ಬೆಂಗಳೂರು: ನಗರದ ಆಡಳಿತಾತ್ಮಕ ವಿಭಾಗದ ಎಡಿಜಿಪಿ ಹೇಮಂತ್ ನಿಂಬಾಳ್ಕರ್ ಅವರ ಆಪ್ತ ಸಹಾಯಕಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಹೀಗಾಗಿ ಪಿ.ಎ ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ನಿಂಬಾಳ್ಕರ್ ಅವರನ್ನು ಹೋಂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ನಿಂಬಾಳ್ಕರ್ ಪಿ.ಎ ನಿತ್ಯ ನಗರ ಇಲಾಖೆಯ ಮಾಹಿತಿಯನ್ನ, ಪೊಲೀಸ್ ಇಲಾಖೆಗಳಿಗೆ ಸಂಬಂಧಪಟ್ಟ ದಾಖಲೆಗಳನ್ನ ನಿಂಬಾಳ್ಕರ್ ಅವರಿಗೆ ನೀಡುತ್ತಿದ್ದರು. ಈ ಕಾರಣದಿಂದಾಗಿ ಪ್ರಾಥಮಿಕ ಸಂಪರ್ಕ ಹೊಂದಿದ್ದ ಹೇಮಂತ್ ನಿಂಬಾಳ್ಕರ್ ಹೋಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ನಾನು ಕ್ಷೇಮವಾಗಿದ್ದೇನೆ, ನನ್ನ ಪಿ.ಎ ಜೊತೆ ಪ್ರಾಥಮಿಕ ಸಂಪರ್ಕದಲ್ಲಿರುವ ಕಾರಣ ಎರಡು ಮೂರು ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿ ಇರುವುದಾಗಿ ಈಟಿವಿ ಭಾರತಕ್ಕೆ ನಿಂಬಾಳ್ಕರ್ ತಿಳಿಸಿದ್ದು, ಗಂಟಲ ದ್ರವ ಪರೀಕ್ಷೆ ಮಾಡಿಸಿಕೊಂಡಿರುವುದಾಗಿಯೂ ಹೇಳಿದ್ದಾರೆ.
ನಿಂಬಾಳ್ಕರ್ ಪಿ.ಎ ಪ್ರತಿ ದಿನ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಬಳಿ ಕೂಡ ನಗರದ ವರದಿ ಸಲ್ಲಿಸಲು ತೆರಳಿತ್ತಿದ್ದರು. ಸದ್ಯ ಪಿಎ ಅವರನ್ನ ಸಂಬಂಧಿಸಿದ ಕೋವಿಡ್ ಆಸ್ಪತ್ರೆಗೆ ದಾಖಲಿಸಿದ್ದು, ನಗರ ಪೊಲೀಸ್ ಆಯುಕ್ತರ ಕಚೇರಿಯನ್ನ ಸ್ಯಾನಿಟೈಸ್ ಮಾಡಲಾಗಿದೆ.
ಇನ್ನು ನಗರ ಆಯುಕ್ತರ ಕಚೇರಿಯಲ್ಲಿ ಈಗಾಗಲೇ 15 ಕೇಸ್ ಪತ್ತೆಯಾಗಿದ್ದು, ಅವರ ಸಂಪರ್ಕದಿಂದ ಲೇಡಿ ಪಿ.ಎಗೆ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನಲಾಗಿದೆ.