ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ 54 ವರ್ಷದ ವ್ಯಕ್ತಿ ಕೊರೊನಾ ಪಾಸಿಟಿವ್ ಬಂದ ಕಾರಣ ಬ್ಲೇಡ್ನಿಂದ ಕೈ ಮತ್ತು ಕಾಲಿನ ನರಗಳನ್ನು ತುಂಡರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮತ್ತಿಕೆರೆಯ 2 ನೇ ಮುಖ್ಯರಸ್ತೆಯ ದೇವಸಂದ್ರ ನಿವಾಸಿ ಆತ್ಮಹತ್ಯೆಗೆ ಶರಣಾದವರು. ಕೊರೊನಾ ಲಕ್ಷಣ ಇರುವ ಕಾರಣ ಇವರು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ನಿನ್ನೆ ರಾತ್ರಿ ಪಾಸಿಟಿವ್ ರಿಪೋರ್ಟ್ ಬಂದಿದೆ ಎಂದು ಆರೋಗ್ಯ ಇಲಾಖೆಯಿಂದ ಕರೆ ಬಂದಿತ್ತು. ಈ ಕುರಿತು ಫೋನ್ನಲ್ಲಿ ಮಾತನಾಡಿದ ಬಳಿಕ ಮಧ್ಯರಾತ್ರಿ ಮನೆಯ ಮಹಡಿ ಮೇಲೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಮಧ್ಯಾಹ್ನದವರೆಗೆ ಕಾಣದೆ ಇರುವುದನ್ನು ನೋಡಿದ ಅಣ್ಣನ ಮಗ ಮನೆ ಮಹಡಿ ಮೇಲೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಕೂಡಲೇ ಪೊಲೀಸರಿಗೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಎಮ್.ಎಸ್.ರಾಮಯ್ಯ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಿದ್ದಾರೆ.
ಪ್ರಾಥಮಿಕ ತನಿಖೆ ವೇಳೆ ಈತ ಯಶವಂತಪುರದಲ್ಲಿ ಬೀಡ ಅಂಗಡಿ ನಡೆಸಿ ಜೀವನ ಸಾಗಿಸುತ್ತಿದ್ದ. ಆದರೆ ಕಳೆದ ಒಂದು ವಾರದ ಹಿಂದೆ ಈತನ ಅಣ್ಣ ಸೋಂಕು ತಗುಲಿ ಐಸೊಲೇಷನ್ನಲ್ಲಿದ್ದರು. ಇವರಿಂದ ಈತನಿಗೂ ಕೊರೊನಾ ತಗುಲಿದೆ ಎಂದು ತಿಳಿದುಬಂದಿದೆ.
ಈ ಕುರಿತು ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.