ಬೆಂಗಳೂರು : ಕೊರೊನಾ ವೈರಸ್ ಎಫೆಕ್ಟ್ನಿಂದಾಗಿ ಕರ್ನಾಟಕ ಲಾಕ್ಡೌನ್ ಆದ ಹಿನ್ನೆಲೆಯಲ್ಲಿ ಈ ಬಾರಿ ಹಬ್ಬಗಳು ಕಳೆಗುಂದಿವೆ. ಕಳೆದ ಎಂಟು ದಿನಗಳ ಹಿಂದೆಯಷ್ಟೇ ಹೊಸ ಸಂವತ್ಸರ ಆರಂಭವಾಗುವ ಯುಗಾದಿ ಹಬ್ಬ ಆಚರಿಸಲಾಯಿತು. ಆದರೆ, ಆ ಹಬ್ಬದ ಸಡಗರವನ್ನೂ ಕೊರೊನಾ ಎಂಬ ಹೆಮ್ಮಾರಿ ಕಸಿದಿತ್ತು. ಇದೇ ಕೊರೊನಾ ಹೆಮ್ಮಾರಿ ರಾಮನವಮಿ ಹಬ್ಬದ ಸಂಭ್ರಮಕ್ಕೂ ಕಾರ್ಮೋಡ ಆವರಿಸುವಂತೆ ಮಾಡಿದೆ.
ರಾಜಧಾನಿ ಬೆಂಗಳೂರು ಸೇರಿ ಎಲ್ಲೆಡೆ ದೇವಸ್ಥಾನಗಳು ಹಾಗೂ ರಸ್ತೆ ಪಕ್ಕದಲ್ಲಿ ಪಾನಕ, ಕೋಸಂಬರಿ ವಿತರಿಸಿ ಸಾರ್ವಜನಿಕರು ಸಂಭ್ರಮಿಸುತ್ತಿದ್ದರು. ಜನ ಗುಂಪಾಗಿ ಸೇರುವುದರಿಂದ ಈ ಬಾರಿ ರಸ್ತೆಯಲ್ಲಿ ಪಾನಕ, ಮಜ್ಜಿಗೆ ಹಾಗೂ ಕೋಸಂಬರಿ ವಿತರಿಸುವುದನ್ನು ನಿಷೇಧಿಸಲಾಗಿದೆ. ಹಬ್ಬದ ವ್ಯಾಪಾರ, ವಹಿವಾಟು ಸಹ ಅಷ್ಟಾಗಿ ಕಂಡು ಬರಲಿಲ್ಲ. ರಾಮನವಮಿ ಹಬ್ಬ ಎಲ್ಲರೂ ಸಂತೋಷದಿಂದ ಆಚರಣೆ ಮಾಡಬೇಕು. ಆದರೆ, ಕೊರೊನಾ ವೈರಸ್ ಆ ಸಂಭ್ರಮವನ್ನು ಕಸಿದು ಕೊಂಡಿದೆ.