ETV Bharat / state

ಕುಕ್ಕುಟೋದ್ಯಮದ ಮೇಲೂ ಕೋವಿಡ್​ ಕರಿಛಾಯೆ.. ಫೌಲ್ಟ್ರಿ ಮಾಲೀಕರು ತತ್ತರ

ರೂಪಾಂತರಗೊಂಡಿರುವ ಕೋವಿಡ್​ ಪ್ರತೀ ಕ್ಷೇತ್ರದ ಮೇಲೂ ತನ್ನ ಕೆಂಗಣ್ಣು ಬೀರಿದೆ. ಅದೇ ರೀತಿ ಕುಕ್ಕುಟೋದ್ಯಮದ ಮೇಲೂ ಕೋವಿಡ್​ ಕರಿಛಾಯೆ ಆವರಿಸಿದ್ದು, ವ್ಯಾಪಾರ ಕುಠಿತಗೊಂಡಿದೆ. ಅದರ ನೇರ ಪರಿಣಾಮ ಕೋಳಿ ಸಾಕಾಣಿಕೆಯ ಮಾಲೀಕರ ಮೇಲೆ ಬಿದ್ದಿದ್ದು, ಕಾರ್ಮಿಕರು ಸಹ ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ.

corona lock down effects on poultry business !
ಕುಕ್ಕುಟೋದ್ಯಮದ ಮೇಲೂ ಕೋವಿಡ್​ ಎಫೆಕ್ಟ್​​
author img

By

Published : May 22, 2021, 7:52 AM IST

ಬೆಂಗಳೂರು: ಮಹಾಮಾರಿ ಕೋವಿಡ್​​​ನಿಂದ ಸಾಕಷ್ಟು ಉದ್ಯಮಗಳು ನಷ್ಟ ಅನುಭವಿಸುವಂತಾಗಿದೆ. ಅದೆಷ್ಟೋ ಕಂಪನಿಗಳು ಬಾಗಿಲು ಮುಚ್ಚಿವೆ. ಉದ್ಯಮಗಳಿಗೆ ದೊಡ್ಡ ಪ್ರಮಾಣದಲ್ಲಿ ಹೊಡೆತ ಬಿದ್ದಿರೋದು ನಮಗೆಲ್ಲ ತಿಳಿದಿರುವ ವಿಚಾರ. ಕೋವಿಡ್​ ಮೊದಲ ಅಲೆಯಿಂದ ಚೇತರಿಸಿಕೊಳ್ಳುತ್ತಿದ್ದ ಸಮಯದಲ್ಲಿ ರೂಪಾಂತರಗೊಂಡ ಸೋಂಕಿನಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಅದೇ ರೀತಿ ಕುಕ್ಕುಟೋದ್ಯಮದ ಮೇಲೂ ಕೋವಿಡ್​ ಕರಿಛಾಯೆ ಆವರಿಸಿದ್ದು, ವ್ಯಾಪಾರ ಕುಠಿತಗೊಂಡಿದೆ. ಅದರ ನೇರ ಪರಿಣಾಮ ಕೋಳಿ ಸಾಕಾಣಿಕೆಯ ಮಾಲೀಕರ ಮೇಲೆ ಬಿದ್ದಿದ್ದು, ಕಾರ್ಮಿಕರು ಸಹ ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ.

ಕುಕ್ಕುಟೋದ್ಯಮದ ಮೇಲೂ ಕೋವಿಡ್​ ಎಫೆಕ್ಟ್​​

ವದಂತಿಯಿಂದ ಕುಕ್ಕುಟೋದ್ಯಮ ಕುಂಠಿತ:

ವಿಶ್ವದ ಯಾವುದೇ ಭಾಗದಲ್ಲಿ ಯಾವುದೇ ರೀತಿಯ ರೋಗ ಕಾಣಿಸಿಕೊಳ್ಳಲಿ, ಇದಕ್ಕೆ ಮೊದಲು ಬಲಿಯಾಗುವುದು ಕುಕ್ಕುಟೋದ್ಯಮಿ. ಕೋಳಿಗಳಿಂದಲೇ ವೈರಾಣು ಹರಡುತ್ತದೆ ಎಂಬ ವದಂತಿಗಳು ಹಬ್ಬಿ ಗಂಭೀರ ಪ್ರಭಾವ ಬೀರುತ್ತದೆ. ಇದರಿಂದ ಮಾಲೀಕರು ಸಾಕಷ್ಟು ನಷ್ಟ ಅನುಭವಿಸುತ್ತಾರೆ. ವರ್ಷಕ್ಕೆ ಒಂದು ಬಾರಿಯಾದರೂ ಹಕ್ಕಿ ಜ್ವರದ ಭೀತಿಯನ್ನು ಎದುರಿಸಬೇಕಾಗುತ್ತದೆ. ಕಳೆದೊಂದು ವರ್ಷದಿಂದ ಹೊಸದಾಗಿ ಕೋವಿಡ್​​ ವಕ್ಕರಿಸಿದ್ದು, ಮಹಾಮಾರಿಯಿಂದ ಕುಕ್ಕುಟೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ಕೋವಿಡ್​​ ಎರಡನೇ ಅಲೆ ಕರ್ನಾಟಕದ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಅದರಲ್ಲೂ ಬೆಂಗಳೂರಿನಲ್ಲಿ ಸೋಂಕು ವಿಪರೀತವಾಗಿ ಉಲ್ಬಣಗೊಂಡು, ಹೋಟೆಲ್, ಚಿಕನ್ ಸ್ಟಾಲ್, ಮಾಲ್‌ಗಳು, ಬೀದಿ ಬದಿಯ ಫಾಸ್ಟ್ ಫುಡ್‌ ಸೆಂಟರ್​ಗಳು ಲಾಕ್​ಡೌನ್​​​ನಿಂದಾಗಿ ಮುಚ್ಚುವಂತೆ ಮಾಡಿದೆ. ಇದರಿಂದ ಬೆಂಗಳೂರಿನ ಕುಕ್ಕುಟೋದ್ಯಮಕ್ಕೆ ಸಾಕಷ್ಟು ನಷ್ಟ ಉಂಟಾಗಿದೆ.

ಹಾಕಿದ ಬಂಡವಾಳವೂ ಕೈ ಸೇರುತ್ತಿಲ್ಲ:

ಸರ್ಕಾರ ಬೆಳಗ್ಗೆ 4 ಗಂಟೆಗಳ ಕಾಲ ಚಿಕನ್ ಸೆಂಟರ್​ಗಳನ್ನು ತೆರೆಯಲು ಅನುಮತಿ ನೀಡಿದ್ದರೂ ಅಷ್ಟಾಗಿ ವ್ಯಾಪಾರ ಆಗುತ್ತಿಲ್ಲ. ಇದರಿಂದ ಕೋಳಿ ಸಾಕಾಣಿಕೆ ಉದ್ಯಮದ ಮೇಲೆ ಸಾಕಷ್ಟು ಪೆಟ್ಟು ಬಿದ್ದಿದೆ. ಕೊರೊನಾ ಎರಡನೇ ಅಲೆ ಆರಂಭಕ್ಕೂ ಮೊದಲು ಕೋಳಿ ಫಾರಂಗಳಲ್ಲಿ 1 ಕೆಜಿ ಕೋಳಿಗೆ ಸುಮಾರು 120 ರಿಂದ 130ರವರೆಗೆ ಮಾರಾಟವಾಗುತ್ತಿತ್ತು. ಆದರೆ ಕರ್ನಾಟಕದಲ್ಲಿ ಸೋಂಕು ಹೆಚ್ಚಾಗಿ ಲಾಕ್​​ಡೌನ್ ಆದ ಪರಿಣಾಮ ಕುಕ್ಕುಟೋದ್ಯಮ ಮೇಲೆ ಸಾಕಷ್ಟು ಪರಿಣಾಮ ಬೀರಿ ಈಗ 1ಕೆಜಿ ಕೋಳಿಗೆ ಕೇವಲ 25 ರಿಂದ 30 ರೂಪಾಯಿಗೆ ಮಾರಾಟವಾಗುತ್ತಿದೆ. ಆದರೆ ಒಂದು ಕೋಳಿಯನ್ನು ಕನಿಷ್ಠ 45 ದಿನಗಳವರೆಗೆ ಪೋಷಣೆ ಮಾಡಲು 80ರೂ. ವೆಚ್ಚ ಬರುತ್ತದೆ. ಸೋಂಕಿನ ಪ್ರಭಾವದಿಂದ ಇತ್ತ ಸಾಕಾಣಿಕೆ ವೆಚ್ಚವೂ ಕೈ ಸೇರುತ್ತಿಲ್ಲ ಎನ್ನುತ್ತಾರೆ ಫೌಲ್ಟ್ರಿ ಫಾರಂ ಮಾಲೀಕರು.

ಕೋಳಿ ವಿತರಣೆ ಮಾಡುವ ಮಧ್ಯವರ್ತಿಗಳು ಸಾಕಾಣಿಕೆದಾರರಿಂದ ಒಂದು ಕೆ.ಜಿ. ಗೆ 25ರಿಂದ 30 ರೂ. ನೀಡಿ ಖರೀದಿಸುತ್ತಿದ್ದಾರೆ. ನಂತರ ಅವರು 60-70 ರೂಪಾಯಿ ಲಾಭವನ್ನು ಇಟ್ಟುಕೊಂಡು ಮಾಂಸದ ಅಂಗಡಿಗಳಿಗೆ ವಿತರಣೆ ಮಾಡುತ್ತಾರೆ. ಚಿಕನ್ ಸ್ಟಾಲ್​ನವರು ಪ್ರತಿ ಕೆ.ಜಿ.ಗೆ 160-180 ರವರೆಗೆ ಮಾರಾಟ ಮಾಡುತ್ತಿದ್ದಾರೆ. ಇದು ಸಾಕಾಣಿಕೆದಾರರ ಅಸಮಾಧಾನಕ್ಕೆ ಕಾರಣವಾಗಿದೆ. ಹಾಕಿದ ಬಂಡವಾಳವೂ ತಮ್ಮ ಕೈ ಸೇರುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಚಿಕನ್‌ ಮಾರಾಟದಲ್ಲಿ ವ್ಯತ್ಯಯ:

ಕೊರೊನಾ ವೈರಸ್​​ ಕೋಳಿಗಳ ಮೂಲಕವೂ ಹಬ್ಬುತ್ತಿದೆಯೆಂಬ ವದಂತಿಯಿಂದಾಗಿ ಚಿಕನ್‌ ಮಾರಾಟದಲ್ಲಿ ಇಳಿಕೆ ಕಂಡು ಬಂದಿದೆ. 2-3 ವಾರಗಳಿಂದ ಬೆಲೆ ಸಹ ಕುಸಿತವಾಗಿದ್ದು, ಕೆ.ಜಿ.ಗೆ 220-240 ರೂ. ಇದ್ದ ಚಿಕನ್‌ ಬೆಲೆ ಈಗ 40-50 ಗಳಷ್ಟು ಕುಸಿತವಾಗಿ 170-180 ರೂ.ಗೆ ಮಾರಾಟವಾಗುತ್ತಿದೆ.

ಚಿಕನ್ ಸ್ಟಾಲ್​ಗಳಲ್ಲಿ ದಿನಕ್ಕೆ 120-200 ಕೆ.ಜಿ. ವರೆಗೆ ಚಿಕನ್​​ ಮಾರಾಟ ಮಾಡುತ್ತಿದ್ದವರು ಈಗ ದಿನಕ್ಕೆ 50 ಕೆ.ಜಿ. ಮಾರಾಟ ಆಗುವುದರಿಂದ ಕಷ್ಟವಾಗಿದೆ ಎನ್ನುತ್ತಾರೆ ಮಾರಾಟಗಾರರು. ಬೆಳಗ್ಗೆ 10 ಗಂಟೆಗಳವರೆಗೆ ಮಾತ್ರ ವ್ಯಾಪಾರಕ್ಕೆ ಅನುಮತಿ ನೀಡಿರುವುದರಿಂದ ಮಾರಾಟಕ್ಕೆ ಬಹಳಾನೇ ಪೆಟ್ಟು ಬಿದ್ದಿದೆ.

ಫೌಲ್ಟ್ರಿ ಫಾರಂ‌ ನವರು ಏನಂತಾರೆ?

'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಸುಗುಣ ಫೌಲ್ಟ್ರಿ ಫಾರಂ‌ ಹೊಸಕೋಟೆ ವಿಭಾಗದ ಮ್ಯಾನೇಜರ್‌ ಜೆ.ಪಿ. ವೀರೇಶ್, ಕೋವಿಡ್​ ಎರಡನೇ ಅಲೆ ಆರಂಭಕ್ಕೂ ಮೊದಲು ಕೋಳಿ ಕೆ.ಜಿ.ಗೆ 170-180 ರಷ್ಟು ಬೆಲೆಗೆ ಮಾರಾಟ ಆಗುತ್ತಿತ್ತು. ಆದರೀಗ ಒಂದು ಕೆ.ಜಿ.ಗೆ ಕೇವಲ 30-40 ರೂಪಾಯಿಗೆ ಮಾರಾಟವಾಗುತ್ತಿದೆ. ಒಂದು ಕೋಳಿಯನ್ನು 45 ದಿನದೊಳಗೆ ಮಾರಾಟ ಮಾಡಬೇಕು. ಆದರೆ ಲಾಕ್​ಡೌನ್​ನಿಂದ ಮಾಲ್, ಹೋಟೆಲ್, ಚಿಕನ್ ಸ್ಟಾಲ್ ಗಳು ಮುಚ್ಚಿರುವುದರಿಂದ ಮಾರಾಟ ಆಗದೇ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ನಷ್ಟದ ಬಗ್ಗೆ ತಿಳಿಸಿದರು.

ಇದನ್ನೂ ಓದಿ: ಸ್ಥಗಿತಗೊಂಡ ಪೌಲ್ಟ್ರಿ ಉದ್ಯಮ: ಸಂಕಷ್ಟದಲ್ಲಿ ಉದ್ಯಮಿ, ಕಾರ್ಮಿಕ ವರ್ಗ

ಯಾವುದೇ ಸಾಂಕ್ರಾಮಿಕ ಕಾಯಿಲೆಗಳು ಬಂದರೆ ಮೊದಲು ಕೋಳಿ ಉದ್ಯಮಕ್ಕೆ ಪೆಟ್ಟು ಬೀಳುತ್ತದೆ. ಆದರೆ ಚಿಕನ್ ತಿನ್ನುವುದರಿಂದ ಯಾವುದೇ ಕಾಯಿಲೆಗಳು ಬರುವುದಿಲ್ಲ, ಕೊರೊನಾ ರೋಗ ಬರುವುದಿಲ್ಲ. ಚಿಕನ್ ಮತ್ತು ಮೊಟ್ಟೆ ತಿನ್ನುವುದರಿಂದ ದೇಹಕ್ಕೆ ಪ್ರೊಟೀನ್ ಹೆಚ್ಚುತ್ತದೆ. ಇದನ್ನು ಜನರು ಮನವರಿಕೆ ಮಾಡಿಕೊಳ್ಳಬೇಕು. ಚಿಕನ್ ತಿಂದರೆ ಕೊರೊನಾ ‌ಬರುತ್ತದೆ ಎನ್ನುವುದು ಸುಳ್ಳು ಮಾತು. ದಯವಿಟ್ಟು ಇಂತಹ ಸುಳ್ಳು‌ ಸುದ್ದಿಗಳನ್ನು ನಂಬಬೇಡಿ ಎಂದು ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.