ETV Bharat / state

ಇಂದಿರಾ ಕ್ಯಾಂಟೀನ್​ನಿಂದ ಫ್ರೀ ಊಟ ಪಡೆದು ಹಂಚುತ್ತಿದ್ದಾರಂತೆ ಕಾರ್ಪೊರೇಟರ್​ಗಳು - bangalore news

ಪ್ರತೀ ಕ್ಯಾಂಟೀನ್​ನಿಂದ ಕಾರ್ಪೋರೇಟರ್ಸ್​ಗಳು ನೂರು ಊಟಕ್ಕೆ ಬೇಡಿಕೆ ಇಡುತ್ತಿದ್ದಾರಂತೆ. ಈ ಊಟವನ್ನು ಅವರು ಬೇರೆ ಕಡೆಯಲ್ಲಿ ಜನರಿಗೆ ಹಂಚುತ್ತಿದ್ದಾರೆ. ಇದರಿಂದ ಕ್ಯಾಂಟೀನ್ ಗೆ ಬರುವ ಜನರಿಗೆ ಸಾಲುತ್ತಿಲ್ಲ ಎಂದು ಗುತ್ತಿಗೆದಾರರು ದೂರಿದ್ದಾರೆ.

ಇಂದಿರಾ ಕ್ಯಾಂಟೀನ್​ ಆಹಾರದಲ್ಲೂ ಕಾರ್ಪೋರೇಟರ್ಸ್ ರಾಜಕೀಯ

author img

By

Published : Apr 1, 2020, 1:40 PM IST

ಬೆಂಗಳೂರು: ಬಿಬಿಎಂಪಿಯ ಕೆಲ ಇಂದಿರಾ ಕ್ಯಾಂಟೀನ್​ನಲ್ಲಿ ಬಡ ಕೂಲಿ ಕಾರ್ಮಿಕರಿಗಾಗಿ ಉಚಿತವಾಗಿ ಆಹಾರ ಕೊಡ್ತಿದೆ. ಸಾರ್ವಜನಿಕರು, ಬಡವರು ಹೆಚ್ಚಿರುವ ಆಯ್ದ ಸ್ಥಳಗಳಲ್ಲಿ‌ ಮಾತ್ರ ಆಹಾರ ನೀಡಲಾಗುತ್ತಿದೆ. ಆದ್ರೆ ,ಪಾಲಿಕೆ ಸದಸ್ಯರು ಕೊರೊ‌ನಾ ಸಂಕಷ್ಟದಲ್ಲೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ.

ಈ ಬಗ್ಗೆ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರು ಮಾಹಿತಿ ನೀಡಿದ್ದು, ಪ್ರತೀ ಕ್ಯಾಂಟೀನ್​ನಿಂದ ನೂರು ಊಟಕ್ಕೆ ಬೇಡಿಕೆ ಇಡುತ್ತಿದ್ದಾರೆ. ಈ ಊಟವನ್ನು ಅವರು ಬೇರೆ ಕಡೆಯಲ್ಲಿ ಜನರಿಗೆ ಹಂಚುತ್ತಿದ್ದಾರೆ. ಇದರಿಂದ ಕ್ಯಾಂಟೀನ್ ಗೆ ಬರುವ ಜನರಿಗೆ ಸಾಲುತ್ತಿಲ್ಲ ಎಂದು ದೂರಿದ್ದಾರೆ.

ಸಧ್ಯ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ, ಮತ್ತಿಕೆರೆ ವಾರ್ಡ್ ನ ಜಯಪ್ರಕಾಶ್, ಗುಟ್ಟಹಳ್ಳಿ ವಾರ್ಡ್, ಉಳ್ಳಾಲ ವಾರ್ಡ್ ಸೇರಿದಂತೆ ಬಹುತೇಕ ವಾರ್ಡ್ ಗಳ ಸ್ಥಿತಿ ಇದೇ ಆಗಿದೆ ಎಂದು ದೂರಿದ್ದಾರೆ.

ಈ ಬಗ್ಗೆ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿದ ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್, ಈ ಬಗ್ಗೆ ದೂರು ಕೇಳಿಬಂದಿದೆ. ಇವತ್ತು ಬೆಳಗ್ಗಿನವರೆಗೆ ಕೆಲವು ಕಡೆ ಪಾಲಿಕೆ ಸದಸ್ಯರು ಈ ರೀತಿ ಮಾಡಿದ್ದಾರೆ. ಆದ್ರೆ, ಇನ್ಮುಂದೆ ಎಲ್ಲವನ್ನೂ ಸ್ಟಾಪ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.