ಬೆಂಗಳೂರು: ನಗರದಲ್ಲಿ ಕೋವಿಡ್ ಪ್ರಕರಣಗಳ ಪ್ರಮಾಣ ತಗ್ಗುತ್ತಿದ್ದರೂ ಹತ್ತು ವಾರ್ಡ್ಗಳಲ್ಲಿ ಇನ್ನೂ ಶೇ 3 ಕ್ಕಿಂತ ಹೆಚ್ಚು ಪಾಸಿಟಿವಿಟಿ ಪ್ರಮಾಣ ಇದೆ. ಅದರಲ್ಲಿಯೂ ಮಹಾದೇವಪುರ ವಲಯದ ವಾರ್ಡ್ಗಳಲ್ಲಿ ಅತಿಹೆಚ್ಚು ಸೋಂಕಿತ ಪ್ರಕರಣಗಳು ದೃಢಪಡುತ್ತಿವೆ.
ಸದ್ಯ ಕೊರೊನಾ ಹೆಚ್ಚಿರುವ ನಗರದ 10 ವಾರ್ಡ್‌ಗಳು:
ಮಹಾದೇವಪುರ
ವಾರ್ಡ್ ನಂ. 150 - ಬೆಳ್ಳಂದೂರು: ಸರಾಸರಿ 180 ಕೇಸ್
ವಾರ್ಡ್ ನಂ. 149 - ವರ್ತೂರು: ಸರಾಸರಿ 120 ಕೇಸ್
ವಾರ್ಡ್ ನಂ. 25 - ಹೊರಮಾವು: ಸರಾಸರಿ 150 ಕೇಸ್
ವಾರ್ಡ್ ನಂ. 26 - ರಾಮಮೂರ್ತಿ ನಗರ: ಸರಾಸರಿ 170 ಕೇಸ್
ವಾರ್ಡ್ ನಂ. 54 - ಹೂಡಿ: ಸರಾಸರಿ 110 ಕೇಸ್
ವಾರ್ಡ್ ನಂ. 84 - ಹಗದೂರು: ಸರಾಸರಿ 180 ಕೇಸ್
ವಾರ್ಡ್ ನಂ. 85 - ದೊಡ್ಡನಕುಂದಿ: ಸರಾಸರಿ 100 ಕೇಸ್
ಪೂರ್ವ ವಲಯ
ವಾರ್ಡ್ ನಂ. 111 - ಶಾಂತಲನಗರ : ಸರಾಸರಿ 180 ಕೇಸ್
ಬೋಮ್ಮನಹಳ್ಳಿ : ವಾರ್ಡ್ ನಂ. 192 - ಬೇಗೂರು - ಸರಾಸರಿ 122 ಕೇಸ್
ಆರ್ ಆರ್ ನಗರ : ವಾರ್ಡ್ ನಂ. 198 - ಹೆಮ್ಮಿಗೆಪುರ : ಸರಾಸರಿ 160 ಕೇಸ್
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಈ ಕುರಿತು ಮಾತನಾಡಿ, ಮಹದೇವಪುರ ಝೋನ್‌ನ ಕೆಲವು ವಾರ್ಡ್ಗಳಲ್ಲಿ ಮೈಕ್ರೋಪ್ಲಾನ್ ಮಾಡಲು ಗುರುತಿಸಿದ್ದೇವೆ. ಹೋಂ ಐಸೋಲೇಷನ್, ಕಂಟೈನ್‌ಮೆಂಟ್ ಕಟ್ಟುನಿಟ್ಟಾಗಿ ಮಾಡಲಾಗುತ್ತದೆ. ಜೊತೆಗೆ ಅಪಾರ್ಟ್‌ಮೆಂಟ್‌ಗಳಲ್ಲಿ ಹೆಚ್ಚು ಕೋವಿಡ್ ಪಾಸಿಟಿವ್ ಕಂಡುಬರುತ್ತಿದೆ. ಇದಕ್ಕೆ ಜನರ ಪ್ರಯಾಣ ಕಾರಣವೋ, ಟೆಸ್ಟಿಂಗ್ ಕಡಿಮೆ ಆಗಿರುವುದು ಕಾರಣವೋ, ಅಥವಾ ಸಂಜೆ ವೇಳೆಗೆ ವಾಯುವಿಹಾರ ಹಾಗೂ ಗುಂಪುಗೂಡುವುದರಿಂದ ಕೋವಿಡ್ ಹೆಚ್ಚಾಗುತ್ತಿದೆಯೇ ಎಂಬ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್ ಸಂಘಟನೆಯವರ ಜತೆಗೂ ಮಾತುಕತೆ ನಡೆಸಲಾಗಿದೆ. ಕಟ್ಟುನಿಟ್ಟಿನ ಕಂಟೈನ್‌ಮೆಂಟ್ ಮಾಡುವ ಬಗ್ಗೆಯೂ ತಿಳಿಸಲಾಗಿದೆ ಎಂದರು.
ಶೇ 50 ಶಾಪಿಂಗ್ ಮಾಲ್‌ಗಳನ್ನು ತೆರೆಯಲು ಅವಕಾಶ:
ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಅನ್ ಲಾಕ್ ಆದರೂ, ಜನ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಬೇಕು. ಮಾಲ್‌ಗಳನ್ನು ತೆರೆಯಲು ಅವಕಾಶ ಕೊಡಬಹುದು. ಆದರೆ 50% ತೆರೆದರೂ ಅಲ್ಲಿರುವ ಫುಡ್ ಕೋರ್ಟ್‌ಗಳಲ್ಲಿ ಹೆಚ್ಚುವರಿ ಜಾಗ್ರತೆ ವಹಿಸಬೇಕು. ನಮ್ಮ ದೇಶದಲ್ಲಿ ಪತ್ತೆಯಾದ ಡೆಲ್ಟಾ ವೈರಸ್ ನಿಂದ ಕೋವಿಡ್ ಹೆಚ್ಚು ಹರಡುತ್ತಿದೆ. ಹೀಗಾಗಿ ಮಾಲ್ ತೆರೆದರೂ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದು ಹೇಳಿದರು.