ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 12 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಈ ಮೂಲಕ ಸೋಂಕಿತರ ಸಂಖ್ಯೆ 175ಕ್ಕೆ ಏರಿಕೆಯಾಗಿದೆ. 25 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ. ಈವರೆಗೂ ಕೊರೊನಾ ಮುಕ್ತವಾಗಿದ್ದ ಸಕ್ಕರೆನಾಡಲ್ಲಿ ಮೂವರಿಗೆ ಸೋಂಕು ಕಾಣಿಸಿಕೊಂಡಿರೋದು ಆತಂಕ ಮೂಡಿಸಿದೆ.
-
ಕರ್ನಾಟಕದಲ್ಲಿ ಇದುವರೆಗೆ 175 #COVID19 ಪ್ರಕರಣಗಳು ಖಚಿತಗೊಂಡಿದೆ. ಇಂದಿನವರೆಗೆ 25 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂಬುದು ಹರ್ಷದ ವಿಷಯವಾಗಿದೆ. ನಾಗರಿಕರು ಅನಗತ್ಯವಾಗಿ ಮನೆಯಿಂದ ಹೊರ ಬರಬಾರದೆಂದು ವಿನಂತಿಸುತ್ತೇನೆ#IndiaFightsCornona
— B Sriramulu (@sriramulubjp) April 7, 2020 " class="align-text-top noRightClick twitterSection" data="
">ಕರ್ನಾಟಕದಲ್ಲಿ ಇದುವರೆಗೆ 175 #COVID19 ಪ್ರಕರಣಗಳು ಖಚಿತಗೊಂಡಿದೆ. ಇಂದಿನವರೆಗೆ 25 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂಬುದು ಹರ್ಷದ ವಿಷಯವಾಗಿದೆ. ನಾಗರಿಕರು ಅನಗತ್ಯವಾಗಿ ಮನೆಯಿಂದ ಹೊರ ಬರಬಾರದೆಂದು ವಿನಂತಿಸುತ್ತೇನೆ#IndiaFightsCornona
— B Sriramulu (@sriramulubjp) April 7, 2020ಕರ್ನಾಟಕದಲ್ಲಿ ಇದುವರೆಗೆ 175 #COVID19 ಪ್ರಕರಣಗಳು ಖಚಿತಗೊಂಡಿದೆ. ಇಂದಿನವರೆಗೆ 25 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂಬುದು ಹರ್ಷದ ವಿಷಯವಾಗಿದೆ. ನಾಗರಿಕರು ಅನಗತ್ಯವಾಗಿ ಮನೆಯಿಂದ ಹೊರ ಬರಬಾರದೆಂದು ವಿನಂತಿಸುತ್ತೇನೆ#IndiaFightsCornona
— B Sriramulu (@sriramulubjp) April 7, 2020
ಸೋಂಕಿತರನ್ನು ಸಂಖ್ಯೆ 164 ರಿಂದ 175 ರವರೆಗೆ ಗುರ್ತಿಸಲಾಗಿದ್ದು ಅವರ ವಿವರ ಹೀಗಿದೆ:
*ರೋಗಿ-164: 33 ವರ್ಷದ ಬಾಗಲಕೋಟೆಯ ಮುಧೋಳ ನಿವಾಸಿಯಾಗಿದ್ದು, ಮಾರ್ಚ್ 13-18ರವರೆಗೆ ದೆಹಲಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ. ಸದ್ಯ ಈತನಿಗೆ ಬಾಗಲಕೋಟೆಯ ಪ್ರತ್ಯೇಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
*ರೋಗಿ -165: 41 ವರ್ಷದ ಮಹಿಳೆ ಹಾಗೂ ಬಾಗಲಕೋಟೆ ನಿವಾಸಿಯಾಗಿದ್ದು, ರೋಗಿ 125ರ ನೆರೆಹೊರೆಯವರಾಗಿದ್ದಾರೆ. ಬಾಗಲಕೋಟೆಯ ಆಸ್ಪತ್ರೆಯಲ್ಲಿ ಸೋಂಕಿತೆಗೆ ಚಿಕಿತ್ಸೆ ಮುಂದುವರಿದಿದೆ.
*ರೋಗಿ-166: ಗದಗ ಮೂಲದ 80 ವರ್ಷದ ವೃದ್ಧೆಯಾಗಿದ್ದಾರೆ. ತೀವ್ರ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದು ಗದಗ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
*ರೋಗಿ-167: 29 ವರ್ಷದ ಬೆಂಗಳೂರು ನಿವಾಸಿವಾಗಿದ್ದು ದೆಹಲಿಯ ತಬ್ಲಿಘಿ ಜಮಾತ್ನಲ್ಲಿ ಭಾಗಿಯಾಗಿದ್ದ. ಸದ್ಯ ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
*ರೋಗಿ-168: ಬೆಂಗಳೂರಿನ 50 ವರ್ಷದ ವ್ಯಕ್ತಿಗೆ ಸೋಂಕು. ಮಾರ್ಚ್ 13-18ರಂದು ದೆಹಲಿಯ ಟಿಜೆ ಧರ್ಮಸಭೆಯಲ್ಲಿ ಭಾಗಿಯಾಗಿದರು. ಬೆಂಗಳೂರಿನಲ್ಲಿ ಚಿಕಿತ್ಸೆ ಮುಂದುವರಿದೆ.
*ರೋಗಿ-169: ಬೆಂಗಳೂರು ಗ್ರಾಮಾಂತರ ಪ್ರದೇಶದ 35 ವರ್ಷ ವಯಸ್ಸಿನ ವ್ಯಕ್ತಿಯಾಗಿದ್ದು, ದೆಹಲಿಯ ತಬ್ಲಿಘಿ ಜಮಾತ್ನಲ್ಲಿ ಭಾಗಿಯಾಗಿದ್ದ. ಈಗ ಬೆಂಗಳೂರು ಗ್ರಾಮಾಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
*ರೋಗಿ-170: ಬೆಂಗಳೂರಿನ 68 ವರ್ಷದ ವ್ಯಕ್ತಿಯಾಗಿದ್ದು, ದುಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆಯಿದೆ. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
*ರೋಗಿ-171: ಮಂಡ್ಯದ 32 ವರ್ಷದ ವ್ಯಕ್ತಿಯಾಗಿದ್ದಾನೆ. 134, 135, 136, 137, 138ನೇ ಸೋಂಕಿತ ವ್ಯಕ್ತಿಗಳ ಜೊತೆ ಸಂಪರ್ಕ ಹೊಂದಿದ್ದು, ಮಂಡ್ಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
*ರೋಗಿ-172: 36 ವರ್ಷದ ಮಂಡ್ಯ ಮೂಲದವನಾಗಿದ್ದು, 134,135,136,137,138ನೇ ಸೋಂಕಿತ ವ್ಯಕ್ತಿಗಳ ಜೊತೆ ಸಂಪರ್ಕ ಹೊಂದಿದ್ದು ಮಂಡ್ಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
*ರೋಗಿ-173: ಮಂಡ್ಯದ 65 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಂಡುಬಂದಿದ್ದು 134,135,136,137,138ನೇ ಸೋಂಕಿತರ ಜೊತೆ ಸಂಪರ್ಕದಲ್ಲಿದ್ದು, ಮಂಡ್ಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
*ರೋಗಿ-174: ಕಲಬುರಗಿಯ 28 ವರ್ಷದ ಮಹಿಳೆಗೆ ಸೋಂಕು ತಗಲಿದೆ. 124ನೇ ಸೋಂಕಿತೆಯ ಜೊತೆ ಸಂಪರ್ಕದಲ್ಲಿದ್ದು, ಕಲಬುರಗಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
*ರೋಗಿ-175: ಕಲಬುರಗಿಯ 57 ವರ್ಷದ ವ್ಯಕ್ತಿಗೆ ಸೋಂಕು ಇದ್ದು, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಲಬುರಗಿಯಲ್ಲಿ ಚಿಕಿತ್ಸೆ ಮುಂದುವರೆದಿದೆ.