ಬೆಂಗಳೂರು: ದೇಶದ ಅಪರಾಧ ಪ್ರಕರಣಗಳಲ್ಲಿ ಏರಿಕೆಯಾಗ್ತಾನೆ ಇದೆ. ಈ ಪೈಕಿ ಆರ್ಥಿಕ ಅಪರಾಧಗಳು ಶೇ.8ರಷ್ಟು ಅಧಿಕವಾಗಿವೆ ಎಂಬ ಮಾಹಿತಿಯನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.
2017ರಲ್ಲಿ 29,064 ಪ್ರಕರಣಗಳು, 2018ರಲ್ಲಿ 31,501 ಕೇಸ್‌ಗಳು ದೇಶದಲ್ಲಿ ದಾಖಲಾಗಿವೆ. ಈ ಮೂಲಕ ಶೇ.8ರಷ್ಟು ಏರುಮುಖವಾಗಿರುವುದು ಆತಂಕಾರಿ. ಈ ಪೈಕಿ 26,401 ಆರೋಪಿಗಳನ್ನು ಬಂಧಿಸಲಾಗಿದೆ. ಕಾಲ ಬದಲಾದಂತೆ ಅಪರಾಧದ ಸ್ವರೂಪಗಳು ಬದಲಾಗ್ತಿತಿ. ನಂಬಿಕೆ ದ್ರೋಹ ಹಾಗೂ ವಂಚನೆ ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿವೆ.1 ಲಕ್ಷದಿಂದ ಹಾಗೂ ಕೋಟಿ ಕೋಟಿ ರೂಪಾಯಿವರೆಗೂ ವಂಚನೆ ಪ್ರಕರಣಗಳ ಸಂಖ್ಯೆ ಅಧಿಕವಾಗಿವೆ.
ಆರ್ಥಿಕ ಅಪರಾಧ ನಡೆಯುವ 19 ನಗರಗಳ ಪೈಕಿ ದೇಶದ ವಾಣಿಜ್ಯ ರಾಜಧಾನಿ 4,803 ಪ್ರಕರಣಗಳು ರಿಜಿಸ್ಟಾರ್ ಆಗುವ ಮೂಲಕ ಮುಂಬೈ ನಂಬರ್ ಒನ್ ಸ್ಥಾನ ಪಡೆದಿದೆ. ದೆಹಲಿ ಹಾಗೂ ಬೆಂಗಳೂರು ಕ್ರಮವಾಗಿ ನಂತರದ ಸ್ಥಾನ ಪಡೆದಿವೆ. 2018ರಲ್ಲಿ ದೆಹಲಿಯಲ್ಲಿ 4,469 ಹಾಗೂ ಬೆಂಗಳೂರಿನಲ್ಲಿ 3,241 ಪ್ರಕರಣಗಳು ವರದಿಯಾಗಿವೆ.
ಶೇ.40ರಷ್ಟು ಆರ್ಥಿಕ ಅಪರಾಧಗಳು ಈ ಮೂರು ಮೆಟ್ರೋಪಾಲಿಟನ್ ನಗರಗಳಿಂದ ಆಗಿರುವುದು ಗಮನಾರ್ಹ. ಅದೇ ರೀತಿ ಮೋಸ, ಧಗಾ ಹಾಗೂ ವಂಚನೆ ಪ್ರಕರಣಗಳ ಪೈಕಿ ದೆಹಲಿ (3167), ಬೆಂಗಳೂರು (2685) ಹಾಗೂ ಮುಂಬೈ (1788) ಕೇಸ್ ರಿಜಿಸ್ಟಾರ್ ಆಗಿರುವುದು ಎನ್‌ಆರ್‌ಸಿಬಿ ವರದಿಯಲ್ಲಿ ಬಹಿರಂಗವಾಗಿದೆ.