ETV Bharat / state

ಕೊರೊನಾ ಲಾಕ್​ಡೌನ್ ಎಫೆಕ್ಟ್: ಸಿಟಿಯಲ್ಲಿ ಹಸುವಿನ ಆಹಾರಕ್ಕೆ ಪರದಾಟ

ನಗರ ಪ್ರದೇಶದಲ್ಲಿ ಹೆಚ್ಚಾಗಿ ಹಸಿ ಹುಲ್ಲು ಸಿಗದ ಕಾರಣ, ಬೂಸಾ, ಬೇರೆ ಬೇರೆ ರೀತಿಯ ಹಸುವಿನ ರೆಡಿ ಆಹಾರಕ್ಕೆ ಬೇಡಿಕೆ ಹೆಚ್ಚಿರುತ್ತದೆ. ಡೈರಿಗಳಲ್ಲಿ ಆಹಾರ ಪೂರೈಕೆ ಸರಿಯಾಗಿ ನಡೆಯುತ್ತಿಲ್ಲ ಎಂದು ಹಸು ಸಾಕಣೆದಾರರು ಆರೋಪಿಸಿದ್ದಾರೆ.

author img

By

Published : Apr 13, 2020, 4:36 PM IST

Corona Lockdown Effect
ಕೊರೊನಾ ಲಾಕ್​ಡೌನ್ ಎಫೆಕ್ಟ್- ಸಿಟಿಯಲ್ಲಿ ಹಸುವಿನ ಆಹಾರಕ್ಕೆ ಪರದಾಟ

ಬೆಂಗಳೂರು: ರಾಜ್ಯ ಸರ್ಕಾರ ಹಸುವಿನ ಆಹಾರ ಸಾಗಾಣಿಕೆಗೆ ಅಡ್ಡಿ ಮಾಡಬಾರದೆಂದು ಹೇಳಿದೆ. ಆದ್ರೆ ನಗರದಲ್ಲಿ ಹಸು ಸಾಕುತ್ತಿರುವವರಿಗೆ ಹಸುವಿನ ಆಹಾರ ಸಾಗಣೆ, ಖರೀದಿಯೇ ದೊಡ್ಡ ಸವಾಲಾಗಿದೆ.

ನಗರ ಪ್ರದೇಶದಲ್ಲಿ ಹೆಚ್ಚಾಗಿ ಹಸಿ ಹುಲ್ಲು ಸಿಗದ ಕಾರಣ, ಬೂಸಾ, ಬೇರೆ ಬೇರೆ ರೀತಿಯ ಹಸುವಿನ ರೆಡಿ ಆಹಾರಕ್ಕೆ ಬೇಡಿಕೆ ಹೆಚ್ಚಿರುತ್ತದೆ. ಡೈರಿಗಳಲ್ಲಿ ಆಹಾರ ಪೂರೈಕೆ ಸರಿಯಾಗಿ ನಡೆಯುತ್ತಿಲ್ಲ ಎಂದು ಚಿಕ್ಕಪೇಟೆಯ ಹಸು ಸಾಕಾಣಿಕೆದಾರರಾದ ಕಿರಣ್ ಆರೋಪಿಸಿದ್ದಾರೆ. ಹನ್ನೆರಡು ಹಸು ಸಾಕಿರುವ ಅವರು, ಒಂದು ಬಾರಿಗೆ ಒಂದೇ ಬ್ಯಾಗ್ ಪಶು ಆಹಾರ ಕೊಂಡುಕೊಳ್ಳಲು ಮಾತ್ರ ಅನುಮತಿ ಇದೆ. ಆದ್ರೆ ಅಷ್ಟು ಹಸುಗಳಿಗೆ ಸಾಲೋದಿಲ್ಲ. ಪದೆ ಪದೇ ರಸ್ತೆಗಿಳಿಯಲು ಪೊಲೀಸರು ಬಿಡೋದಿಲ್ಲ ಎಂದು ಸಮಸ್ಯೆ ಹೇಳಿಕೊಂಡಿದ್ದಾರೆ.

ಈ ಮಧ್ಯೆ ಪಶು ಆಹಾರದ ಬೆಲೆಯಲ್ಲೂ ಏರಿಕೆಯಾಗಿದೆ. ಡೈರಿಯಿಂದ ರಿಟೇಲ್ ಶಾಪ್​ಗೆ ಒಂದು ಬಾರಿ ನಲ್ವತ್ತು ಬ್ಯಾಗ್​ಗಳನ್ನು ಕೊಡುತ್ತಾರೆ. ಆದ್ರೆ ಹೈನುಗಾರಿಕೆಯ ರೈತರಿಗೆ ಮಾತ್ರ ಒಂದೊಂದೇ ಬ್ಯಾಗ್ ಕೊಡೋದು ಎಷ್ಟು ನ್ಯಾಯ ಎಂದು ಹೇಳಿಕೊಂಡಿದ್ದಾರೆ. ಚಕ್ಕೆ ಬೂಸಾ 34 ಕೆಜಿ 750 ರೂ ಇತ್ತು. ಈಗ 1020, 1050 ರೂಪಾಯಿಗೆ ಏರಿಕೆಯಾಗಿದೆ. ಬಹಳ ಜನ ಸಾಲು ನಿಂತು ತಗೊಂಡು, ಕಿತ್ತಾಟ ಮಾಡಿದ್ರು ಬೂಸಾ ಸಿಗುತ್ತಿಲ್ಲ. ಬೆಲೆಯೂ ಜಾಸ್ತಿ ಹೀಗಾಗಿ ಹಸುಗಳಿಗೆ ಅರೆ ಹೊಟ್ಟೆ ತುಂಬಿಸುವಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಚಿಕ್ಕಪೇಟೆ ಬಳಿಯ ಮನವರ್ತಿ ಪೇಟೆಯ, ಕಾಶೀಶ್ವರಿ ದೇವಾಲಯದ ಹತ್ತಿರ ಹಸು ಸಾಕುತ್ತಿರುವ ಪ್ರತಿಯೊಬ್ಬರ ಸಮಸ್ಯೆಯೂ ಇದಾಗಿದೆ. ಹಸುವಿನ ಆಹಾರ ಧಾರಾಳವಾಗಿ ಸಿಗುವಂತೆ ಆಗಬೇಕೆಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.