ETV Bharat / state

ಕೊರೊನಾ ಎಮರ್ಜೆನ್ಸಿ: ಪಾರ್ಕ್​ಗಳಿಗೆ ಬಿತ್ತು ಬೀಗ, ಬಣಗುಡುತ್ತಿವೆ ದೇವಾಲಯಗಳು

ಕರ್ನಾಟಕದಲ್ಲಿ ಒಂದು ವಾರ ಎಮರ್ಜೆನ್ಸಿ ಇದ್ದು, ಒಂದು ವಾರಗಳ ಕಾಲ ಮಾಲ್, ಥೀಯೆಟರ್​ಗಳಿಂದ ಹಿಡಿದು ಬಹುತೇಕ ಕಡೆಗಳಲ್ಲಿ ಬೀಗ ಜಡಿಯಲಾಗಿದೆ.

Corona Emergency
ಕೊರೊನಾ ಎಮರ್ಜೆನ್ಸಿ; ಪಾರ್ಕ್​ಗಳಿಗೆ ಬಿತ್ತು ಬೀಗ, ಬಣಗುಡುತ್ತಿವೆ ದೇವಾಲಯಗಳು
author img

By

Published : Mar 14, 2020, 1:24 PM IST

ಬೆಂಗಳೂರು: ಕರುನಾಡಿನಲ್ಲಿ ಕೊರೊನಾ ಎಮರ್ಜೆನ್ಸಿ ಇದ್ದು, ಒಂದು ವಾರಗಳ ಕಾಲ ಮಾಲ್, ಥೀಯೆಟರ್​ಗಳಿಂದ ಹಿಡಿದು ಬಹುತೇಕ ಕಡೆಗಳಲ್ಲಿ ಬೀಗ ಜಡಿಯಲಾಗಿದೆ.

ಕೊರೊನಾ ಎಮರ್ಜೆನ್ಸಿ; ಪಾರ್ಕ್​ಗಳಿಗೆ ಬಿತ್ತು ಬೀಗ, ಬಣಗುಡುತ್ತಿವೆ ದೇವಾಲಯಗಳು

ಇತ್ತ ಜನರು ಕೂಡ ಸ್ವಯಂ ಮುಂಜಾಗ್ರತೆಗೆ ಮುಂದಾಗಿದ್ದು, ಹಲವು ಜಾಗಗಳು ಬಣಗುಡುತ್ತಿವೆ. ಅಂದಹಾಗೆ, ನಗರದ ಹಲವು ಪಾರ್ಕ್​ಗಳಿಗೆ ಬೀಗ ಹಾಕಲಾಗಿದೆ.

ಬೆಳಗ್ಗೆ ಆದರೆ ವಾಕಿಂಗ್ ಜಾಗಿಂಗ್ ಅಂತ ಬ್ಯುಸಿ ಇರ್ತಿದ್ದವರಿಗೆ ಗೇಟ್ ಹೊರಗೆ ಬೋರ್ಡ್ ನೋಡಿಕೊಂಡು ಹೋಗುವಂತ ವಾತಾವರಣ ನಿರ್ಮಾಣವಾಗಿದೆ. ಬಿಟಿಎಂ ಲೇಔಟ್​ನಲ್ಲಿ ಇರುವ ಪಾರ್ಕ್​ಗೆ ಬೀಗ ಹಾಕಲಾಗಿದ್ದು, ಪಾರ್ಕ್ ಹೊರಗೆ ನೋಟಿಸ್​ ಬೋರ್ಡ್ ಹಾಕಲಾಗಿದೆ. ‌ಕೊರೊನಾ ವೈರಸ್​ನಿಂದಾಗಿ ಪಾರ್ಕ್ ಒಂದು ವಾರ ಕ್ಲೋಸ್​ ಇರಲಿದೆ ಎಂದು ನಮೂದಿಸಲಾಗಿದೆ.

ಇತ್ತ ದೇವಾಲಯಗಳಿಗೂ ಎಮರ್ಜೆನ್ಸಿ ಎಫೆಕ್ಟ್​ ಇದ್ದು, ನಗರದ ದೇವಸ್ಥಾನಗಳತ್ತ ಜನರು‌ ಸುಳಿಯುತ್ತಿಲ್ಲ.‌ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ನಗರದ ವಯ್ಯಾಲಿಕಾವಲ್​​​​ನಲ್ಲಿರುವ ಟಿಟಿಡಿ ದೇವಾಲಯದಲ್ಲಿ ಭಕ್ತರೇ ಇಲ್ಲದೇ ಇರುವುದು ಕಂಡು ಬಂತು. ‌ಪ್ರತಿ ಶನಿವಾರ ದೇವರ ದರ್ಶನ ಮಾಡಲು ಕ್ಯೂ ನಿಲ್ಲುತ್ತಿದ್ದ ಜನರು, ಇಂದು ಕಡಿಮೆ ಸಂಖ್ಯೆಯಲ್ಲಿ ಇರುವುದು ಕಂಡುಬಂತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.