ಬೆಂಗಳೂರು: ರಾಜ್ಯದ ಪ್ರಮುಖ ಬಿಜೆಪಿ ನಾಯಕರಿಗೂ ಕೊರೊನಾ ಬಿಸಿ ತಟ್ಟಿದೆ. ಇದಕ್ಕೆ ಸ್ವತಃ ಸಿಎಂ ಕೂಡ ಹೊರತಾಗಿಲ್ಲ. ಇಂದು ಸಿಎಂ ಯಡಿಯೂರಪ್ಪಗೂ ಕೊರೊನಾ ಸೋಂಕಿನ ತಪಾಸಣೆ ಮಾಡಲಾಯಿತು.
ಕೊರೊನಾ ವೈರಸ್ ತಪಾಸಣಾ ಯಂತ್ರದ ಮೂಲಕ ಸಿಎಂ ಯಡಿಯೂರಪ್ಪ ಅವರನ್ನೂ ಪರೀಕ್ಷೆ ಮಾಡಲಾಯಿತು. ಮಾಗಡಿ ರಸ್ತೆಯ ಚನ್ನೇನಹಳ್ಳಿಯ ಆರ್ಎಸ್ಎಸ್ ಜನಸೇವಾ ಸಂಸ್ಥೆಯಲ್ಲಿ ನಡೆದ ಸಭೆ ವೇಳೆ ಈ ಪರೀಕ್ಷೆ ನಡೆಸಲಾಯಿತು.
ಸಭೆಗೆ ಹೋಗುವ ಮುನ್ನ ಸಿಎಂ ಸೇರಿ ಬಿಜೆಪಿ ನಾಯಕರಿಗೆ ಕೊರೊನಾ ಟೆಸ್ಟ್ ಮಾಡಲಾಯಿತು. ಸಿಎಂ ಯಡಿಯೂರಪ್ಪ, ಡಿಸಿಎಂಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವ ಸೋಮಶೇಖರ್ ಸೇರಿದಂತೆ ಹಲವರಿಗೆ ಕೊರೊನಾ ಪತ್ತೆ ಯಂತ್ರದ ಮೂಲಕ ಪರೀಕ್ಷೆ ನಡೆಸಲಾಯಿತು.
ಸಭೆಯಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಆರ್ಎಸ್ಎಸ್ ಸಹ ಕಾರ್ಯನಿರ್ವಾಹಕ ಸುರೇಶ್ ಬೈಯಾಜಿ ಜೋಷಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪಾಲ್ಗೊಂಡಿದ್ದರು.