ETV Bharat / state

ಪಾಲಿಕೆ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಉದ್ದೇಶವೇನೆಂದು ಸ್ಪಷ್ಟಪಡಿಸಬೇಕು: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ. ಮಂಜುನಾಥ್

''ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಉದ್ದೇಶವೇನೆಂದು ಬಿಬಿಎಂಪಿ ಸ್ಪಷ್ಟಪಡಿಸಬೇಕು'' ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ. ಮಂಜುನಾಥ್ ಆಗ್ರಹಿಸಿದರು.

Contractors Association President K.T. Manjunath
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ. ಮಂಜುನಾಥ್
author img

By

Published : Aug 7, 2023, 11:04 PM IST

ಗುತ್ತಿಗೆದಾರರ ಸಂಘದ ಸದಸ್ಯರಾದ ಹೇಮಂತ್ ಮಾತನಾಡಿದರು.

ಬೆಂಗಳೂರು: ''ಪ್ರಸಕ್ತ ಸಾಲಿನಲ್ಲಿ ತೆರಿಗೆ ಹಣ ಸುಮಾರು 2 ಸಾವಿರ ಕೋಟಿ ಲಭ್ಯವಿದ್ದರೂ ಸಹ ಬಾಕಿ ಬಿಲ್ ಪಾವತಿ ಮಾಡಲು ಪಾಲಿಕೆ ಮೀನಾಮೇಷ ಎಣಿಸುತ್ತಿದೆ. ಇದರ ಹಿಂದೆಯಿರುವ ಉದ್ದೇಶವೇನು ಎಂಬುದನ್ನು ಸ್ಪಷ್ಟಪಡಿಸಬೇಕು'' ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ. ಮಂಜುನಾಥ್ ಆರೋಪಿಸಿದರು.

ಬಾಕಿ ಬಿಲ್ ಪಾವತಿಗಾಗಿ ಆಗ್ರಹಿಸಿ ಪ್ರೆಸ್ ಕ್ಲಬ್ ನಲ್ಲಿ ನೆಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ''2023- 24ನೇ ಸಾಲಿನಲ್ಲಿ ಪಾಲಿಕೆಗೆ ತೆರಿಗೆ ಹಣ ಸುಮಾರು 2 ಸಾವಿರ ಕೋಟಿ ಹಣ ಲಭ್ಯವಿದ್ದರೂ ಸಹ 26 ತಿಂಗಳಿನಿಂದ ನಿರ್ವಹಿಸಿದ ಕಾಮಗಾರಿಗಳಿಗೆ ಹಣ ಪಾವತಿ ಮಾಡದಿರುವುದರ ಉದ್ದೇಶವಾದರೂ ಏನು ಎಂದು ಆಯುಕ್ತರು ತಿಳಿಸಬೇಕು'' ಎಂದು ಒತ್ತಾಯಿಸಿದರು.

''ರಾಜ್ಯ ಸರ್ಕಾರದ ಅನುದಾನ 675 ಕೋಟಿ ರೂ. ಪಾಲಿಕೆಗೆ ಸಂದಾಯವಾಗಿ ಮೂರು ತಿಂಗಳು ಕಳೆದರೂ ಸಹ ಕಾಮಗಾರಿಗೆ ಹಣ ಪಾವತಿ ಮಾಡದಿರುವುದರ ಹಿಂದೆ ಷಡ್ಯಂತ್ರ ಏನಾದರೂ ಇದೆಯೇ ಇದಕ್ಕೆ ಆಯುಕ್ತರೇ ಉತ್ತರಿಸಬೇಕು'' ಎಂದು ಆಗ್ರಹಿಸಿದರು. ''ಸಕಾಲದಲ್ಲಿ ಬಿಲ್ ಪಾವತಿಯಾಗದೇ ಗುತ್ತಿಗೆದಾರರು ಸಾಲದ ಸುಲಿಗೆ ಸಿಲುಕುವಂತಾಗಿದೆ. ದಯಾಮರಣ ಕೋರಿ ಈಗಾಗಲೇ ರಾಷ್ಟ್ರಪತಿಗಳಿಗೆ ಮನವಿ ಪತ್ರವನ್ನು ನೀಡಲಾಗಿದೆ. ಇನ್ನೂ ಕೆಲವರು ತಮ್ಮ ಸ್ವ-ಇಚ್ಛೆಯಿಂದ ದಯಾ ಮರಣ ಪತ್ರ ನೀಡುವುದಾಗಿ ದೂರವಾಣಿ ಮುಖಾಂತರ ತಿಳಿಸಿದ್ದಾರೆ. ಈ ಮನವಿ ಪತ್ರಗಳನ್ನು ರಾಷ್ಟ್ರಪತಿಯವರಿಗೆ ಸಲ್ಲಿಸಲಾಗುವುದು'' ಎಂದರು.

ಉಗ್ರ ಹೋರಾಟದ ಎಚ್ಚರಿಕೆ: ''ಈ ನಮ್ಮ ಎಲ್ಲಾ ಬೇಡಿಕೆಯನ್ನು ತಕ್ಷಣ ಆಯುಕ್ತರಿಂದ ಪರಿಹಾರ ದೊರಕದೆ ಹೋದಲ್ಲಿ ಉಗ್ರ ಹೋರಾಟ ಕೈಗೊಳ್ಳಲು ನಿಶ್ಚಯಿಸಲಾಗಿದೆ. ನ್ಯಾಯ ದೊರಕದೆ ಹೋದಲ್ಲಿ ಅನ್ಯಮಾರ್ಗವಿಲ್ಲದೆ ಕಾನೂನಾತ್ಮಕ ಹೋರಾಟಕ್ಕೆ ಚಿಂತಿಸಲಾಗುವುದು. ಇದಕ್ಕೆ ಆಸ್ಪದ ನೀಡದೆ ಮುಖ್ಯ ಆಯುಕ್ತರು ನಮ್ಮ ಬೇಡಿಕೆ ಈಡೇರಿಸಿ ಕೊಡುಬೇಕು. ಗುತ್ತಿಗೆದಾರರು ಹಣಕಾಸು ಮುಗ್ಗಟ್ಟಿನಿಂದ ಅನಾಹುತ ಸಂಭವಿಸಿದ್ದಲ್ಲಿ ಇದರ ಜವಾಬ್ದಾರಿಯನ್ನು ಮುಖ್ಯ ಆಯುಕ್ತರು ಹೊಣೆ ಹೊರಬೇಕಾಗುತ್ತದೆ'' ಎಂದು ತಿಳಿಸಿದರು.

ಗೌರವ ಅಧ್ಯಕ್ಷ ದೇವರಾಜ್, ಉಪಾಧ್ಯಕ್ಷ ಜಿ. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಟಿ. ವೆಂಕಟೇಶ್ ಮತ್ತು ತಾಂತ್ರಿಕ ಸಲಹೆಗಾರರಾದ ಮಂಜುನಾಥ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು.

ವೈರಲ್ ವಿಡಿಯೋ: ಗುತ್ತಿಗೆದಾರರ ಸಂಘದ ಸದಸ್ಯರಾದ ಹೇಮಂತ್ ಅವರು ಪ್ರೆಸ್ ಕ್ಲಬ್​ನಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಡಿ.ಕೆ. ಶಿವಕುಮಾರ್ ಅವರು, ನಂಬಿರುವ ಅಜ್ಜಯ್ಯನ ಮಠಕ್ಕೆ ಡಿಕೆ ಶಿವಕುಮಾರ್ ಬರಲಿ. ನಾವು ಹೋಗೋಣ. ಅಲ್ಲೇ ನಾನು ದುಡ್ಡು ಕೇಳಿಲ್ಲ ಎಂದು ಅವರು ಪ್ರಮಾಣ ಮಾಡಲಿ. ಅವರು ಹಣ ಕೇಳಿದ್ದಾರೆ ಎಂದು ನಾವು ಪ್ರಮಾಣ ಮಾಡುತ್ತೇವೆ'' ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರ ಬಳಿ ಹೇಳಿದ್ದಾರೆ.

ಇದನ್ನೂ ಓದಿ: ಅಧಿಕಾರಿ, ಸಿಬ್ಬಂದಿಯಿಂದ ಕಮಿಷನ್ ಕೇಳುತ್ತಿರುವ ಕೃಷಿ ಸಚಿವರನ್ನು ವಜಾಗೊಳಿಸಿ: ಎಎಪಿ ಉಪಾಧ್ಯಕ್ಷ ಮೋಹನ್ ದಾಸರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.