ETV Bharat / state

ರಾಗಿಣಿ ಬಿಡುಗಡೆಗೆ ಕ್ಷಣಗಣನೆ ಆರಂಭ, ಜೈಲಿನಲ್ಲಿ ಸಂತಸ ತೋಡಿಕೊಂಡ ನಟಿ! - Ragini

ಮೂರು ಲಕ್ಷ ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ಸ್ವೀಕರಿಸಿ ಎನ್​ಡಿಪಿಎಸ್​ ಕೋರ್ಟ್ ಬೇಲ್ ನೀಡಿದೆ. ಕಾರಾಗೃಹದಲ್ಲಿ ಎಲ್ಲಾ ಪ್ರಕ್ರಿಯೆ ಮುಗಿದು ನಟಿ ಬಿಡುಗಡೆಯಾಗುವಷ್ಟರಲ್ಲಿ ರಾತ್ರಿ ಸುಮಾರು 7 ಗಂಟೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ..

Ragini
ರಾಗಿಣಿ
author img

By

Published : Jan 25, 2021, 6:24 PM IST

ಬೆಂಗಳೂರು : ರಾಗಿಣಿ ಬಿಡುಗಡೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಎನ್​ಡಿಪಿಎಸ್​ ವಿಶೇಷ ನ್ಯಾಯಾಲಯದಿಂದ ಇಂದು ಸಂಜೆ ಪರಪ್ಪನ ಅಗ್ರಹಾರಕ್ಕೆ ನಟಿ ಬರುವ ನಿರೀಕ್ಷೆಯಿದೆ.

ರಾಗಿಣಿಯ ಜಾಮೀನು ಸಮೇತ ಬಿಡುಗಡೆ ಪತ್ರವನ್ನು ಜೈಲಿನ ಅಧಿಕಾರಿಗಳಿಗೆ ನೀಡಿದ ನಂತರ ಮೂರ್ನಾಲ್ಕು ಗಂಟೆಗಳಲ್ಲಿ ಎಲ್ಲಾ ಪ್ರಕ್ರಿಯೆ ಮುಗಿದು ಅನಂತರವಷ್ಟೇ ರಾಗಿಣಿ ಅಧೀಕೃತವಾಗಿ ಬಿಡುಗಡೆಗೊಳ್ಳಲಿದ್ದಾರೆ. ಇದರಿಂದ 144 ದಿನಗಳ ಬಳಿಕ ರಾಗಿಣಿಯ ಜೈಲು ವಾಸ ಅಂತ್ಯವಾಗಲಿದೆ.

ಸುದೀರ್ಘ ದಿನಗಳ ವನವಾಸದ ನಂತರ ಜೈಲಿನಿಂದ ಬಿಡುಗಡೆಯಾಗುತ್ತಿರುವುದಕ್ಕೆ ಜೈಲಿನ ಸಿಬ್ಬಂದಿ ಬಳಿ ತುಪ್ಪದ ಬೆಡಗಿ ಸಂತಸ ವ್ಯಕ್ತಪಡಿಸಿದ್ದಾಳೆ ಎಂದು ತಿಳಿದು ಬಂದಿದೆ.

ಮೂರು ಲಕ್ಷ ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ಸ್ವೀಕರಿಸಿ ಎನ್​ಡಿಪಿಎಸ್​ ಕೋರ್ಟ್ ಬೇಲ್ ನೀಡಿದೆ. ಕಾರಾಗೃಹದಲ್ಲಿ ಎಲ್ಲಾ ಪ್ರಕ್ರಿಯೆ ಮುಗಿದು ನಟಿ ಬಿಡುಗಡೆಯಾಗುವಷ್ಟರಲ್ಲಿ ರಾತ್ರಿ ಸುಮಾರು 7 ಗಂಟೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.