ಆನೇಕಲ್: ತಾಲೂಕಿನ ತುಂಬು ಗರ್ಭಿಣಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ಇದೀಗ ಆಕೆಗೆ ಆರೈಕೆ ಮಾಡುತ್ತಿದ್ದ ಕುಟುಂಬಸ್ಥರನ್ನು ಭೀತಿಗೊಳಗಾಗುವಂತೆ ಮಾಡಿದೆ.
23 ವರ್ಷದ ಮಹಿಳೆ ಜಿಗಣಿ ಪುರಸಭೆ ವ್ಯಾಪ್ತಿಯ ಪಟಾಲಮ್ಮ ಬಡಾವಣೆಯ ಎಸ್ಎಲ್ಎನ್ ರಸ್ತೆಯ ಮನೆಯಲ್ಲಿ ವಾಸವಿದ್ದರು. ಅಲ್ಲದೇ ಇವರಿಗೆ ತಮಿಳುನಾಡಿನ ಸಂಪರ್ಕ ಇರುವುದಾಗಿ ಇದೀಗ ಮೇಲ್ನೋಟಕ್ಕೆ ತಿಳಿದು ಬಂದಿದೆ. ಹತ್ತಿರದ ಕುಟುಂಬಸ್ಥರು 13 ಮಂದಿ ಇದ್ದು ಅವರನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ.
ಜಿಗಣಿ ಆಸ್ಪತ್ರೆಯ ವೈದ್ಯರು, ಪುರಸಭೆ ಆರೋಗ್ಯಾಧಿಕಾರಿ, ಪೊಲೀಸರು ಗರ್ಭಿಣಿಯನ್ನು ಹೆಚ್ಚಿನ ಚಿಕಿತ್ಸೆಗೆ ಸಾಗಿಸುವಲ್ಲಿ ಸಿದ್ದತೆ ನಡೆಸಿದ್ದು. ಆಕೆಯಿದ್ದ ಮನೆಯನ್ನು ಸೀಲ್ಡೌನ್ ಮಾಡಲು ಚಿಂತನೆ ನಡೆಸುತ್ತಿದ್ದಾರೆ.
ಗರ್ಭಿಣಿಯ ಹೆರಿಗೆಯ ದಿನಾಂಕ ಮುಂದಿನ ತಿಂಗಳು ನಾಲ್ಕಕ್ಕೆ ಎಂದು ಅವರ ಖಾಸಗಿ ವೈದ್ಯರು ನಿರ್ಧರಿಸಿದ್ದರು. ಇದೀಗ ಇಂತಹ ಪರಿಸ್ಥಿತಿಯಲ್ಲಿ ಗರ್ಭಿಣಿಗೆ ಮಾನಸಿಕ ಸ್ಥೈರ್ಯ ತುಂಬುವಲ್ಲಿ ವೈದ್ಯೆ ಡಾ. ಲತಾ ಹೆಚ್ಚಿನ ಪ್ರಯತ್ನ ಮಾಡುತ್ತಿದ್ದಾರೆ.