ. ಇದು ಹೊಸ ಡೆವಲಪರ್ APIಗಳನ್ನೂ ಸಹ ಒಳಗೊಂಡಿದೆ. Q2ನಲ್ಲಿ ಆಂಡ್ರಾಯ್ಡ್​ನಲ್ಲಿ ಅಪ್ಲಿಕೇಶನ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಮೇಲೆ ಪರಿಣಾಮ ಬೀರುತ್ತವೆ. Q4ನಲ್ಲಿ ಹೊಸ ಡೆವಲಪರ್ API ಗಳು, ಆಪ್ಟಿಮೈಸೇಶನ್‌ಗಳು, ದೋಷ ಪರಿಹಾರಗಳು ಮತ್ತು ಹೆಚ್ಚಿನವುಗಳೊಂದಿಗೆ ವೈಶಿಷ್ಟ್ಯದ ಅಪ್​ಡೇಟ್​ಗಳನ್ನು ಸ್ವೀಕರಿಸುತ್ತದೆ. Q4 ಮೈನರ್ ಅಪ್‌ಡೇಟ್ ಯಾವುದೇ ಅಪ್ಲಿಕೇಶನ್-ಪರಿಣಾಮಕಾರಿ ನಡವಳಿಕೆ ಬದಲಾವಣೆಗಳನ್ನು ಹೊಂದಿರುವುದಿಲ್ಲ.

Q1 ಮತ್ತು Q3 ಲಾಂಚ್​ ನಿರಂತರ ಗುಣಮಟ್ಟಕ್ಕಾಗಿ ಹೆಚ್ಚುತ್ತಿರುವ ನವೀಕರಣಗಳನ್ನು ಒದಗಿಸಲಾಗುತ್ತದೆ ಎಂದು ಕಂಪನಿಯು Google Android ಡೆವಲಪರ್‌ಗಳ ಬ್ಲಾಗ್‌ನ ಪೋಸ್ಟ್‌ನಲ್ಲಿ ಹೇಳಿದ್ದಾರೆ. Q2 ಬಿಡುಗಡೆಯಿಂದ ನಾವು ಸಾಧ್ಯವಾದಷ್ಟು ಹೆಚ್ಚಿನ ಸಾಧನಗಳನ್ನು ಹೊರ ತರಲು ಡಿವೈಸ್​ ಪಾರ್ಟ್ನರ್​ ಜೊತೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಗೂಗಲ್​ ಹೇಳಿದೆ.

2025ರಲ್ಲಿ ಈ ಲಾಂಚ್​ಗಳಿಗಾಗಿ ಡೆವಲಪರ್‌ಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ಯೋಜಿಸಿದ್ದೇವೆ ಎಂದು ಗೂಗಲ್ ಹೇಳುತ್ತದೆ. ಪಿಕ್ಸೆಲ್‌ನಲ್ಲಿ ಆರಂಭಿಕ ಪರೀಕ್ಷಕರಿಗೆ OTA ಬೀಟಾ ಬಿಡುಗಡೆಗಳು, ಡೆವಲಪರ್‌ಗಳಿಗಾಗಿ ಡೌನ್‌ಲೋಡ್ ಮಾಡಬಹುದಾದ ಸಿಸ್ಟಮ್ ಇಮೇಜ್​ಗಳು, ಪರೀಕ್ಷೆಗಾಗಿ ಟೂಲ್​ಗಳು ಮತ್ತು ಪ್ರತಿಕ್ರಿಯೆಗಾಗಿ ತ್ರೈಮಾಸಿಕ ನವೀಕರಣಗಳನ್ನು ನೀಡುತ್ತದೆ ಎಂದು ಗೂಗಲ್​ ಹೇಳಿದೆ.

Android 16 ಬಿಡುಗಡೆಯ ನಂತರ, Google Q3 2025 ರಲ್ಲಿ ಹೆಚ್ಚುವರಿ ಅಪ್​​ಡೇಟ್​ಗಳನ್ನು ಬಿಡುಗಡೆ ಮಾಡುತ್ತದೆ. ಅದರ ನಂತರ, ಎರಡನೇ ಮೈನರ್ ಆಂಡ್ರಾಯ್ಡ್ 16 SDK ಅನ್ನು Q4 2025ರಲ್ಲಿ ಬಿಡುಗಡೆ ಮಾಡಲಾಗುತ್ತದೆ. ಈ ಲಾಂಚ್​ನಲ್ಲಿ ಹೊಸ APIಗಳು ಮತ್ತು ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ ಎಂದು Google ಹೇಳಿದೆ.

ಇದನ್ನೂ ಓದಿ: ನಿಮ್ಮ iPhone 14 Plus ಕ್ಯಾಮೆರಾದಲ್ಲಿ ದೋಷವಿದೆಯೇ?: ಆ್ಯಪಲ್​​ನಿಂದ ಫ್ರೀ ಸರ್ವೀಸ್​ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.