ಬೆಂಗಳೂರು: ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿರುವ ಕೆಎಸ್ಆರ್ಪಿ ತುಕಡಿ ಸಿಬ್ಬಂದಿಯನ್ನ ಕೊರೊನಾ ಬೆಂಬಿಡದೆ ಕಾಡುತ್ತಿದೆ. ಸದ್ಯ ಕೊರೊನಾ ಸೋಂಕು ದೃಢಪಟ್ಟಿರುವ ಒಂದನೇ ಕೆಎಸ್ಆರ್ಪಿ ಬೆಟಾಲಿಯನ್ ಇಂದು ತೀವ್ರ ಉಸಿರಾಟದ ತೊಂದರೆಯಿಂದ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಸಿಬ್ಬಂದಿ ಸಾವಿಗೆ ಕೆಎಸ್ಆರ್ಪಿ ಎಡಿಜಿಪಿ ಅಲೋಕ್ ಕುಮಾರ್ ಸಂತಾಪ ಸೂಚಿಸಿದ್ದಾರೆ. ಹಾಗೆ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ. ಇನ್ನು ಕೆಎಸ್ಆರ್ಪಿ ಸಿಬ್ಬಂದಿಯಲ್ಲಿ ಅಧಿಕಾವಾಗಿ ಕೊರೊನಾ ಸೋಂಕು ದಿನೇ ದಿನೆ ಹೆಚ್ಚುತ್ತಿದೆ. ಹಾಗೆ ಇಂದು ಮೂರನೇ ಮತ್ತು ನಾಲ್ಕನೇ ಬೆಟಾಲಿಯನ್ ಸಿಬ್ಬಂದಿಯಲ್ಲಿ ಒಟ್ಟು ಐವರಲ್ಲಿ ಕೊರೊನಾ ಸೋಂಕು ಧೃಢವಾಗಿದೆ. ಸದ್ಯ ಸಂಬಂಧಿಸಿದ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಇವರ ಜೊತೆ ಸಂಪರ್ಕದಲ್ಲಿರುವವರನ್ನು ಹೋಂ ಐಸೋಲೇಷನ್ ಇರುವಂತೆ ಸೂಚಿಸಲಾಗಿದೆ.