ETV Bharat / state

ಕಾಲ ಭೈರವನ ಕಡೆಗೆ ನಳಿಕೆ ತಿರುಗಿಸಿದ 'ಕೋವಿ'ಡ್​': ಆದಿ ಚುಂಚನಗಿರಿಗೆ 15 ದಿನ ನೋ ಎಂಟ್ರಿ

ಮಹಾಮಾರಿ ಕೊರೊನಾ ತನ್ನ ವ್ಯಾಪ್ತಿ ವಿಸ್ತರಿಸುತ್ತಿರುವುದರಿಂದ ಆದಿಚುಂಚನಗಿರಿ ಮಠದ ಕಾಲಭೈರವೇಶ್ವರ ದರ್ಶನ ಎರಡು ವಾರಗಳ ಕಾಲ ರದ್ದಾಗಿದೆ.

dsdd
ಆದಿಚುಂಚನಗಿರಿ ಮಠಕ್ಕೂ ಕೊರೊನಾ ಭಯ,15 ದಿನ ಭಕ್ತರಿಗೆ ನೋ ಎಂಟ್ರಿ
author img

By

Published : Mar 19, 2020, 11:17 AM IST

ಬೆಂಗಳೂರು: ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾಲಭೈರವೇಶ್ವರ ದರ್ಶನಕ್ಕೆ ಮುಂದಿನ ಎರಡು ವಾರ ಭಕ್ತಾದಿಗಳು ಬರದಂತೆ ಆದಿಚುಂಚನಗಿರಿ ಸಂಸ್ಥಾನದ ಮಠದ ಜಗದ್ಗುರು ಶ್ರೀ ಡಾ‌.ನಿರ್ಮಾಲಾನಂದ ಸ್ವಾಮೀಜಿ ಭಕ್ತಾದಿಗಳಲ್ಲಿ ಮನವಿ ಮಾಡಿದ್ದಾರೆ.

ಇತ್ತೀಚೆಗೆ ವಿಶ್ವದಾದ್ಯಂತ ಹರಡಿರುವ ಕೊರೊನಾ ವೈರಸ್ ಕರ್ನಾಟಕದಲ್ಲೂ ಹರಡಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಭಕ್ತಾದಿಗಳಿಗೆ ಈ ರೀತಿ ಮನವಿ ಮಾಡಿದ್ದಾರೆ. ಅದರಲ್ಲೂ ಶನಿವಾರ ಮತ್ತು ಭಾನುವಾರ ಕಾಲಭೈರವನ ದರ್ಶನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

ಕೊರೊನಾ ಹಿನ್ನೆಲೆ ಭಕ್ತರ ಆರೋಗ್ಯದ ದೃಷ್ಟಿಯಿಂದ ನಿರ್ಮಲಾನಂದ ಸ್ವಾಮೀಜಿ ಈ ನಿರ್ಧಾರ ಕೈಗೊಂಡಿರುವುದಾಗಿ ಮಠದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.