ಬೆಂಗಳೂರು: ಪಾದರಾಯನಪುರದ ಪಕ್ಕದ ವಾರ್ಡ್ ಜೆಜೆಆರ್ ನಗರ ಪೊಲೀಸ್ ಠಾಣೆಯ 43 ವರ್ಷದ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಕೊರೊನಾ ದೃಢಪಟ್ಟಿದೆ.
ಬೀಟ್ ಡ್ಯೂಟಿ ಮಾಡ್ತಿದ್ದ ಹೆಡ್ನ್ಸ್ಸ್ಟೇಬಲ್ ಇವತ್ತಿನವರೆಗೂ ಸ್ಟೇಷನ್ನಲ್ಲಿ ಡ್ಯೂಟಿ ಮಾಡುತ್ತಿದ್ದರು. ಪೊಲೀಸ್ ಸಿಬ್ಬಂದಿಯ ರ್‍ಯಾಂಡಮ್ ಟೆಸ್ಟ್ ವೇಳೆ ಪಾಸಿಟಿವ್ ಬಂದಿರೋದು ಧೃಡಪಟ್ಟಿದೆ ಎಂದು ಅಧಿಕಾರಿ ಮನೋರಂಜನ್ ಹೆಗಡೆ ತಿಳಿಸಿದರು.
ಪಾದರಾಯನಪುರದ 11ನೇ ಕ್ರಾಸ್ನಲ್ಲಿ ಈ ಹಿಂದೆ ಬೀಟ್ ಡ್ಯೂಟಿ ಮಾಡಿದ್ದರು. ಹೆಂಡತಿ-ಮಕ್ಕಳೊಂದಿಗೆ ನಾಯಂಡಹಳ್ಳಿ ವಾರ್ಡ್ನಲ್ಲಿ ವಾಸ ಮಾಡುತ್ತಿದ್ದರು. ಇದೀಗ ಹೆಂಡತಿ-ಮಗು ಮತ್ತು ಜೊತೆಯಲ್ಲಿದ್ದ ಪೊಲೀಸರನ್ನ ಕ್ವಾರಂಟೈನ್ ಮಾಡಲಾಗುತ್ತಿದೆ. ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡಲಾಗುತ್ತಿದೆ.