ಬೆಂಗಳೂರು: ಕೊರೊನಾ ಸಂಕಷ್ಟಕ್ಕೆ ಮುಕ್ತಿ ನೀಡಲು ಪುಣೆಯ ಸೆರಂ ಇನ್ಸ್ಟಿಟ್ಯೂಟ್ನಿಂದ ವ್ಯಾಕ್ಸಿನ್ ಎಲ್ಲಾ ರಾಜ್ಯಕ್ಕೆ ಬಂದು ತಲುಪುತ್ತಿದೆ. ಜನವರಿ 16ರಿಂದ ಕೊರೊನಾ ವ್ಯಾಕ್ಸಿನೇಷನ್ ಕಿಕ್ ಸ್ಟಾರ್ಟ್ ಆಗುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ವ್ಯಾಕ್ಸಿನ್ ಸಿಗಲಿದೆ.
ರಾಜ್ಯಕ್ಕೆ 13 ಲಕ್ಷದ 92 ಸಾವಿರ ಡೋಸ್ ಕೋವಿಡ್ ವ್ಯಾಕ್ಸಿನ್ ಬರಲಿದೆ. ಬೆಂಗಳೂರು ಹಾಗೂ ಬೆಳಗಾವಿಗೆ ಪ್ರತ್ಯೇಕವಾಗಿ ವ್ಯಾಕ್ಸಿನ್ ವಾಯಲ್ಸ್(ಬಾಟಲ್) ಬರಲಿದೆ. ಬೆಂಗಳೂರಿಗೆ 1,13,400 ಹಾಗೂ ಬೆಳಗಾವಿಗೆ 25,800 ವ್ಯಾಕ್ಸಿನ್ ವಾಯಲ್ಸ್ ಬರಲಿದೆ. ಒಟ್ಟು 1,39,200 ವ್ಯಾಕ್ಸಿನ್ ವಾಯಲ್ಸ್ ರಾಜ್ಯಕ್ಕೆ ಪೂರೈಕೆ ಆಗಲಿದೆ.
ಕೊರೋನಾ ವ್ಯಾಕ್ಸಿನ್‌ಗೆ ಆರೋಗ್ಯ ಕಾರ್ಯಕರ್ತರು ಹೇಗೆ ನೋಂದಣಿ ಮಾಡಿಕೊಳ್ಳಬೇಕು?
- https://www.covidwar.karnataka.gov.in/service60 ಲಾಗಿನ್ ಆಗಬೇಕು
- ಫಲಾನುಭವಿಗಳು ತಮ್ಮ ಒಂದು ಗುರುತಿನ ಚೀಟಿ ನೀಡಬೇಕು
- ಡ್ರೈವಿಂಗ್ ಲೈಸೆನ್ಸ್
- ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಲಾಗಿರುವ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್
- ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಜಾಬ್ ಕಾರ್ಡ್
- ಸಂಸದರು/ಶಾಸಕರು/ಪರಿಷತ್ತು ಸದಸ್ಯರ ಅಧಿಕೃತ ಗುರುತಿನ ಚೀಟಿ
- ಪಾನ್ ಕಾರ್ಡ್
- ಬ್ಯಾಂಕ್ / ಪೋಸ್ಟ್ ಆಫೀಸ್‌ನ ಪಾಸ್‌ಬುಕ್
- ಪಾಸ್‌ಪೋರ್ಟ್
- ಪಿಂಚಣಿ ದಾಖಲೆ
- ಕೇಂದ್ರ/ರಾಜ್ಯ ಸರ್ಕಾರ/ ಪಬ್ಲಿಕ್ ಕಂಪನಿಗಳ ನೌಕರರ ಸೇವಾ ಗುರುತಿನ ಚೀಟಿ
- ವೋಟರ್ ಐಡಿ ಕಾರ್ಡ್
ಈ 10 ಗುರುತಿನ ಚೀಟಿಯಲ್ಲಿ ಯಾವುದಾದರೂ ಒಂದು ನೀಡಬೇಕು
- ಕಡ್ಡಾಯವಾಗಿ ಫೋಟೊ ನೀಡಬೇಕು
- ಮೊಬೈಲ್ ಸಂಖ್ಯೆ ನೀಡಬೇಕು
ಇದಾದ ಬಳಿಕ ವ್ಯಾಕ್ಸಿನ್ ಕುರಿತ ಮಾಹಿತಿಯನ್ನು ಮೊಬೈಲ್‌ಗೆ ಕಳುಹಿಸಲಾಗುವುದು.