ಯಲಹಂಕ: ಕೊರೊನಾ ಸೋಂಕು ಇದೀಗ ಬೆಂಗಳೂರು ಹೊರವಲಯದ ಕೈಗಾರಿಕಾ ಪ್ರದೇಶಕ್ಕೂ ವ್ಯಾಪಿಸಿದೆ. ಬೆಂಗಳೂರು ಉತ್ತರ ತಾಲೂಕಿನ ಹುಣಚೂರು ಬಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಐಗೆನ್ ಕಂಪನಿಯ ನೌಕರನಲ್ಲಿ ಕೊರೊನಾ ದೃಢವಾಗಿದೆ.
ಈ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸವನ್ನ ನಿರ್ವಹಿಸುತ್ತಿದ್ದ ರಾಜಸ್ಥಾನ ಮೂಲದ ನೌಕರ ನೆಗಡಿ ಬಂದ ಹಿನ್ನಲೆ ಕೊರೊನಾ ಟೆಸ್ಟ್ ಮಾಡಿಸಿದ್ದ. ಈತನ ವರದಿ ಕೊರೊನಾ ಪಾಸಿಟಿವ್ ಬಂದಿದೆ. ಇದೀಗ ವಿಚಾರ ತಿಳಿದ ಕಂಪನಿಯವರು ಅಲ್ಲಿ ಕೆಲಸ ಮಾಡುತ್ತಿದ್ದ 270 ಜನ ನೌಕರರನ್ನ ಕಂಪನಿಯಲ್ಲೇ ಉಳಿಸಿಕೊಂಡು ಕೊರೊನಾ ಟೆಸ್ಟ್ ಮಾಡಿಸಲು ಮುಂದಾಗಿದ್ದಾರೆ.
ಕೋವಿಡ್ ಟೆಸ್ಟ್ ಮಾಡಿ ಕ್ವಾರಂಟೈನ್ಗೆ ಕಳಿಸುವ ನಿಟ್ಟಿನಲ್ಲಿ ಕಂಪನಿಯಲ್ಲೇ ನೌಕರರು ರಾತ್ರಿಯಿಡಿ ಕಾಲ ಕಳೆದಿದ್ದು, ಎಲ್ಲರಲ್ಲೂ ಆತಂಕ ಮನೆ ಮಾಡಿದೆ. ಯಲಹಂಕ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.