ETV Bharat / state

ಕೊರೊನಾ ಭೀತಿ: ಮಾನಸಿಕ ಆರೋಗ್ಯ ಸಂತುಲತೆಗೆ ತಜ್ಞರ ಸಲಹೆಗಳು - corona news

ಕೊರೊನಾ ಸಾಂಕ್ರಾಮಿಕ ರೋಗ ಜನ ಸಾಮಾನ್ಯರಿಗೆ ಒತ್ತಡ ಉಂಟು ಮಾಡಿದೆ. ಈ ರೋಗದ ಕುರಿತ ಹೆದರಿಕೆ ಹಾಗೂ ಆತಂಕ ಹಿರಿಯರು ಮತ್ತು ಮಕ್ಕಳಲ್ಲಿ ಮಾನಸಿಕ ತುಮುಲಗಳನ್ನು ಉಂಟು ಮಾಡಬಲ್ಲದು. ಈ ಒತ್ತಡವನ್ನು ಸಹಿಸಿಕೊಂಡು, ಅದನ್ನು ಕಡಿಮೆ ಮಾಡಿಕೊಳ್ಳುವುದು, ನಿಮ್ಮನ್ನು, ನೀವು ಯಾರ ಬಗ್ಗೆ ಹೆಚ್ಚಿನ ಗಮನ ತೆಗೆದುಕೊಳ್ಳುವಿರೋ, ನಿಮ್ಮ ಸಮುದಾಯವನ್ನು ಇನ್ನಷ್ಟು ಸದೃಢಗೊಳಿಸಲು ಸಹಕಾರಿ

Corona Panic: Expert Tips for Mental Health Equilibrium
ಕೊರೊನಾ ಭೀತಿ: ಮಾನಸಿಕ ಆರೋಗ್ಯ ಸಂತುಲತೆಗೆ ತಜ್ಞರ ಸಲಹೆಗಳು
author img

By

Published : Apr 15, 2020, 11:31 PM IST

ಬೆಂಗಳೂರು: ಕೊರೊನಾ ಸಾಂಕ್ರಾಮಿಕ ರೋಗ ಹರಡುವಿಕೆ, ವಿಶ್ವಾದ್ಯಂತ ಕೋಟ್ಯಂತರ ಜನರ ಬದುಕನ್ನು ನಾನಾ ರೀತಿಗಳಲ್ಲಿ ಪ್ರಭಾವಿಸಿದೆ. ಕೋವಿಡ್ 19ರ ಕುರಿತ ಎಚ್ಚರಿಕೆ ಸಂದೇಶಗಳು, ಹಾಗೂ ವೈರಸ್‍ನ ಹರಡುವಿಕೆ ಸಂಬಂಧ ಮಾಧ್ಯಮಗಳ ವರದಿಯಿಂದ ಜನರಲ್ಲಿ ಭೀತಿ, ಹೆದರಿಕೆ, ತಲ್ಲಣ, ಅರ್ಥವಾಗುವಂತದ್ದೇ.

ಯಾವುದೇ ಒಂದು ರೋಗದ ಕುರಿತ ಭೀತಿ ಹಾಗೂ, ತಲ್ಲಣ ಹೆಚ್ಚಿನದಾಗಿದ್ದು, ವಯಸ್ಕರು ಹಾಗೂ ಮಕ್ಕಳಿಬ್ಬರಲ್ಲೂ ಬಲವಾದ ತುಮುಲ-ಭಾವಣಗಳಿಗೆ ಇದು ಕಾರಣವಾಗಬಲ್ಲದು.

ಒತ್ತಡದಾಯಕ ಸನ್ನಿವೇಶವೊಂದಕ್ಕೆ ಪ್ರತಿಯೊಬ್ಬರೂ ಬೇರೆ ಬೇರೆ ತೆರನಾಗಿ ಪ್ರತಿಕ್ರಿಯಿಸಬಹುದು. ಒಬ್ಬರ ಹಿನ್ನೆಲೆ, ಅವರನ್ನು ಇತರರಿಂದ ಪ್ರತ್ಯೇಕಿಸುವ ಮನಸ್ಥಿತಿ, ಅವರು ವಾಸಿಸುವ ಸ್ಥಳ ಹಾಗೂ ಸಮುದಾಯಗಳು ಅವರು ಈ ಸಾಂಕ್ರಾಮಿಕ ರೋಗಕ್ಕೆ ಪ್ರತಿಕ್ರಿಯಿಸುವ ರೀತಿಯನ್ನು ನಿರ್ಧರಿಸುತ್ತದೆ.

ಮಾನಸಿಕ ಆರೋಗ್ಯ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಹಲವಾರು ಹೆಸರಾಂತ ಸಮಾತಜ್ಞರು, ಸಂಶೋಧಕರು, ಇಂತಹ ಒತ್ತಡದ ಸನ್ನಿವೇಶದಲ್ಲಿ ಅತಂಕ ಮತ್ತು ಒತ್ತಡವನ್ನು ನಿರ್ವಹಿಸುವ ಬಗ್ಗೆ ತಮ್ಮ ಪರಿಣತ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಜಾಗತಿಕ ಮಾನಸಿಕ ಆರೋಗ್ಯ ತಜ್ಞ ಕ್ರಿಸ್ ಉಂಡರ್‍ಹಿಲ್ ಅವರು ಈ ಒತ್ತಡ ಹಾಗೂ ಆತಂಕ ನಿವಾರಣೆಗೆ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿರುವವರಿಗೆ (ವರ್ಕ್ ಫ್ರಂ ಹೋಂ) "ದಿನಕ್ಕೊಂದು ಚೌಕಟ್ಟು" ಒಳ್ಳೆಯ ಪ್ರಯತ್ನ.

ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ಈ ಸವಾಲು ಎದುರಾಗುವ ದಿನಗಳ ಮೊದಲು ನೀವು ಹೇಗಿದ್ದಿರೋ ಇರುವ ಹಾಗೆ ಇದ್ದು ಬಿಡಿ. ಬೆಳಗ್ಗೆ ಎದ್ದು ಬಿಡಿ, ಶೇವ್ ಮಾಡಿ, ಸ್ನಾನ ಮಾಡಿ, ತಿಂಡಿ ತಿನ್ನಿ...ಹೀಗೆ," ಎಂದು ವಿವರಿಸುತ್ತಾರೆ ಅವರು.

"ದಿನಾಲೂ ಕೆಲಸಕ್ಕಾಗಿ ಒಂದು ಅವಧಿಯನ್ನು ನಿಗದಿ ಪಡಿಸಿ. ಕೆಲಸದ ನಡುವೆ ಸಣ್ಣ-ಸಣ್ಣ ಅವಧಿಯ ವಿರಾಮ ತೆಗೆದುಕೊಳ್ಳಿ," ಎಂಬ ಸಲಹೆ ನೀಡುತ್ತಾರೆ ಅವರು.

ಇತರ ಚಟುವಟಿಕೆಗಳಾದ ಅಡುಗೆ, ಮನೆ ಕೆಲಸಗಳು, ಸಂಗೀತ ಆಲಿಸುವುದು, ಮತ್ತಿತರ ಚಟುವಟಿಕೆಗಳನ್ನು ಕೂಡಾ ಕೆಲಸದ ಏಕಾತಾನತೆಯಿಂದ ತಪ್ಪಿಸಿಕೊಳ್ಳಲು ಉಂಡರ್‍ಹಿಲ್ ಸಲಹೆ ನೀಡುತ್ತಾರೆ. "ಸುದ್ದಿಯಿಂದ ವಿಮುಖವಾಗುವುದು ಕೂಡಾ ಈ ಅವಧಿಯಲ್ಲಿ ತಲ್ಲಣದ ಭಾವನೆ ಹೆಚ್ಚಿಸಬಹುದು," ಎಂದು ಅವರು ಎಚ್ಚರಿಕೆ ನೀಡುತ್ತಾರೆ.

ಆತಂಕದಲ್ಲಿರುವ ಸ್ನೇಹಿತರಿಗೆ ಹಾಗೂ ಕುಟುಂಬ ಸದಸ್ಯರಿಗೆ ಹೇಗೆ ನೆರವಾಗುವುದು?

ಕ್ರೈಸಿಸ್ ಟೆಕ್ಟ್‍ಲೈನ್ ಸಂಸ್ಥೆಯ ಸಹ ಸಂಸ್ಥಾಪಕ ಹಾಗೂ ಮುಖ್ಯ ದತ್ತಾಂಶ ವಿಜ್ಞಾನಿ ಬಾಬ್ ಫಿಲ್ಬಿನ್ ಪ್ರಕಾರ ಇಂತಹ ಅನಿಶ್ಚಿತ ವಿಶ್ವವ್ಯಾಪ್ತಿ ಬಿಕ್ಕಟ್ಟು ಎಲ್ಲರ ಮೇಲೂ ಅತೀವ ಒತ್ತಡ ಉಂಟು ಮಾಡಬಹುದಾಗಿದೆ ಹಾಗೂ ನಾನಾ ಭಾವನೆಗಳನ್ನು ಉಂಟು ಮಾಡಬಹುದ್ದಾಗಿದೆ. "ಹೀಗೆ ಅನಿಶ್ವಿತತೆ, ತಲ್ಲಣಗಳನ್ನು ಎದುರಿಸುತ್ತಿರುವವರು ದಿನ, ವಾರ, ಹಾಗೂ ವರ್ಷದಂತಹ ಶಬ್ದಗಳನ್ನು ಬಳಸುವುದರ ಮೂಲಕ ತಮಗೆ ತಾವೇ ಒಂದು ಅವಧಿಯನ್ನು ನಿಗದಿಪಡಿಸಿಕೊಳ್ಳುತ್ತಾರೆ ಹಾಗೂ ತಮ್ಮನ್ನು ತಾವೇ ಸಂತೈಸಿಕೊಳ್ಳುತ್ತಾರೆ. ಈ ಬಿಕ್ಕಟ್ಟು ಸುದೀರ್ಘವಾಗಲಿಕ್ಕಿಲ್ಲ ಎನ್ನುವುದನ್ನು ಅವರು ತಮಗೆ ತಾವೇ ಹೇಳಿಕೊಳ್ಳುತ್ತಾರೆ," ಎನ್ನುತ್ತಾರೆ ಅವರು.

"ಅಂತಹ ಭಾವನೆಗಳಿಂದ ತೊಳಲಾಡುತ್ತಿರುವವರಿಗೆ ನಾವು ಅವರ ತೆರನಾಗಿಯೇ ಯೋಚಿಸುತ್ತಿರುವವರು ಹಲವಾರು ಜನರಿದ್ದಾರೆ ಎಂದು ನಾವು ಮನವರಿಕೆ ಮಾಡಿಕೊಡಬೇಕಿದೆ. ತಲ್ಲಣಗಳನ್ನು ಸಾಮಾನ್ಯೀಕರಣಗೊಳಿಸಿ, ಒಬ್ಬರನ್ನು ಸಾಮಾನ್ಯರಂತೆ ಯೋಚಿಸುತ್ತಿರುವವಂತೆ ಮನವೊಲಿಸಬೇಕು. ಅವರೊಬ್ಬರೇ ಆ ತೆರನಾಗಿ ಯೋಚಿಸುತ್ತಿಲ್ಲ ಎಂಬುವುದನ್ನು ನಂಬಿಕೆ ಹುಟ್ಟುವಂತೆ ಮಾಡುವುದು ಅವರ ಆತಂಕವನ್ನು ದೂರ ಮಾಡುತ್ತದೆ," ಎನ್ನುತ್ತಾರೆ ಅವರು.

ಸ್ವಯಂ ಗೃಹಬಂಧನ ಎಲ್ಲರಿಗೂ ಕಠಿಣದಾಯಕ ಸನ್ನಿವೇಶ. ಆದರೆ ಕೆಲವು ವ್ಯಕ್ತಿಗಳು ಹೆಚ್ಚು ಸೂಕ್ಷ್ಮ ಉಳ್ಳವರಾಗಿರುತ್ತಾರೆ ಹಾಗೂ ಸುಲಭವಾಗಿ ನಕಾರಾತ್ಮಕ ಭಾವನೆ ಬೆಳೆಸಿಕೊಳ್ಳುತ್ತಾರೆ. ಶಿಶು ದೌರ್ಜನ್ಯಕ್ಕೊಳಗಾದವರು, ಕೌಟುಂಬಿಕ ಹಿಂಸೆಗೆ ಒಳಗಾದವರು ಈ ತೆರನಾದ ನಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದಿದ್ದಾರೆ.

ನಮ್ಮ ದತ್ತಾಂಶಗಳು ತೋರಿಸುವುದೇನೆಂದರೆ ಹದಗೆಡುವ ಆರ್ಥಿಕ ಪರಿಸ್ಥಿತಿ ಕೂಡಾ ಒತ್ತಡಕ್ಕೆ ಕಾರಣವಾಗಬಲ್ಲದು. ಈ ಹಿನ್ನೆಲೆಯಲ್ಲಿ ಜೀವನೋಪಾಯ ಹಾಗೂ ಉದ್ಯೋಗ ಕಳೆದುಕೊಂಡವರ ಬಗ್ಗೆ ನಾವು ಹೆಚ್ಚಿನ ಗಮನ ಹರಿಸಬೇಕಾಗುತ್ತದೆ," ಎಂದಿದ್ದಾರೆ.

ಉದ್ಯೋಗಿಗಳ ಮಾನಸಿಕ ಆರೋಗ್ಯ ರಕ್ಷಣೆ

ಈ ಸಾಂಕ್ರಾಮಿಕ ರೋಗದ ಹರಡುವಿಕೆ, ನಮ್ಮ ಕೆಲಸದ ಸಂಸ್ಕøತಿಯನ್ನು ಬದಲಾಯಿಸಿದೆ. ಈ ಹಿನ್ನೆಲೆಯಲ್ಲಿ ಉದ್ಯೋಗಿಗಳ ಮಾನಸಿಕ ಆರೋಗ್ಯ ರಕ್ಷಣೆ ಉದ್ಯೋಗದಾತರ, ಸಂಸ್ಥೆಗಳ ಆದ್ಯ ಕರ್ತವ್ಯ. ಉದಾಹರಣೆಗೆ, ವರ್ಕಿಟ್ ಸಂಸ್ಥೆ ಅದರ ಉದ್ಯೋಗಿಗಳಿಗೆ ಸುರಕ್ಷಿತ ಮನೆ, ಸಾರಿಗೆ, ಹಾಗೂ ಉದ್ಯೋಗಿಗಳಲ್ಲಿ ಸುರಕ್ಷತಾ ಭಾವನೆ ಉಂಟು ಮಾಡುವ ಎಲ್ಲಾ ಕ್ರಮಕೈಗೊಳನ್ನೂ ಕೈಗೊಳ್ಳುತ್ತಿದೆ.

ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಉತ್ತಮ ಸಂಪರ್ಕದ ಮಹತ್ವವನ್ನು ಸಂಶೋಧಕರು ಒತ್ತಿ ಹೇಳುತ್ತಾರೆ. ಸಹೋದ್ಯೋಗಿಗಳ ಜತೆಗೆ ಸಂಪರ್ಕದಲ್ಲಿರಲು ಬಹುತೇಕರು ಬಯಸುತ್ತಾರೆ. ಸಂಪರ್ಕ ಈ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಅನಿವಾರ್ಯವಾಗಿರುವುದರಿಂದ, ಈ ಕೆಳಗಿನ ಸಲಹೆಗಳು ಉಪಯೋಗಕಾರಿ. ಯಾರಾದರೂ ಸಾಮಾಜಿಕ ಒಂಟಿತನದ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ನಿಮಗನಿಸಿದರೆ, ಅವರನ್ನು ಸಂಪರ್ಕಿಸುವುದು ಅತಿ ಮುಖ್ಯ. ನೀವು ಅವರ ಆರೈಕೆಯನ್ನು ಬಯಸುತ್ತಿದ್ದೀರಿ ಎಂಬುದು ಅವರಿಗೆ ತಿಳಿಯಲಿ.

* ಅವರಿಗೆ ದೂರವಾಣಿ ಕರೆ ಮಾಡುತ್ತಿರಿ; ಅವರು ಹೇಗಿದ್ದಾರೆ ಎಂದು ತಿಳಿದುಕೊಳ್ಳುತ್ತಿರಿ

* ಸಂದೇಶಗಳನ್ನು ಕಳುಹಿಸುತ್ತಿರಿ.

* ಅವರ ಮನೆ ಬಾಗಿಲಿಗೆ ಸಂದೇಶದ ಚೀಟಿ ಕಳುಹಿಸಿ.

* ಇತರರಲ್ಲಿ ಭರವಸೆ ಹುಟ್ಟಿಸುವ ನಿಮ್ಮ ಶಕ್ತಿಯನ್ನು ತಾತ್ಸಾರ ಮಾಡಬೇಡಿರಿ.

ನಿಮ್ಮ ಮಕ್ಕಳನ್ನು ನೀವು ಈ ತೆರನಾಗಿ ಬೆಂಬಲಿಸಬಹುದು.

* ಕೋವಿಡ್ 19ರ ಬಗ್ಗೆ ನಿಮ್ಮ ಮಕ್ಕಳಲ್ಲಿ ಮಾತನಾಡಲು ಸಮಯ ಹೊಂದಿಸಿಕೊಳ್ಳಿ. ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿ. ಅವರ ಭಯ ನಿವಾರಿಸಿ.‘

* ಅವರ ಸುರಕ್ಷತೆ ಬಗ್ಗೆ ನಿಮ್ಮ ಮಕ್ಕಳಲ್ಲಿ ನಂಬಿಕೆ ಮೂಡಿಸಿ. ಅವರು ಒಂದೊಮ್ಮೆ ಅಸಮಾಧಾನಗೊಂಡರೂ ಸರಿಯೆನ್ನಿ. ನಿಮ್ಮ ಒತ್ತಡದ ಸನ್ನಿವೇಶವನ್ನು ಅವರಿಗೆ ತಿಳಿ ಹೇಳಿ. ಈ ಒತ್ತಡ ಸನ್ನಿವೇಶವನ್ನು ನಿಭಾಯಿಸುವ ಬಗ್ಗೆ ಅವರಿಗೆ ತಿಳಿ ಹೇಳಿ.

* ಸಾಮಾಜಿಕ ಮಾಧ್ಯಮಗಳಿಗೆ ಹಾಗೂ ಸುದ್ದಿ ಮಾಧ್ಯಮಗಳಿಗೆ ನಿಮ್ಮ ಕುಟುಂಬ ಹೆಚ್ಚು ಜೋತು ಬೀಳದಂತೆ ಎಚ್ಚರ ವಹಿಸಿ. ಮಕ್ಕಳು ತಾವು ನೋಡುವ-ಕೇಳುವ ಸಂಗತಿಗಳನ್ನು ತಪ್ಪು ಅರ್ಥ ಮಾಡಿಕೊಳ್ಳುವ ಸಾಧ್ಯತೆ ಇದೆ ಹಾಗೂ ಅದರಿಂದ ಅವರು ಭಯಭೀತರಾಗುವ ಸಾಧ್ಯತೆ ಇದೆ. ಏಕೆಂದರೆ ಇದೆಲ್ಲಾ ಅವರಿಗೆ ಅರ್ಥವಾಗುವಂತಹ ವಿಷಯಗಳಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.