ಬೆಂಗಳೂರು: ಮಿನರಲ್ ವಾಟರ್ ಸಪ್ಲೈ ಮಾಡ್ತಿದ್ದ ಹಾಗೂ ಕಳ್ಳತನದಲ್ಲಿ ಭಾಗಿಯಾಗಿದ್ದ ವ್ಯಕ್ತಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಹೀಗಾಗಿ ಕಳ್ಳರನ್ನು ಹಿಡಿಯಲು ಹೆದರುವ ಪರಿಸ್ಥಿತಿ ಪೊಲೀಸರಲ್ಲಿ ನಿರ್ಮಾಣವಾಗಿದೆ.
ದಕ್ಷಿಣಾ ವಿಭಾಗದ ಜಯನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ನಿಯಮದ ಪ್ರಕಾರ ಆರೋಪಿಯನ್ನ ಬಂಧಿಸಿ ಕೊರೊನಾ ಟೆಸ್ಟ್ಗೆ ಒಳಪಡಿಸಲಾಗುತ್ತದೆ. ಪರೀಕ್ಷೆಯಲ್ಲಿ ಆರೋಪಿಗೆ ಕೊರೊನಾ ಧೃಡಪಟ್ಟಿದೆ. ಈ ಹಿನ್ನೆಲೆ ಸದ್ಯ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.
ಈ ವಿಚಾರ ತಿಳಿದು ಜಯನಗರ ಠಾಣೆಗೆ ದೌಡಾಯಿಸಿದ ಬಿಬಿಎಂಪಿ ಸಿಬ್ಬಂದಿ, ಆರೋಪಿ ಸಂಪರ್ಕದಲ್ಲಿದ್ದ ಪೊಲೀಸ್ ಸಿಬ್ಬಂದಿಯಿಂದ ಮಾಹಿತಿ ಕಲೆಹಾಕಿದ್ದಾರೆ. ಪ್ರಾಥಮಿಕ ಸಂಪರ್ಕದಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನು ಕ್ವಾರಂಟೈನ್ಗೆ ಒಳಪಡಿಸಿದ್ದಾರೆ. ಹಾಗೇ ಜಯನಗರ ಠಾಣೆಗೆ ಸ್ಯಾನಿಟೈಸ್ ಮಾಡಲಾಗಿದೆ.
ಇನ್ನು ಕಳ್ಳನ ಟ್ರಾವೆಲ್ ಹಿಸ್ಟರಿಯನ್ನ ಕಲೆ ಹಾಕಿದಾಗ ಕುಮಾರಸ್ವಾಮಿ ಲೇಔಟ್ನ ಜನಕ್ಕೆ ಆತಂಕ ಹುಟ್ಟುವ ಹಾಗಾಗಿದೆ. ಯಾಕಂದ್ರೆ ಕೊರೊನಾ ಸೋಂಕಿತ ಆರೋಪಿ ಮಿನರಲ್ ವಾಟರ್ ಸಪ್ಲೈಯರ್ ಕೆಲಸ ಮಾಡ್ತಿದ್ದು, ಕೆಎಸ್ ಲೇಔಟ್ನಲ್ಲಿ ಮಿನರಲ್ ವಾಟರ್ ಅನ್ನು ಮನೆ ಮನೆಗೆ ತೆರಳಿ ಸಪ್ಲೆ ಮಾಡಿದ್ದಾನೆ. ಈ ವೇಳೆ, ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ. ಸದ್ಯ ಆರೋಪಿ ರೆಗ್ಯುಲರ್ ಆಗಿ ಯಾವ - ಯಾವ ಮನೆಗೆ ನೀರು ಸಪ್ಲೈ ಮಾಡಿದ್ದ ಅನ್ನುವುದರ ಮಾಹಿತಿಯನ್ನ ಆರೋಗ್ಯ ಇಲಾಖೆ ಸಿಬ್ಬಂದಿ ಪತ್ತೆ ಹಚ್ಚುತ್ತಿದ್ದಾರೆ.
ಈಗಾಗಲೇ ಸೋಂಕಿತ, ಕೆಲಸ ಮಾಡುತ್ತಿದ್ದ ಮಾಲೀಕನ ಕುಟುಂಬಸ್ಥರಿಗೆ ಕ್ವಾರಂಟೈನ್ನಲ್ಲಿ ಇರಲು ಸೂಚನೆ ನೀಡಲಾಗಿದೆ. ಇನ್ನು ಕುಮಾರಸ್ವಾಮಿ ಲೇಔಟ್ನಲ್ಲಿ ಆತ ವಾಸವಿದ್ದ ಕಟ್ಟಡವನ್ನ ಸೀಲ್ ಡೌನ್ ಮಾಡಲಾಗಿದೆ.