ಬೆಂಗಳೂರು: ಕಳೆದ ಒಂದು ವರ್ಷದಿಂದ ಇಡೀ ಭೂಮಂಡಲವನ್ನೇ ಬಿಟ್ಟು ಬಿಡದೆ ಕೊರೊನಾ ಎಂಬ ವೈರಾಣು ಕಾಡುತ್ತಿದೆ. ಈಗ ಎರಡನೇ ಅಲೆಯ ಆತಂಕವನ್ನೂ ಸಹ ಸೃಷ್ಟಿ ಮಾಡಿದೆ. ಎಲ್ಲರನ್ನೂ ಕೊರೊನಾದಿಂದ ವಿಮುಕ್ತಗೊಳಿಸು ಶಿವ ಅಂತಾ ವಿಮೋಚನಾ ವೇಲ್ಫೇರ್ ಟ್ರಸ್ಟ್ನವರು ಬೆಂಗಳೂರಿನ ವಿಲ್ಸನ್ ಗಾರ್ಡನ್ ಆಟದ ಮೈದಾನದಲ್ಲಿ 35 ಅಡಿ ಎತ್ತರದ ಕೊರೊನಾ ಶಿವ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ.
ಕೊರೊನಾದಿಂದ ಆದಂತಹ ಸಾವು-ನೋವುಗಳು ಮತ್ತೆ ಆಗದಿರಲಿ ಎಂದು ಹಲವು ಸ್ವಾಮೀಜಿಗಳ ಸಲಹೆ ಪಡೆದು, ಈ ಮೂರ್ತಿಯನ್ನು ಸತತ 2 ತಿಂಗಳಿನಿಂದ 8 ಜನ ಕಲಾವಿದರು ನಿರ್ಮಾಣ ಮಾಡಿದ್ದಾರೆ. ಕೊರೊನಾ ಶಿವ ಅಂತಾನೇ ಈ ವಿಗ್ರಹಕ್ಕೆ ಹೆಸರಿಟ್ಟು, ಶಿವರಾತ್ರಿ ಪ್ರಯುಕ್ತ ಜನರ ದರ್ಶನಕ್ಕೆ ಅನುವು ಮಾಡಿದ್ದಾರೆ. ಮಾರ್ಚ್ 8ರಿಂದ 14ರವರೆಗೆ ದರ್ಶನದ ವ್ಯವಸ್ಥೆ ಮಾಡಲಾಗಿದೆ.
ಓದಿ:ರಾಮದುರ್ಗದಲ್ಲಿ ವಿಶ್ವದ ಅತಿ ಎತ್ತರದ ನಂದಿ ವಿಗ್ರಹ ಲೋಕಾರ್ಪಣೆ
ಕೊರೊನಾ ಸಂಪೂರ್ಣವಾಗಿ ನಿರ್ಮೂಲನೆ ಆಗಿಲ್ಲ. ಶಿವನ ಆರಾಧನೆ ಮಾಡೋದ್ರಿಂದ ಕೊರೊನಾ ನಿವಾರಣೆಯಾಗಲಿದೆ ಅನ್ನೋದು ಇವ್ರ ನಂಬಿಕೆಯಾಗಿದೆ. ಕೊರೊನಾ ಬಂದಾಗಿನಿಂದ ಯಾವ ಹಬ್ಬವನ್ನೂ ವಿಜೃಂಭಣೆಯಿಂದ ಮಾಡಲು ಸಾಧ್ಯವಾಗಿಲ್ಲ. ಶಿವರಾತ್ರಿಯ ಪ್ರಯಕ್ತ ಶಿವನ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ.