ಬೆಂಗಳೂರು : ರಾಜ್ಯದಲ್ಲಿಂದು 899 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,26,767ಕ್ಕೆ ಏರಿಕೆಯಾಗಿದೆ.
ಇಂದು 4 ಮಂದಿ ಕೋವಿಡ್ಗೆ ಬಲಿಯಾಗಿದ್ದು, ಮೃತರ ಸಂಖ್ಯೆ 12,138ಕ್ಕೆ ಏರಿಕೆಯಾಗಿದೆ. ಇದರಲ್ಲಿ 19 ಸೋಂಕಿತರು ಅನ್ಯ ಕಾರಣಕ್ಕೆ ಮೃತರಾಗಿದ್ದಾರೆ.
872 ಸೋಂಕಿತರು ಇಂದು ಗುಣಮುಖರಾಗಿದ್ದು, ಈವರೆಗೆ 9,05,158 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 202 ಜನರು ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ರಾಜ್ಯದಲ್ಲಿ 9,452 ಸಕ್ರಿಯ ಪ್ರಕರಣಗಳಿವೆ.
ಕಳೆದ 7 ದಿನಗಳಲ್ಲಿ 22,291 ಮಂದಿ ಹೋಂ ಕ್ವಾರಂಟೈನ್ ಆಗಿದ್ದಾರೆ. ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 57,645 ಮಂದಿ ಇದ್ರೆ, ದ್ವಿತೀಯ ಸಂಪರ್ಕದಲ್ಲಿ 64,525 ಜನರಿದ್ದಾರೆ.
ಹೋಂ ಕ್ವಾರಂಟೈನ್ ಆದವರ ಪೈಕಿ 40 ಮಂದಿಗೆ ಪಾಸಿಟಿವ್ ಬಂದಿದೆ. ಇವರ ಸಂಪರ್ಕದಲ್ಲಿದ್ದ 26 ಮಂದಿಗೂ ಸೋಂಕಿರುವುದು ದೃಢಪಟ್ಟಿದೆ. ಯುಕೆಯಿಂದ ಬಂದ 11 ಜನಕ್ಕೆ ರೂಪಾಂತರ ಕೊರೊನಾ ದೃಢಪಟ್ಟಿದೆ.