ETV Bharat / state

ಕರ್ನಾಟಕದಲ್ಲಿ 5 ಕೋಟಿ ದಾಟಿದ ಕೋವಿಡ್ -19 ಟೆಸ್ಟ್​​​ಗಳ ಸಂಖ್ಯೆ - ಕೋವಿಡ್​ ಸುದ್ದಿಗಳು

ರಾಜ್ಯದಲ್ಲಿ ಬರೋಬ್ಬರಿ 5,00,31,061 ಕೋವಿಡ್-19 ಪರೀಕ್ಷೆಗಳನ್ನು ಪೂರೈಸಲಾಗಿದ್ದು, ಕೊರೊನಾ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಮಹತ್ತರ ಮೈಲಿಗಲ್ಲು ಸಾಧಿಸಿದೆ. ರಾಜ್ಯದ ಒಟ್ಟು ಕೋವಿಡ್ ಪರೀಕ್ಷೆಗಳ ಪೈಕಿ ಶೇ.70 ಕ್ಕಿಂತ ಹೆಚ್ಚು ಆರ್ ಟಿ-ಪಿಸಿಆರ್ ಹಾಗೂ ಶೇ.30ರಷ್ಟು ಮಾತ್ರ ಆಂಟಿಜನ್​​​​ ಟೆಸ್ಟ್​ಗಳಾಗಿವೆ

covid-19-test-crossing-5-crores-in-karnataka
ಕೋವಿಡ್ -19 ಪರೀಕ್ಷೆ
author img

By

Published : Oct 23, 2021, 10:20 PM IST

ಬೆಂಗಳೂರು: ಕೊರೊನಾ ಮಟ್ಟ ಹಾಕಲು ಆರಂಭದಲ್ಲಿ ಇದಿದ್ದ ಅಸ್ತ್ರ ಅಂದರೆ ಅದು ಆರ್​ಟಿಪಿಸಿಆರ್ ಪರೀಕ್ಷೆ. ಆದರೆ, ಮೊದಮೊದಲು ಸ್ಯಾಂಪಲ್ಸ್ ಅನ್ನ ಪುಣೆಗೆ ಕಳುಹಿಸಬೇಕಾಗಿತ್ತು. ಜೊತೆಗೆ ವಾರಗಳ ಕಾಲ ಫಲಿತಾಂಶಕ್ಕಾಗಿ ಸೋಂಕಿತರು ಕಾದು ಕುಳಿತುಕೊಳ್ಳಬೇಕಿತ್ತು. ಈ ಮಧ್ಯೆ ಸೋಂಕು ತಗುಲಿದ ವ್ಯಕ್ತಿಗೆ ಚಿಕಿತ್ಸೆ ನೀಡುವುದು ತಡವಾಗ್ತಿತ್ತು. ಆದರೆ, ಯಾವಾಗ ಸೋಂಕು ಉಲ್ಬಣವಾಗುತ್ತೋ ಆಗ ಇಲ್ಲೇ ಲ್ಯಾಬ್​​ಗಳನ್ನ ತೆರೆಯುವಂತೆ ಒತ್ತಡಗಳು ಬಂದವು.

covid-19 test crossing 5 crores in Karnataka
ಕರ್ನಾಟಕದಲ್ಲಿ 5 ಕೋಟಿ ದಾಟಿದ ಕೋವಿಡ್ -19 ಪರೀಕ್ಷೆ

ಮೊದಮೊದಲು ಪರೀಕ್ಷಾ ಸೇವೆಗಳು ಆರಂಭದಲ್ಲಿ 5 ಮಾದರಿಗಳೊಂದಿಗೆ ಸಾಧಾರಣ ರೀತಿಯಲ್ಲಿ ಪ್ರಾರಂಭವಾದವು. ಇದನ್ನು ಎನ್‌ಐವಿ-ಬೆಂಗಳೂರು ಘಟಕ ಮತ್ತು ವಿಆರ್‌ಡಿಎಲ್ 2020 ರ ಫೆಬ್ರವರಿ 1 ರಂದು ಬೆಂಗಳೂರಿನ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಬಿಎಂಪಿಆರ್‌ಐ) ಕೈಗೆತ್ತಿಕೊಂಡವು. ಕೊರೊನಾ ವೈರಸ್‌ನ ಶಂಕಿತ ಪ್ರಕರಣಗಳ ಅಗತ್ಯತೆಗಳನ್ನು ಪೂರೈಸಲು ಸ್ಪ್ಯಾಬ್ ಸಂಗ್ರಹ ಕೇಂದ್ರ ಸ್ಥಾಪಸಿಲಾಯ್ತು. ಸದ್ಯ ರಾಜ್ಯದಲ್ಲಿ ಎಸ್.ಸಿ.ಸಿ -3626, ಸರ್ಕಾರಿ-2912 ಮತ್ತು ಖಾಸಗಿ -664 ಸ್ವ್ಯಾಬ್ ಕೇಂದ್ರಗಳು ಇವೆ.

ಇದೀಗ ಕರ್ನಾಟಕವು ಬರೋಬ್ಬರಿ 5,00,31,061 ಕೋವಿಡ್-19 ಪರೀಕ್ಷೆಗಳನ್ನು ಪೂರೈಸಿದ್ದು ಕೊರೊನಾ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಮಹತ್ತರ ಮೈಲಿಗಲ್ಲು ಸಾಧಿಸಿದೆ. ರಾಜ್ಯದ ಒಟ್ಟು ಕೋವಿಡ್ ಪರೀಕ್ಷೆಗಳ ಪೈಕಿ ಶೇ.70 ಕ್ಕಿಂತ ಹೆಚ್ಚು ಆರ್ ಟಿ-ಪಿಸಿಆರ್ ಹಾಗೂ ಶೇ.30ರಷ್ಟು ರ್ಯಾಟ್ ಮೂಲಕ ನಡೆಸಲಾಗಿದೆ.

ಮೂರನೇ ಅಲೆ ಭೀತಿ ಹಿನ್ನೆಲೆ ಮಕ್ಕಳಿಗೆ ಶೇ.20% ರಷ್ಟು ಪರೀಕ್ಷೆ: ಇನ್ನು ಕೋವಿಡ್ -19 ಸಾಂಕ್ರಾಮಿಕ ರೋಗದ ಮೂರನೇ ಅಲೆಯು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬ ಆತಂಕ ಇದೆ. ಹೀಗಾಗಿ ನಿತ್ಯ ನಡೆಸುವ ಒಟ್ಟು ಪರೀಕ್ಷೆಯ ಶೇ.10ರಷ್ಟನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಕಡ್ಡಾಯವಾಗಿ ನಡೆಸಬೇಕು ಎಂದು ನಿರ್ದೇಶಿಸಲಾಗಿದೆ.

ಹೀಗಾಗಿ, ಮಕ್ಕಳಿಗೆ ಲಸಿಕೆ ನೀಡಲು ಅರ್ಹರಿಲ್ಲದ ಕಾರಣ ಮತ್ತು ಶಾಲೆಗಳು ಪುನಃ ತೆರೆದಿದ್ದರಿಂದ, ಪರೀಕ್ಷೆಯನ್ನು ಹೆಚ್ಚಿಸಲಾಯಿತು. ಒಂದು ತಿಂಗಳ ಪರೀಕ್ಷಾ ದತ್ತಾಂಶದ ವಿಶ್ಲೇಷಣೆಯಲ್ಲಿ ಅಂದರೆ (31 ನೇ ಸಪ್ಟೆಂಬರ್ -21 ಅಕ್ಟೋಬರ್ ) ಒಟ್ಟು ಪರೀಕ್ಷೆಗಳ ಪೈಕಿ ಶೇ. 20.83 ಪರೀಕ್ಷೆಗಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನಡೆಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.