ETV Bharat / state

ಬೆಂಗಳೂರಲ್ಲಿ ಚಾಲಕನಿಗೆ ಮದ್ಯ ಕುಡಿಸಿ ಮಕ್ಮಲ್​ ಟೋಪಿ.. ಕಾರು ಕದ್ದು ಪರಾರಿಯಾಗಿದ್ದ ದಂಪತಿ ಅರೆಸ್ಟ್​​ - ಈಟಿವಿ ಭಾರತ ಕನ್ನಡ

ಚಾಲಕನಿಗೆ ಕಂಠ ಪೂರ್ತಿ ಕುಡಿಸಿ ಕಾರನ್ನು ಕದ್ದು ಪರಾರಿಯಾಗಿದ್ದ ದಂಪತಿಗಳನ್ನ ಪೊಲೀಸರು ಬಂಧಿಸಿದ್ದಾರೆ.

Kn_bn_01
ಬಂಧಿತ ಆರೋಪಿ
author img

By

Published : Sep 26, 2022, 10:50 AM IST

ಬೆಂಗಳೂರು: ಚಾಲಕನೊಂದಿಗೆ ಸ್ನೇಹ ಬೆಳೆಸಿ ಕಾರು ದೋಚಿ ಪರಾರಿಯಾಗಿದ್ದ ದಂಪತಿಯನ್ನು ಯಲಹಂಕ ನ್ಯೂಟೌನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೇದಾವತಿ ಹಾಗು ಮೇಕೆ ಮಂಜ ಬಂಧಿತರು.

ಈ ಹಿಂದೆ ಆರೋಪಿಗಳು ಓಲಾ ಕಾರೊಂದನ್ನು ಬುಕ್​ ಮಾಡಿ ನಗರದಲ್ಲಿ ಸುತ್ತಾಡಿಸುವಂತೆ ಕಾರು ಚಾಲಕನಿಗೆ ಹೇಳಿ ಮುಂಗಡ ಹಣ ನೀಡಿ ತಾವು ಸಭ್ಯರೆಂಬಂತೆ ನಂಬಿಸಿ ಚಾಲಕನೊಂದಿಗೆ ಸ್ನೇಹ ಬೆಳಸಿದ್ದಾರೆ. ನಗರ ಸುತ್ತಿ ಬಂದ ನಂತರ ಪಾರ್ಟಿ ಮಾಡೋಣ ಎಂದು ಚಾಲಕನನ್ನು ಬಾರ್​ವೊಂದಕ್ಕೆ ಕರೆದೊಯ್ದು ಕಂಠ ಪೂರ್ತಿ ಕುಡಿಸಿದ್ದಾರೆ. ಬಳಿಕ ನಶೆಯಲ್ಲಿದ್ದ ಚಾಲಕನ ಜೇಬಿನಿಂದ ಕಾರಿನ ಕೀ ತೆಗೆದುಕೊಂಡು ಕಾರಿನೊಂದಿಗೆ ದಂಪತಿ ಪರಾರಿಯಾಗಿದ್ದರು. ಈ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸ್​ ಠಾಣೆಯುಲ್ಲಿ ಕಾರು ಚಾಲಕ ದೂರು ದಾಖಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ದಂಪತಿಯನ್ನು ಬಂಧಿಸಿ ಠಾಣೆಗೆ ಕರೆತಂದು ವಿಚಾರಿಸಿದಾಗ ಕಾರು ಕದ್ದಿರೋದನ್ನು ಒಪ್ಪಿಕೊಂಡಿದ್ದಾರೆ. ಇನ್ನು, ಬಂಧಿತ ಆರೋಪಿ ಮಂಜು ವಿರುದ್ದ ಕೊಲೆ ಬೆದರಿಕೆ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಖರೀದಿಸುವ ಸೋಗಿನಲ್ಲಿ ಬಂದ್ರು.. ಟೆಸ್ಟ್​ ಡ್ರೈವ್​ ನೆಪದಲ್ಲಿ ಕಾರನ್ನೇ ಕದ್ದೊಯ್ದ ಸಹೋದರರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.